Sunday 7 August 2016


ಎಸ್..ಟಿ.ಹೈಯರ್ ಸೆಕೆಂಡರಿ ಶಾಲೆ ರಕ್ಷಕ ಶಿಕ್ಷಕ ಸಂಘದ ಮಹಾಸಭೆ
ಮಂಜೇಶ್ವರ: ಎಸ್..ಟಿ.ಹೈಯರ್ ಸೆಕೆಂಡರಿ ಶಾಲೆ ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಶಾಲಾ ಸಭಾಂಗಣದಲ್ಲಿ ಜರಗಿತು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಅಬ್ದುಲ್ ಬಶೀರ್.ಬಿ. ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಗ್ರಾಮ ಪಂಚಾಯತು ಸದಸ್ಯೆ
ಸುಪ್ರಿಯಾ ಶೆಣೈ ಶುಭ ಹಾರೈಸಿದರು. ಸಂಘದ ಉಪಾಧ್ಯಕ್ಷೆ ಜಯಶ್ರೀ, ಸಮಿತಿ ಸದಸ್ಯರಾದ ಮೊೈದಿನ್ ಕುಞಿ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದಭ೯ದಲ್ಲಿ 2016-2017ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಸವಾ೯ನು ಮತದೊಂದಿಗೆ ಆರಿಸಲಾಯಿತು. ಮತ್ತು ನೂತನ ಮಧ್ಯಾಹ್ನದ ಊಟದ ಸಮಿತಿಯನ್ನು ರೂಪೀಕರಿಸಲಾಯಿತು. ಅಧ್ಯಾಪಕರಾದ ಕಿರಣ್ ಕುಮಾರ್ ,ಶ್ಯಾಮ ಕೃಷ್ಣ ಪ್ರಕಾಶ್ ಹಾಗೂ ಶಾಂತಾರಾಮ್ ಶಾಲೆಗೆ ಸಂಬಂಧ ಪಟ್ಟಂತಹ ಮಾಹಿತಿಯನ್ನು ನೀಡಿದರು.
ಅಧ್ಯಾಪಕ ಗಣೇಶ್ ಪ್ರಸಾದ್ ನಾಯಕ್ ಪ್ರಾಥ ೯ನೆ ಹಾಡಿದರು. ಹಿರಿಯ ಅಧ್ಯಾಪಕಿ ಕೃಷ್ಣಕುಮಾರಿ ಸ್ವಾಗತಿಸಿದರು. ಸಂಘದ ಕಾಯ೯ದಶಿ೯ ಶ್ರೀಮತಿ ಮನೋರಮ ಕಿಣಿ ವಾಷಿ೯ಕ ಲೆಕ್ಕ ಪತ್ರವನ್ನು ಮಂಡಿಸಿದರು. ಅಧ್ಯಾಪಕ ಕಿರಣ್ ಕುಮಾರ್ ವಂದಿಸಿದರು. 2016-17 ನೇ ಸಾಲಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಅಬ್ದುಲ್ ಬಶೀರ್.ಬಿ ಅವರು ಪುನರಾಯ್ಕೆಗೊಂಡರು. ಮತ್ತು ಉಪಾಧ್ಯಕ್ಷರಾಗಿಮೊೈದಿನ್ ಕುಂಞಿ ಆಯ್ಕೆಯಾದರು.
No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.