Thursday 11 August 2016




ಸ್ವಾ ಸ್ಥ್ಯ ಸಂಕಲ್ಪ ಯೋಜನೆ ಕಾಯ೯ಕ್ರಮ

ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಇದರ ಆಶ್ರಯದಲ್ಲಿ ತಾರೀಕು 4.8.2016 ರಂದು ಎಸ್..ಟಿ ಶಾಲೆಯ ಅನಂತ ವಿದ್ಯಾ ಸಭಾಂಗಣದಲ್ಲಿ ಸ್ವಾ ಸ್ಥ್ಯ ಸಂಕಲ್ಪ ಯೋಜನೆ ಕಾಯ೯ಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾಸರಗೋಡು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಗೋಪಾಲ ಶೆಟ್ಟಿ ಅರಿಬೈಲು ದೀಪ ಬೆಳಗಿಸಿ ಉದ್ಘಾಟಿಸಿದರು.
ದುಶ್ಚಟಗಳಿಂದ ಆಗುವ ಅನಾಹುತಗಳ ಕುರಿತಾಗಿ ತಿಳಿಸಿ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಈಶ್ವರ ಮಾಸ್ಟರ್ ಕುಂಜತ್ತೂರು ಪ್ರೌಢಶಾಲೆಯ ನಿವೃತ್ತ ಅಧ್ಯಾಪಕರು ಸ್ವಾ ಸ್ಥ್ಯ ಸಂಕಲ್ಪ ಯೋಜನೆಯ ಕಾಯ೯ಕಲಾಪಗಳನ್ನು ಸವಿವರವಾಗಿ ತಿಳಿಸಿದರು. ಕಾಯ೯ಕ್ರಮದ ಅಧ್ಯಕ್ಷತೆಯನ್ನು ಪ್ರಭಾರ ಮುಖ್ಯೋಪಾಧ್ಯಾಯಿನಿ
ಕೃಷ್ಣಕುಮಾರಿ ಟೀಚರ್ ವಹಿಸಿದ್ದರು. ಯೋಜನೆಯ ಕಾಯ೯ಕತೆ೯ಯರಾದ ಸುನೀತ, ಅನಿತ,ಸುರೇಖ, ಉಪಸ್ಥಿತರಿದ್ದರು.
ಸುರೇಖ ಕಾಯ೯ಕ್ರಮವನ್ನು ನಿರೂಪಿಸಿದರು. ಅಧ್ಯಾಪಕರಾದ ಜಿ ವಿೀರೇಶ್ವರಭಟ್ ಸ್ವಾಗತಿಸಿ ದಾಸಪ್ಪ ರೈ ವಂದಿಸಿದರು.

No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.