Thursday 14 August 2014

Standard Ten Enrichment Programme in Schools


10ನೇ ತರಗತಿಯ ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕಾಗಿ 10ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆಯು ಎಸ್..ಟಿ ಶಾಲೆಯ ಅನಂತ ವಿದ್ಯಾ ಸಭಾಂಗಣದಲ್ಲಿ ಜರುಗಿತು. ಸುಮಾರು 2.30ಕ್ಕೆ ಶಾಲಾ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯು ಶ್ರೀಮತಿ ಲಿಲ್ಲಿ ಬಾಯಿ ಟೀಚರ್ ಇವರಿಂದ ಉದ್ಘಾಟನೆಗೊಂಡು ವಿದ್ಯಾರ್ಥಿಗಳ ಭವಿಷ್ಯದ ಕುರಿತು ವಿಮರ್ಶಿಸಿ ಸಮಾಜದ ದುಷ್ಟ ನಡವಳಿಕೆಗಳನ್ನು ಅಳವಡಿಸಿಕೊಳ್ಳದೇ ಉತ್ತಮ ವಿದ್ಯಾರ್ಥಿಗಳಾಗಬೇಕೆಂದು ಕಿವಿ ಮಾತು ಹೇಳಿದರು.ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಮನೋರಮಾ ಕಿಣಿಯವರು ಪ್ರಾಸ್ತಾವಿಕ ಮಾತುಗಳನ್ನು ನುಡಿದು ಶಾಲೆಯು ಉತ್ತಮ ಫಲಿತಾಂಶದೊಂದಿಗೆ ಅಭಿವೃದ್ಧಿಹೊಂದಲು ಎಲ್ಲರ ಸಹಕಾರವನ್ನು ಯಾಚಿಸಿದರು.ಕಳೆದ ವರ್ಷದ ಎಸ್.ಎಸ್.ಎಲ್.ಸಿ ಫಲಿತಾಂಶದ ವಿಶ್ಲೇಷಣೆಯನ್ನು ಸಭೆಯ ಮುಂದಿಟ್ಟ ಶ್ರೀಮತಿ ವಸುಧಾಲಕ್ಷ್ಮೀ ಟೀಚರ್ ರವರು ಈ ವರ್ಷದ ಫಲಿತಾಂಶ ಉತ್ತಮ ಪಡಿಸಲು ರಕ್ಷಕರ ಪಾತ್ರದ ಬಗ್ಗೆ ವಿವರಿಸಿದರು.STEPS ಯೋಜನೆಯ ಬಗ್ಗೆ ಸಭೆಗೆ ಅಧ್ಯಾಪಕರಾದ ಪೂರ್ಣಯ್ಯ ಪುರಾಣಿಕರು ಸವಿವರವಾಗಿ ವಿವರಿಸಿದರು. ಮನೆ ಸರ್ವೆಯ ವಿಶ್ಲೇಷಣಾ ವರದಿಯನ್ನು ಶ್ರೀಮತಿ ಆರತಿ ಟೀಚರ್ ರವರು ಸಭೆಯ ಮುಂದಿಟ್ಟು ಮಕ್ಕಳ ಕಲಿಕೆಯ ಕಡೆಗೆ ಹೆಚ್ಚು ಗಮನ ಕೊಡುವಂತೆ ಕರೆ ನೀಡಿದರು.ಕ್ಲಾಸ್ ಪರೀಕ್ಷೆಯ ಗ್ರೇಡಿನ ವಿಶ್ಲೇಷಣಾ ಪಟ್ಟಿಯನ್ನು ಸಭೆಯ ಮುಂದಿಟ್ಟು ಕಲಿಕೆಯಲ್ಲಿ ಹಿಂದೆ ಇರುವ ಮಕ್ಕಳ ಕಡೆಗೆ ಗಮನ ಹರಿಸಬೇಕಾದ ಅಗತ್ಯತೆಯ ಬಗ್ಗೆ ಹೇಳಿದರು.SSLC ಫಲತಾಂಶ 2014-15 ಕಾರ್ಯಯೋಜನೆಯನ್ನು ಶ್ರೀ ಶಿವಾನಂದ ಅರಿಬೈಲು ಇವರು ಮಂಡಿಸಿದರು .
