Wednesday 25 June 2014

ಪ್ರವೇಶೋತ್ಸವ 2014-2015
ಮಂಜೇಶ್ವರ ಪಂಚಾಯತ್ ಮಟ್ಟದ ಶಾಲಾ ಪ್ರವೇಶೋತ್ಸವ ೨. . ೨೦೧೪ ಸೋಮವಾರ ಎಸ್. ಎ.  ಟಿ ಶಾಲೆಯಲ್ಲಿ ಯಶಸ್ವಿಯಾಗಿ ಜರಗಿತು. ಬೆಳಗ್ಗೆ ೧೦ ಗಂಟೆಗೆ ಸರಿಯಾಗಿ ಶಾಲಾ ಆಸೆಂಬ್ಲಿ ಸೇರಲಾಯಿತು. ಅದರಲ್ಲಿ ಸರಕಾರ ನೀಡಿದಂತಹ ಪ್ರತಿಜ್ಞೆಯನ್ನು ಭೋದಿಸಲಾಯಿತು.

             ಬಳಿಕ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳನ್ನು ಶಾಲಾಬ್ಯಾಂಡ್ ನೊಂದಿಗೆ ಶಾಲಾಪರಿಸರದಿಂದಮೆರವಣಿಗೆಯಮೂಲಕಶಾಲಾಸಭಾಂಗಣಕ್ಕೆ ಕರೆತರಲಾಯಿತು.ಮೆರವಣಿಗೆಯಲ್ಲಿಮಕ್ಕಳಹಕ್ಕುಸಂರಕ್ಷಣೆಗೆ ಸಂಬಂಧಿಸಿದ ಘೋಷಣಾವಾಕ್ಯಗಳನೊಳಗೊಂಡ ಫಲಕಗಳನ್ನು ಹಿಡಿದು ಘೋಷಣೆಯನ್ನು ಕೂಗುತ್ತಾ ಶಾಲಾಪರಿಸರದಲ್ಲಿ ಮೆರವಣಿಗೆ ಸಾಗಿಬಂತು.ಬಳಿಕ ೧೦.೩೦ಕ್ಕೆ ಸರಿಯಾಗಿ ಅನಂತ ವಿದ್ಯಾ ಸಭಾಂಗಣದಲ್ಲಿ ಸಭಾಕಾರ್ಯಕ್ರಮ ಆರಂಭವಾಯಿತು.ಮಂಜೇಶ್ವರ ಗ್ರಾಮ ಪಂಚಾಯತ್ ನ ವಾರ್ಡ್ ಸದಸ್ಯರಾದ ಶ್ರೀಯುತ ಆನಂದ ಮಾಸ್ಟರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಮನೋರಮ ಕಿಣಿ ಸ್ವಾಗತಿಸಿದರು ಬಿ. ಆರ್.ಸಿ ತರಬೇತಿದಾರರಾದ ಶ್ರೀಮತಿ ರಮ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಕ್ಕಳ ಹಕ್ಕು ಮತ್ತು ಸಂರಕ್ಷಣೆಗ, ಮಕ್ಕಳಿಗೆ ನಿರ್ಭಯ ವಾತವರಣ ಇದರ ಬಗ್ಗೆ ಯೋಗ್ಯ ಮಾಹಿತಿಯನ್ನು ನೀಡಿದರು.ಶಿಕ್ಷಕ ಶ್ರೀಯುತ ಪುಂಡಲಿಕ ನಾಯಕ್ ಅವರು ಶಿಕ್ಷಣ ಸಚಿವರ ಸಂದೇಶವನ್ನು ವಾಚಿಸಿದರು. ಮಂಜೇಶ್ವರ ಗ್ರಾಮ ಪಂಚಾಯತ್ ನ ವಾರ್ಡ್ ಸದಸ್ಯರಾದ ಶ್ರೀಯುತ ಆನಂದ ಮಾಸ್ಟರ್ ಹೂವಿನ ತಟ್ಟೆಯಿಂದ ಪುಸ್ತಕವನ್ನು ಹೊರತೆಗೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತಾಡಿದ ಅವರು ಎಲ್ಲಾ ಮಕ್ಕಳು ಒಂದೇ ರೀತಿಯಲ್ಲಿ ಇರುವುದಿಲ್ಲ ಕೇಲವರಲ್ಲಿ ಜಡತ್ವ , ಆತಂಕ ಇರುತ್ತದೆ. ಮೊದಲ ದಿನವೇ ಅದನ್ನು ಹೊಗಲಾಡಿಸಿ ಎಲ್ಲರೂ ಕಲಿಯುವಂತಾಗಬೇಕು ಎ೦ದು ಹಾರೈಸಿದರು.

