Friday 7 November 2014

ಸಂಭ್ರಮದ ಕಾರ್ತಿಕ ದೀಪೋತ್ಸವ

ನಮ್ಮ ಶಾಲೆಯಲ್ಲಿ ಕಾರ್ತಿಕ ದೀಪೋತ್ಸವವು ಸಂಭ್ರಮ ಸಡಗರದೊಂದಿಗೆ ಆಚರಿಸಲ್ಪಟ್ಟಿತು. ಸಂಜೆ ಸುಮಾರು 6.15ರ ಸುಮಾರಿಗೆ ಚಿತ್ತೈಸಿದ ದೇವರು ಶಾಲೆಯಲ್ಲಿ ವಿರಾಜಮಾನರಾಗಿದ್ದ ವೇಳೆಯಲ್ಲಿ ಅಧ್ಯಾಪಕ ವೃಂದದವರಿಂದ ಭಜನಾ ಕಾರ್ಯಕ್ರಮವು ಜರುಗಿತು. ಇದೇ ಸಂದರ್ಭದಲ್ಲಿ ದೀಪಾಲಂಕಾರವನ್ನು ಮಾಡಲಾಗತ್ತು. ನಮ್ಮ ಶಾಲಾ ಶಿಕ್ಷಕಿಯಾಗಿರುವ ಶೈಲಜಾ  ಕಾಮತ್ ದೀಪೋತ್ಸವ ಸಮಯದಲ್ಲಿ ಅಗತ್ಯವಿರುವ 5 ಅಂಚಿನ ಕಂಚಿನ ದೀಪವನ್ನು ದಾನರೂಪದಲ್ಲಿ  ಶಾಲಾ ಪೂಜಾ ಕಮಿಟಿಗೆ ದೀಪ ಬೆಳಗಿಸುವುದರ ಮೂಲಕ ಹಸ್ತಾಂತರಿಸಿದರು.ಪೂಜೆಯ ಬಳಿಕ ನೆರೆದ ಭಕ್ತಾದಿಗಳಿಗೆ ಪ್ರಸಾದವನ್ನು ಹಂಚಲಾಯಿತು.

No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.