ಮನೆ ಸರ್ವೆಯ ವಿಶ್ಲೇಷಣಾ ಪಟ್ಟಿಯ ಆಧಾರದಲ್ಲಿ ಈ ಕೆಳಗಿನ ಸಲಹೆಗಳು ಮಕ್ಕಳ ರಕ್ಷಕರ ಕಡೆಯಿಂದ ಬಂದವು.
. ಮಕ್ಕಳು ಕಲಿಕೆಯಲ್ಲಿ ಹಿಂದಿರುವ ವಿಷಯವನ್ನು ನೆರೆಹೊರೆಯವರ ಸಹಾಯದಿಂದ ಕಲಿಸುವುದು.
 • ಹೆತ್ತವರು T.V ನೋಡುವುದನ್ನು ನಿಲ್ಲಿಸಬೇಕು.
 • ಮನೆಯಲ್ಲಿರುವ ದೊಡ್ಡ ಮಕ್ಕಳಲ್ಲಿಯೂ ನಿಗಾವಹಿಸುವಂತೆ ಹೇಳುವುದು.
 • ಸಮಯಕ್ಕೆ ಸರಿಯಾಗಿ ಶಾಲೆಗೆ ಕಳುಹಿಸುವುದು.
 • ಬೆಳಿಗ್ಗೆ 5 ಗಂಟೆಗೆ ಎಬ್ಬಿಸಿ ಓದಿಸುವುದು.
 • ರಜಾ ದಿನಗಳಲ್ಲಿ ಓದುವಂತೆ ನೋಡಿಕೊಳ್ಳುವುದು.
 • ಪೂರಕ ಸಾಮಾಗ್ರಿಗಳನ್ನು ಒದಗಿಸುವುದು.
 • ತಿಂಗಳಿಗೊಮ್ಮೆ ಪರೀಕ್ಷೆ,ಕ್ಲಾಸ್ P.T.A ನಡೆಸುವುದು.
 • ಸಂಪನ್ಮೂಲ ವ್ಯಕ್ತಿಗಳಿಂದ ಕ್ಲಾಸುಗಳನ್ನು ನಡೆಸುವುದು.
 • ಕೆರಿಯರ್ ಗೈಡೆನ್ಸ್ ಕ್ಲಾಸುಗಳನ್ನು ನಡೆಸುವುದು.
 • ಶನಿವಾರ ತರಗತಿ ನಡೆಸುವ ಬಗ್ಗೆ ಯೋಜನೆ.
 • ಮನೆ ಸಂದರ್ಶನ.
 • ದಿನಂಪ್ರತಿ ಒಂದೊಂದು ಪಾಠದ ಕುರಿತು ಒಂದು ಪುಟ ಬರೆದು ತೋರಿಸುವಂತೆ ಮಾಡುವುದು.

  ಕೈಗೊಂಡ ನಿರ್ಣಯಗಳು
  1 ದಿನಂಪ್ರತಿ ಒಂದೊಂದು ಪಾಠದ ಕುರಿತು ಒಂದು ಪುಟ ಬರೆದು ತೋರಿಸುವಂತೆ ಮಾಡುವುದು.
  2 ಕ್ಲಾಸ್ ಪರೀಕ್ಷೆಗೆ ತಡವಾಗಿ ಬರುವವರು,ಕ್ಲಾಸಿಗೆ ತಡವಾಗಿ ಬರುವವರು,ಕೋಚಿಂಗ್ ಕ್ಲಾಸಿಗೆತಡವಾಗಿ ಬರುವವರನ್ನು ಕಾರಣ ಕೇಳಿ ಪರೀಕ್ಷೆಗೆ ಒಂದನೇ ಸಲ ಎಚ್ಚರಿಕೆಯನ್ನಿತ್ತು ಅವಕಾಶವನ್ನು ನೀಡುವುದು. ಮತ್ತೂ ತಡವಾಗಿ ಬಂದಲ್ಲಿ ರಕ್ಷಕರ ಬರಲು ಹೇಳಿ ಇನ್ನು ಮುಂದೆ ಹಾಗೆ ಆಗದಂತೆ ನೋಡಿಕೊಳ್ಳುವುದು. ಕಡೆಗೂ ಇದೇ ಪ್ರವೃತ್ತಿ ಮುಂದುವರೆದಲ್ಲಿ P.T.Aಯವರ ಗಮನಕ್ಕೆತರುವುದು.ಮುಂದಿನ ಕ್ರಮವನ್ನು ಕೈಗೊಳ್ಳುವರೇ ಆಗಿರುತ್ತಾರೆ.
