Tuesday, 30 August 2016



ಎಸ್..ಟಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ
    ಮಂಜೇಶ್ವರ ಅಗೋಸ್ಟ್ 15 ರಂದು ಎಸ್..ಟಿ ಶಾಲೆಯಲ್ಲಿ 70ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಪ್ರಬಂಧಕರಾದ ಶ್ರೇಯುತ ದಿನೇಶ್ ಶೆಣೈ ಅವರು ಧ್ವಜಾರೋಹಣಮಾಡಿ ಶುಭ ಹಾರೈಸಿದರು. ಅನಂತರ ಶಾಲಾ ಮುಖೋಪಾಧ್ಯಾಯಿನಿ ಶ್ರೇಮತಿ ಮನೋರಮ ಕಿಣಿ ಹಾಗೂ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಅಬ್ದುಲ್ ಬಶೇರ್ ಅವರು ಶುಭ ಸಂದೇಶವನ್ನು ನೀಡಿದರು.
    ನಂತರ ಸ್ಕೌಚ್ ಮತ್ತು ಗೈಡ್ ದಳಗಳಿಂದ ಆಕಷ೯ಕ ಕವಾಯತು ನಡೆಯಿತು. ಕಳೆದಸಾಲಿನ ಮಾಚ್೯ SSLC ಪರೀಕ್ಷೆಯಲ್ಲಿ ಎ+ ಹಾಗೂ ಎ ಗ್ರೇಡ್ ನೊಂದಿಗೆ ತೇಗ೯ಡೆಯಾದ ವಿದ್ಯಾಥಿ೯ನಿಯರನ್ನು ಶಾಲಾ ಪ್ರಬಂಧಕರು ಸನ್ಮಾನಿಸಿದರು. ನಂತರ ಛದ್ಮವೇಷ ಸ್ಪಧೆ೯ ನಡೆಯಿತು. ನಂತರ ವಿದ್ಯಾಧಿ೯ಗಳು ದೇಶಭಕ್ತಿಗೀತೆ ಗಳನ್ನು ಹಾಡಿದರು.
ಸ್ಪಧೆ೯ಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಎಲ್ಲಾಅಧ್ಯಾಪಕ ಅಧ್ಯಾಪಕಿಯರು ಉಪಸ್ಥಿತರಿದ್ದರು. ಅಧ್ಯಾಪಕ ರಾದ ಜಿ .ವೀರೇಶ್ವರಭ಼ಟ್ ಕಾಯ೯ಕ್ರಮವನ್ನು ನಿರೂಪಿಸಿದರು. ದಾಸಪ್ಪ ರೈ ಸರ್ ಅವರು ವಂದಿಸಿದರು. ನಂತರ ಸಿಹಿತಿಂಡಿಯನ್ನು ವಿತರಿಸಲಾಯಿತು.ರಾಷ್ರ್ಟಗೀತೆಯೊಂದಿಗೆ ಕಾಯ೯ಕ್ರಮ ಕೊನೆಗೊಂಡಿತು.
                                INDEPENDENCE DAY 2016

No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.