Saturday, 20 July 2019

ಎಸ್. ಎ.ಟಿ ಪ್ರೌಢಶಾಲೆಯ ವಿದ್ಯಾರ್ಥಿಗಳು ನೇಜಿ ನೆಡುವ ಮೂಲಕ ಕೃಷಿಯ ಮಹತ್ವದ ಬಗ್ಗೆ ಮಾಹಿತಿ ಪಡೆದರುತಾರೀಕು 12/7/19 ರಂದು ಮಂಜೇಶ್ವರದ ಎಸ್ ಎ ಟಿ ಶಾಲೆಯ ಸ್ಕೌಟ್ ಗೈಡ್ ದಳದ ವಿದ್ಯಾರ್ಥಿಗಳಿಗೆ ಕೃಷಿಯಲ್ಲಿ ಒಲವು ಮೂಡಿಸುವ ಉದ್ದೇಶದಿಂದ ಶ್ರೀಮದ್ ಅನಂತೇಶ್ವರ ದೇವಳದ ಗದ್ದೆಯಲ್ಲಿ  ಮಕ್ಕಳೊಂದಿಗೆ ನೇಜಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
      ಕೃಷಿಕರಾದ ಸದಾಶಿವ ಮೂಲ್ಯರ ನೇತೃತ್ವದಲ್ಲಿ ಮಕ್ಕಳು ನೇಜಿನೆಡುವ ಪ್ರಾತ್ಯಕ್ಷಿಕೆ ಪಡೆದರು.ಈ ಸಂದರ್ಭದಲ್ಲಿ ಮಂಜೇಶ್ವರದ ಸಹಾಯಕ ಕೃಷಿ ಅಧಿಕಾರಿಯಾದ ಶ್ರೀ ಶಶೀ0ದ್ರನ್ ಮತ್ತು ಶಿವಪ್ರಸಾದ್ ಕೃಷಿಯಬಗ್ಗೆ ಹೆಚ್ಚಿನ ಮಾಹಿತಿಯನ್ನು ಮಕ್ಕಳಿಗೆ ನೀಡಿದರು. ಶಾಲೆಯ ಪ್ರಾಂಶುಪಾಲರಾದ ಶ್ರೀ ಮುರಳಿಕೃಷ್ಣ ಎನ್ ,ಗೈಡ್ ಅಧ್ಯಾಪಿಕೆಯರಾದ  ಶ್ರೀಮತಿ ಸುಕನ್ಯಾ ಕೆ ಟಿ ,ಶ್ರೀಮತಿ ಉಷಾ ಕುಮಾರಿ ,ಸ್ಕೌಟ್ ಅಧ್ಯಾಪಕ  ಶ್ರೀ ಲಕ್ಷ್ಮೀ ದಾಸ್ ಪ್ರಭು ಸಹಕರಿಸಿದರು.

No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.