  3 D ಗ್ರೇಡಿನ ಮಕ್ಕಳ ಶಿಕ್ಷಣದ ಜವಾಬ್ಧಾರಿಯನ್ನು ಮನೆಯಲ್ಲಿ ಹೆತ್ತವರೇ ನೋಡಿಕೊಳ್ಳುವುದು. ಶಾಲೆಯ ವೇಳಾ ಪಟ್ಟಿಯಂತೆ ಮನೆಯಲ್ಲಿಯೂ ಕೂಡಾ ವೇಳಾ ಪಟ್ಟಿಯನ್ನು ಮಾಡಿಕೊಂಡು ಓದುವಂತೆ ನೋಡಿಕೊಳ್ಳುವುದು.
  4 ಹೆತ್ತವರು ಕಾಳಜಿ ವಹಿಸುವುದು.
  5 ಯಾವುದೇ ಸಮಸ್ಯೆಇದ್ದಲ್ಲಿ ಟೀಚರುಗಳಲ್ಲಿ ಮುಖತಃ ಚರ್ಚಿಸಿ ಪರಿಹಾರಗಳನ್ನು ಕಂಡುಕೊಳ್ಳುವುದು.
  6 ಬೇಕಾದ ಎಲ್ಲಾ ಸಹಾರಗಳನ್ನು P.T.A ನೀಡುತ್ತದೆ.
  7 ಇಂದಿನ ಸಭೆಯಲ್ಲಿ ಗೈರು ಹಾಜರಾದ ಹೆತ್ತವರು ತಾರೀಕು 18-08-2014 ರಂದುಶಾಲೆಗೆ ಬಂದು ಕ್ಲಾಸು ಅಧ್ಯಾಪಕರನ್ನು ಕಂಡು ವಿಷಯಗಳನ್ನು ತಿಳಿದುಕೊಳ್ಳಬೇಕು.ತದನಂತರವೇ ಮಕ್ಕಳನ್ನು ಕ್ಲಾಸುಗಳಿಗೆ ತೆಗೆದುಕೊಳ್ಳವುದೆಂದು ತೀರ್ಮಾನಿಸಲಾಯಿತು.ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ರಕ್ಷಕ ಸಭೆಗಳಲ್ಲಿಎಲ್ಲಾ ರಕ್ಷಕರುಹಾಜರಿರಬೇಕು.
  ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ನಿತಿನ್ ಚಂದ್ರ ಪೈಯವರು ಮಾತನಾಡಿ ಸಾಂಘಿಕ ಪ್ರಯತ್ನದಲ್ಲಿ ಎಂದೆಂದಿಗೂ ಸಫಲತೆ ಇದೆ ಎಂದು ನುಡಿದು ರಕ್ಷಕ ಶಿಕ್ಷಕ ಸಂಘದ ಎಲ್ಲಾ ಸಹಕಾರವನ್ನು ವಾಗ್ಧಾನ ಮಾಡಿದರು.ಸಭೆಯಲ್ಲಿ ಉಪಾಧ್ಯಕ್ಷರಾದ ಶ್ರೀಮತಿ ಹೇಮಲತಾ,ಶ್ರೀ ರಮಾನಂದ ಶೆಟ್ಟಿ,ಮೊಹಮ್ಮದ್ ಮುಸ್ತಾಫಾ,ಬೀಫಾತಿಮಾ ಮತ್ತಿತರರು ಸಲಹೆ ಸೂಚನೆಗಳನ್ನು ಇತ್ತು ರಕ್ಷಕರ ಜವಾಬ್ದಾರಿಗಳನ್ನು ಸಭೆಯ ಮುಂದಿಟ್ಟರು.ಎಸ್.ಆರ್.ಜಿ ಸಂಚಾಲಕರಾದ ಶ್ರೀ ಕಿರಣ್ ಕುಮಾರ್ ರವರು ರಕ್ಷಕರ ಉಪಸ್ಥಿತಿಯನ್ನು ಅವಲೋಕನ ಮಾಡಿ ತುಂಬಾ ರಕ್ಷಕರ ಗೈರು ಹಾಜರಿಯನ್ನು ಸಭೆಯ ಗಮನಕ್ಕೆತಂದುಕೊಟ್ಟು, ಧನ್ಯವಾದದೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.

No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.