Friday 21 November 2014

ಭಾಸ್ಕರಾಚಾರ್ಯ ಸೆಮಿನಾರ್ ಪ್ರಸಂಟೇಶನ್ ಹಾಗೂ ರಾಮಾನುಜನ್ ಪೇಪರ್ ಪ್ರಸಂಟೇಶನ್ ನಲ್ಲಿ ಮಿಂಚಿದ ಪ್ರತಿಭೆಗಳು

 
ಮಂಜೇಶ್ವರ ಬಿ.ಆರ್.ಸಿಯಲ್ಲಿ ತಾರೀಕು 21-11-2014 ರಂದು ಜರುಗಿದ ಮಂಜೇಶ್ವರ ಉಪ ಜಿಲ್ಲಾ ಮಟ್ಟದ ಭಾಸ್ಕರಾಚಾರ್ಯ ಸೆಮಿನಾರ್ ಮಂಡನೆಯಲ್ಲಿ ನಮ್ಮ ಶಾಲಾ ಯು.ಪಿ ವಿಭಾಗದ ಮಾಸ್ಟರ್ ಗಿರೀಶ್.ಕೆ ಗಣಿತ ಶಾಸ್ತ್ರಕ್ಕೆ ಕೇರಳ ಗಣಿತ ಶಾಸ್ತ್ರಜ್ಞರ ಕೊಡುಗೆ ಎಂಬ ವಿಷಯದಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾನೆ. ಇವನು ಪ್ರಸಕ್ತ 7ನೇ ತರಗತಿ ವಿಧ್ಯಾರ್ಥಿಯಾಗಿದ್ದು ಶ್ರೀ ಜಯರಾಮ್ ಕಾರಂತ್ ಹಾಗೂ ಶ್ರೀಮತಿ ಮಮತಾ ದಂಪತಿಗಳ ಸುಪುತ್ರನಾಗಿದ್ದಾನೆ.ಮಂಜೇಶ್ವರ ಬಿ.ಆರ್.ಸಿಯಲ್ಲಿ ತಾರೀಕು 21-11-2014 ರಂದು ಜರುಗಿದ ಮಂಜೇಶ್ವರ ಉಪ ಜಿಲ್ಲಾ ಮಟ್ಟದ ರಾಮಾನುಜನ್ ಪೇಪರ್ ಪ್ರಸಂಟೇಶನ್ ನಲ್ಲಿ ನಮ್ಮ ಶಾಲಾ ಹೈಸ್ಕೂಲ್ ವಿಭಾಗದ ಕುಮಾರಿ ಬದ್ರುನ್ನೀಸಾ"ಅಭಿನ್ನಕ ಸಂಖ್ಯೆಗಳು' (Irrationals) ಎಂಬ ವಿಷಯದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ.ಇವಳು ಪ್ರಸಕ್ತ 10ನೇ ತರಗತಿ ವಿಧ್ಯಾರ್ಥಿನಿಯಾಗಿದ್ದು ಶ್ರೀ ಅಬ್ದುಲ್ ಸಲಾಂ ಹಾಗೂ ಶ್ರೀಮತಿ ಬೀಫಾತಿಮಾ ದಂಪತಿಗಳ ಪುತ್ರಿಯಾಗಿದ್ದಾಳೆ.


No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.