Thursday, 2 October 2014

ಗಾಂಧಿ ಪನೋರಮಕ್ಕೆ ಚಾಲನೆ.


ಎಸ್ .. ಟಿ ಪ್ರೌಢ ಶಾಲೆಯಲ್ಲಿ ಗಾಂಧಿ ಪನೋರಮಕ್ಕೆ ಚಾಲನೆ.
ಮಂಜೇಶ್ವರ – ಅಕ್ಟೋಬರ್ - 02 ಗಾಂಧಿಜಯಂತಿಯ ಶುಭ ಸಂದರ್ಭದಲ್ಲಿ ವಿನೋಬಾ ವೆಂಕಟೇಶ್ ರಾವ್ ಶಾಂತಿ ಸೇನಾ ಫೌಂಡೇಶನ್ . ರಿ . ಮಂಜೇಶ್ವರ ಮತ್ತು ಗಾಂಧಿ ಮೀಡಿಯಾ ಫೌಂಡೇಶನ್ ತಿರುವನಂತಪುರ ಇವರ ಆಶ್ರಯದಲ್ಲಿ ಮಕ್ಕಳಿಂದಲೇ ಚಿತ್ರೀಕರಣಗೊಂಡ ಗಾಂಧಿ ಪನೋರಮ ಚಲನ ಚಿತ್ರದ ಮಂಜೇಶ್ವರ ಬ್ಲಾಕ್ ಮಟ್ಟದಲ್ಲಿ ಮಂಜೇಶ್ವರ ಬ್ಲಾಕ್ ಉಪಾಧ್ಯಕ್ಷರಾದ ಹರ್ಷದ್ ವರ್ಕಾಡಿಯವರು ಚಾಲನೆ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧಾಯನಿಯಾದ ಮನೋರಮ ಕಿಣಿ ವಹಿಸಿದರು. ಈ ಸಂದರ್ಭದಲ್ಲಿ ವಿನೋಬಾ ವೆಂಕಟೇಶ್ ರಾವ್ ಶಾಂತಿ ಸೇನಾ ಫೌಂಡೇಶನ್ . ರಿ . ಮಂಜೇಶ್ವರ ಇದರ ಕೋಶಾಧಿಕಾರಿಯಾದ ದಿವಾಕರ್ ಎಸ್.ಜೆ. , ಮಂಜೇಶ್ವರ ಪಂಚಾಯತ್ ಸದಸ್ಯರಾದ ಆನಂದ ಮಾಸ್ಟರ್ , ಲಿಲ್ಲಿ ಬಾಯಿ ಟೀಚರ್ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕರಾದ ಶಿವಾನಂದ ಅರಿಬೈಲ್ ಸ್ವಾಗತಿಸಿದರು, ನಾಗೇಶ್ ವಿ ವಂದಿಸಿದರು, ಕಿರಣ್ ಕುಮಾರ್ ಕಾರ್ಯಕ್ರಮವನ್ನು ಸಂಯೋಜಿಸಿದರು., ಶಾಂತಾರಾಮ್ ಎಸ್. ಕಾರ್ಯಕ್ರಮವನ್ನು ನಿರೂಪಿಸಿದರು. ಸುಮಾರು ಒಂದುವರೆಗಂಟೆಗಳಕಾಲ ಚಲನಚಿತ್ರಗಳನ್ನು ವಿದ್ಯಾರ್ಥಿಗಳು ಕುತೂಹಲದಿಂದ ವಿಕ್ಷಿಸಿದರು.

No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.