Tuesday 30 September 2014

ಎಸ್ ಎ ಟಿ ಪ್ರೌಢ ಶಾಲೆಯಲ್ಲಿ ನಾಡ ಹಬ್ಬ ದಸರಾದ ಆಚರಣೆಮಂಜೇಶ್ವರ – ಎಸ್..ಟಿ ವಿದ್ಯಾಲಯದಲ್ಲಿ ನಾಡ ಹಬ್ಬ ದಸರ ವನ್ನು ಬಹಳ ವಿಜೃಭಣೆಯಿಂದ ಆಚರಿಸಲಾಯಿತು. ಮಂಜೇಶ್ವರದ ಶ್ರೀಮತ್ ಅನಂತೇಶ್ವರ ದೇವಳದ ಕೋಶಧಿಕಾರಿಯಾದ ಸುರೇಶ್ ಶೆಣೈ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರೌಢ ಶಾಲಾ ವಿಭಾಗದ ಪ್ರಭಾರ ಮುಖ್ಯೋಪಾಧ್ಯಾಯಿನಿ ಕೆ. ಕೃಷ್ಣ ಕುಮಾರಿ ಟೀಚರ್ ಅಧ್ಯಕ್ಷತೆ ವಹಿಸಿದರು. ವಿದ್ಯಾರ್ಥಿಗಳಿಂದ ಕುವೆಂಪು ರಚಿಸಿದ ನಾಡಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಮಕ್ಕಳಿಂದ ವಿವಿಧ ರೀತಿಯ ವಿನೋದಾವಳಿಗಳು ನಡೆಯಿತು. ಈ ಸಂದರ್ಭದಲ್ಲಿ ಪ್ರೌಢ ಶಾಲಾ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ನಿತಿನ್ ಚಂದ್ರ ಪೈ , ಶಾಲಾ ಆಡಳಿತ ಮಂಡಳಿಯ ಸಲಹ ಸಮಿತಿಯ ಸದಸ್ಯೆ ಲಿಲ್ಲಿ ಬಾಯಿ ಟೀಚರ್ , ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸುದತಿ ಟೀಚರ್, ವಿದ್ಯಾರಂಗ ಸಾಹಿತ್ಯ ವೇದಿಕೆಯ ಸಂಚಾಲಕರಾದ ಪರಮೇಶ್ವರಿ ಟೀಚರ್, ಶಾಲಾ ನಾಡಹಬ್ಬದ ಸಂಯೋಜಕರಾದ ಕಿರಣ್ ಕುಮಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯಾದ ಕುಮಾರಿ ನಿಶ್ಮಿತ ಸ್ವಾಗತಿಸಿದಳು,ಕು ಆಯಿಷತ್ ಸಫ್ ವಾನ ಕಾರ್ಯಕ್ರಮವನ್ನು ನಿರೂಪಿಸಿದಳು.

No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.