ಕುಮಾರಿ ಶೈಲಜ ಟೀಚರ್, ಶ್ರೀಯುತ ವಿರೇಶ್ವರ ಭಟ್ ಮತ್ತು ಮಕ್ಕಳು ಜೊತೆ ಸೇರಿ "ಪುಟ್ಟ ಮಕ್ಕಳೇ ಬನ್ನಿ ಶಾಲೆಗೆ" ಎ೦ಬ ಪ್ರವೇಶೋತ್ಸವ ಗೀತೆಯನ್ನು ರಾಗ ಬದ್ದವಾಗಿ, ಸುಮಧುರವಾಗಿ ಹಾಡಿದರು. ಆಡಳಿತ ಮಂಡಳಿಯ ಸಲಹಾ ಸಮಿತಿ ಸದಸ್ಯೆ ಶ್ರೀಮತಿ ಲಿಲ್ಲಿ ಬಾಯ್ ಟೀಚರ್ ಮಕ್ಕಳಿಗೆ ಹೂವನ್ನು ಚೆಲ್ಲುವ ಮೂಲಕ ಹೊಸ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಅವರಿಗೆ ಹೂ ಬೆಲೂನ್ ಗಳನ್ನು ನೀಡಿದರು. ಐದನೇ ತರಗತಿಯವಿದ್ಯಾರ್ಥಿಗಳಿಗೆ ಕಲಿಕೋಪಕರಣದಕಿಟ್ ನ ವಿತರಣೆಯನ್ನು ಮಾಡಲಾಯಿತು.ಮಂಜೇಶ್ವರ ಗ್ರಾಮ ಪಂಚಾಯತ್ಅಧ್ಯಕ್ಷೆ ಶ್ರೀಮತಿ ಮುಷರತ್ ಜಹಾನ್ ಅಧ್ಯಕ್ಷತೆ ವಹಿಸಿ ಮಕ್ಕಳಿಗೆ ಉತ್ತಮ ಗುಣಮಟ್ಟದಶಿಕ್ಷಣ ದೊರೆಯಲಿ ಮತ್ತು ಕಲಿಕೆಯಲ್ಲಿ ಮುಂದೆ ಬರಲು ರಕ್ಷಕರ ಪಾತ್ರ ಮುಖ್ಯವಾಗಿದೆ ಎ೦ದು ಶುಭಹಾರೈಸಿದರು. ಶಾಲಾ ಪ್ರಬಂಧಕರಾದ ಶ್ರೀಯುತ ದಿನೇಶ್ ಶೆಣೈ ,ಎಸ್ ಎ ಟಿ ಪ್ರೌಢಶಾಲೆ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಯುತ ನಿತಿನ್ ಚಂದ್ರ ಪೈ , ಎಸ್ ಎ ಟಿ ಪ್ರಾಥಮಿಕ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಯುತ ಪುತ್ತಬ್ಬ ಕುಂಜತ್ತೂರು ಮತ್ತು ಬಿ. ಆರ್.ಸಿ ತರಬೇತಿದಾರರಾದ ಶ್ರೀಮತಿ ಉಷಾ ಟೀಚರ್ ಉಪಸ್ಥಿತರಿದ್ದರು. ೧೧.೩೦ ಕ್ಕೆ ಕಳೆದ ಶೈಕ್ಷಣಿಕ ವರ್ಷದಲ್ಲಿ ಜರಗಿದ ಕಾರ್ಯಕ್ರಮದ ವಿಡಿಯೋ ಪ್ರದರ್ಶನವನ್ನು ಪ್ರದರ್ಶಿಸಲಾಯಿತು.ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಸುದತಿ ಟೀಚರ್ ಧನ್ಯವಾದವನ್ನು ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿಯನ್ನು ಹಂಚಲಾಯಿತು. ಶ್ರೀಯುತ ವಿರೇಶ್ವರ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.

No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.