Thursday 13 November 2014

ಶಾಲಾ ಕಲೋತ್ಸವ 2014 ಕ್ಕೆ ಚಾಲನೆಇಂದು ಸ್ಥಳೀಯ ಎಸ್..ಟಿ ಪ್ರೌಢಶಾಲೆಯ 2014 – 2015 ನೇ ಸಾಲಿನ ಶಾಲಾ ಕಲೋತ್ಸವವು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮನೋರಮಾ ಕಿಣಿಯವರ ಔಪಚಾರಿಕ ಉದ್ಘಾಟನೆಯೊಂದಿಗೆ ವಿದ್ಯುಕ್ತವಾಗಿ ಆರಂಭವಾಯಿತು. ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಲಿಲ್ಲಿ ಬಾಯಿ ಟೀಚರ್ ರವರು ಕಲೋತ್ಸವಕ್ಕೆ ಶುಭ ಕೋರಿದರು.ಪ್ರೌಢ ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ಕೃಷ್ಣ ಕುಮಾರಿ ಟೀಚರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.ವೇದಿಕೆಯಲ್ಲಿ ಪಿ.ಟಿ.ಎ ಅಧ್ಯಕ್ಷರಾದ ಶ್ರೀ ನಿತಿನ್ ಚಂದ್ರ ಪೈ,ಎಲ್.ಪಿ ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುದತಿ ಟೀಚರ್,ಸಿಬ್ಬಂದಿ ವರ್ಗದ ಕಾರ್ಯದರ್ಶಿ ನಾರಾಯಣ ಗೋಪಾಲಕೃಷ್ಣ ಹೆಗ್ಗಡೆ ಉಪಸ್ಥಿತರಿದ್ದರು.ಶಾಲಾ ಕಲೋತ್ಸವದ ಸಂಚಾಲಕರಾದ ಶ್ರೀ ವಿರೇಶ್ವರ ಭಟ್ ಸ್ವಾಗತಿಸಿದರೆ,ಕಾರ್ಯದರ್ಶಿ ನಾರಾಯಣ ಗೋಪಾಲಕೃಷ್ಣ ಹೆಗ್ಗಡೆ ವಂದಿಸಿದರು.ಇದೇ ಸಂದರ್ಭದಲ್ಲಿ ಶಾಲಾ ಕ್ರೀಡೋತ್ಸವದ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.ವಿಜೇತರ ವಿವರವನ್ನು ದೈಹಿಕ ಶಿಕ್ಷಕರಾದ ಶ್ಯಾಮ ಕೃಷ್ಣ ಪ್ರಕಾಶ್ ನೀಡಿದರು. ಆನಂತರ ವಿವಿಧ ವೇದಿಕೆಗಳಲ್ಲಿ ಕಲೋತ್ಸವದ ಸ್ಪರ್ಧೆಗಳು ಆರಂಭಗೊಂಡಿತು.ಇನ್ನೂ ಎರಡು ದಿನಗಳ ಕಾಲ ಕಾರ್ಯಕ್ರಮ ನಡೆಯಲಿರುವುದು.

No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.