Sunday 14 August 2016


ಎಸ್..ಟಿ.ಶಾಲೆಯಲ್ಲಿ ಶಾಲಾ ಪಾಲಿ೯ಮೆಂಟು 2016-2017
11-8-2016 ಎಸ್..ಟಿ ಶಾಲೆಯಲ್ಲಿ ಶಾಲಾ ಪಾಲಿ೯ಮೆಂಟು ಚುನಾವಣೆ ಜರಗಿತು. ಪ್ರತಿ ತರಗತಿವಾರು ನಾಯಕ ಸ್ಥಾ ನಕ್ಕೆ ಸುಮಾರು 14 ತರಗತಿಗಳಲ್ಲಿ ಚುನಾವಣೆ ನಡೆಯಿತು. ಉಳಿದ ತರಗತಿಗಳಲ್ಲಿ ಅವಿರೋಧ ಆಯ್ಕೆ ನಡೆಯಿತು. ಚುನಾವಣಾ ಫಲಿತಾಂಶವನ್ನು ಅಭ್ಯಥಿ೯ಗಳು ಹಾಗೂ ವಿದ್ಯಾಥಿ೯ಗಳ ಸಮ್ಮುದಲ್ಲಿ ನಡೆಸಿ ವಿಜೇತರನ್ನು ಅಧ್ಯಾಪಕರು ಘಷಿಸಿದರು. ಚುನಾವಣಾ ಪ್ರಕ್ರಿಯೆಯು ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆಯಿತು.
12 ಗಂಟೆಗೆ ಸರಿಯಾಗಿ ಶಾಲಾ ಪಾಲಿ೯ಮೆಂಟಿನ ರಚನೆ ನಡೆಯಿತು. ಹಾಗೂ ಪ್ರಥಮ ಅಧಿವೇಶನ ನಡೆಯಿತು.ಪ್ರೌಢಶಾಲಾ ವಿಭಾಗದಿಂದ ಶಾಲಾ ನಾಯಕಿಯಾಗಿ ಕುಮಾರಿ ರೆನಿಶಾ ಡಿಸೋಜ ಹಾಗೂ ಹೈಯರ್ ಸೆಕೆಂಡರಿ ವಿಭಾಗದಿಂದ ಮಹಮ್ಮದ್ ಫಾರೂಕ್ ಆಯ್ಕೆಗೊಂಡರು.ಹಾಗೊ ವಿವಿಧ ಮಂತ್ರಿಗಳನ್ನು ಆಯ್ಕೆಗೊಳಿಸಲಾಯಿತು. ಬಳಿಕ ನಡೆದ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕೃಷ್ಣಕುಮಾರಿ ಅವರು ಪ್ರತಿಜ್ಞೆಬೋಧಿಸಿದರು. ನಂತರ ಶಾಲಾ ಶಿಸ್ತನ್ನು ಕಾಪಾಡುವಲ್ಲಿ ಮಂತ್ರಿಮಂಡಲದ ಜವಾಬ್ದಾರಿ ಯನ್ನೂಕೆಲಸಕಾಯ೯ಗಳನ್ನೂ ತಿಳಿಸಿದರು. ಚುನಾವಣೆಾ ಅಧಿಕಾರಿಯಾಗಿ ಅಧ್ಯಾಪಕ ವಿರೇಶ್ವರ ಭಟ್ ಅವರು ನಿವ೯ಹಿಸಿದರು. ಹೆಚ್ಚಿನ ಅಧ್ಯಾಪಕ , ಅಧ್ಯಾಪಕಿಯರು ಉಪಸ್ಥಿತರಿದ್ದು ಸಹಕರಿಸಿದರು. ಶಾಲಾ ನಾಯಕ ಮಹಮ್ಮದ್ ಫಾರೂಕ್ ಧನ್ಯವಾದ ನೀಡಿದರು.

No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.