Friday 14 November 2014

ಎಸ್.ಎ.ಟಿ ವಿದ್ಯಾಲಯದಲ್ಲಿ ರಕ್ಷಕರ ಸಮ್ಮೇಳನ

ನವೆಂಬರ 14 ನಮ್ಮ ವಿದ್ಯಾಲಯದಲ್ಲಿ ಸರ್ವ ಶಿಕ್ಷಾ ಅಭಿಯಾನ , ಕೇರಳ 2014-2015 ಹಕ್ಕು ಆಧಾರಿತ ಶಾಲೆ ,ಕ್ಲೀನ್ ಸ್ಕೂಲ್,ಸ್ಮಾರ್ಟ ಸ್ಕೂಲ್,ಶಿಶು ಸೌಹಾರ್ದ ಶಾಲೆ ಎಂಬ ಯೋಜನೆಯಡಿಯಲ್ಲಿ ರಕ್ಷಕರ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ಜರುಗಿತು.ಕಾರ್ಯಕ್ರಮದ ಉದ್ಘಾಟನೆಗೈದ ಮಂಜೇಶ್ವರ ಪಂಚಾಯತಿನ ವಾರ್ಡ ಮೆಂಬರ್ ಶ್ರೀ ಆನಂದ ಮಾಸ್ಟರ್ ಮಕ್ಕಳ ಪುರೋಗತಿಯಲ್ಲಿ ರಕ್ಷಕರ ಪಾತ್ರದ ಬಗ್ಗೆ ಮಾತನಾಡಿದರು. ಶಾಲಾ ಆಡಳಿತ ಮಂಡಳಿಯ ಸಲಹಾ ಸಮಿತಿ ಸದಸ್ಯೆ ಲಿಲ್ಲಿ ಬಾಯಿ ಟೀಚರ್ ಮಾತನಾಡಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ರಕ್ಷಕರ ಪಾತ್ರ ಹಿರಿದು ಎಂದರು. ಶಿಕ್ಷಕಿ ಸುಕನ್ಯಾ ಕೆ.ಟಿ ಹಾಗೂ ಶಿಕ್ಷಕ ನಾಗೇಶ್ .ವಿ ಗಣಿತ ಚಟುವಟಿಕೆ ನಡೆಸಿಕೊಟ್ಟರು.ರಕ್ಷಕ ಶಿಕ್ಷಕ ಸಂಘದ ಘನ ಅಧ್ಯಕ್ಷರಾದ ಶ್ರೀ ನಿತಿನ್ ಚಂದ್ರ ಪೈ ಅಧ್ಯಕ್ಷತೆ ವಹಿಸಿ ಪಿ.ಟಿ.ಎ ಕೈಗೊಳ್ಳಲಿರುವ ಕಾರ್ಯಗಳ ಬಗ್ಗೆ ವಿವರ ನೀಡಿದರು.ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಮನೋರಮಾ ಕಿಣಿ ಪ್ರಾಸ್ತಾವಿಕ ನುಡಿಗೈದರು. ಕಿರಿಯ ಪ್ರಾಥಮಿಕ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಪುತ್ತಬ್ಬ ಕುಂಜತ್ತೂರು,ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಸುದತಿ.ಬಿ ಉಪಸ್ಥಿತರಿದ್ದರು. ಸಿಬ್ಬಂದಿ ಕಾರ್ಯದರ್ಶಿ ಶ್ರೀ ಎನ್.ಜಿ ಹೆಗಡೆ ಸ್ವಾಗತಿಸಿದರು. ಹಿರಿಯ ಶಿಕ್ಷಕರಾದ ಶ್ರೀ ಪುಂಡಲೀಕ ನಾಯಕ್ ,ಮಹೇಶ್.ಕೆ ರಕ್ಷಕರಿಗೆ ತರಗತಿಗಳನ್ನು ನಡೆಸಿಕೊಟ್ಟರು.ರಕ್ಷಕರ ಅಹವಾಲುಗಳನ್ನು ಸ್ವೀಕರಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಪುಂಡಲೀಕ ನಾಯಕ್ ರವರು ವಂದನಾರ್ಪಣೆಗೈದರು.

No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.