ಮಂಜೇಶ್ವರ
ಸ್ಥಳೀಯ ಎಸ್.ಎ.ಟಿ
ಪ್ರೌಢ ಶಾಲೆಯಲ್ಲಿ ಶಾಲಾ ಕಲೋತ್ಸವದ
ಸಮಾರೋಪ ಸಮಾರಂಭವು ನವೆಂಬರ್ 15
ರಂದು
ಜರುಗಿತು. ಶಾಲಾ
ಪ್ರಬಂಧಕರಾದ ಶ್ರೀ .ಎಂ
ದಿನೇಶ್ ಶೆಣೈ ಅಧ್ಯಕ್ಷತೆಯನ್ನು
ವಹಿಸಿ ಹಿತವಚನವನ್ನು ನೀಡಿದರು.
ಆನಂತರ
ವಿವಿಧ ಸ್ಪರ್ಧೆಯ ವಿಜೇತರಿಗೆ
ಬಹುಮಾನ ನೀಡಲಾಯಿತು.
ಇದೇ
ಸಂದರ್ಭದಲ್ಲಿ ಕಳೆದ ಶೈಕ್ಷಣಿಕ
ಸಾಲಿನಲ್ಲಿ ಉತ್ತಮ ಸಾಧನೆ ಮಾಡಿದ
ಎಸ್.ಎಸ್.ಎಲ್.ಸಿ
ಮಕ್ಕಳಿಗೆ ನಗದು ಪುರಸ್ಕಾರ
ನೀಡಲಾಯಿತು.ಪ್ರಸ್ತುತ
ಸಾಲಿನ ತರಗತಿಯ ಉತ್ತಮ ಸಾಧಕರನ್ನು
ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು..
ವೇದಿಕೆಯಲ್ಲಿ
ಪ್ರೌಢ ಶಾಲಾ ರಕ್ಷಕ – ಶಿಕ್ಷಕ
ಸಂಘದ ಅಧ್ಯಕ್ಷರಾದ ಶ್ರೀ ನಿತಿನ್
ಚಂದ್ರ ಪೈ ,
ಸಲಹಾ
ಸಮಿತಿ ಸದಸ್ಯೆ ಲಿಲ್ಲಿ ಬಾಯಿ
ಟೀಚರ್,ಪ್ರೌಢ
ಶಾಲಾ ಮುಖ್ಯೋಪಾಧ್ಯಾಯಿನಿ
ಸುದತಿ.ಬಿ
ಉಪಸ್ಥಿತರಿದ್ದರು.ಈ
ಸಂದರ್ಭದಲ್ಲಿ ಅಗಲಿದ ಸ್ಕೌಟ್
ಅಧ್ಯಾಪಕರಾದ ಮತ್ತು ಸಮಾಜ ವಿಜ್ಞಾನ
ಅಧ್ಯಾಪಕರೂ ಆದ ಶಿವಾನಂದ ಅರಿಬೈಲ್
ಅವರಿಗೆ ಸಂತಾಪ ಸೂಚಿಸಲಾಯಿತು.
9ನೇ ತರಗತಿಯ
ವಿದ್ಯಾರ್ಥಿನಿಯಾದ ಆಯಿಷತ್
ಸಫ್ವಾನ ಸ್ವಾಗತಿಸಿ ಶಾಲಾ ನಾಯಕಿ
ಮಷ್ಮೂಮಾ ವಂದಿಸಿದರು.
ಶಾಲಾ
ಕಲೋತ್ಸವದ ಸಂಚಾಲಕರಾದ ವಿರೇಶ್ವರ
ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.
Subscribe to:
Post Comments (Atom)
2022
ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.
-
ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.
-
ಪರಿಸರ ದಿನಾಚರಣೆಯ ಅಂಗವಾಗಿ ಮಂಜೇಶ್ವರ ಎಸ.ಎ.ಟಿ ಪ್ರೌಢ ಶಾಲೆಯ ಪರಿಸರ ಸಂಘದ ವಿದ್ಯಾರ್ಥಿಗಳು ಮೆರವೆಣಿಗೆಯ ಮೂಲಕ ಪರಿಸರ ಸಂರಕ್ಷಣೆಯ ಕುರಿತಾಗಿ ಜಾಗೃತಿಯನ್ನು...
-
ತಾರೀಕು 26-6-2018 ರಂದು SAT ಶಾಲೆಯ ಲ್ಲಿ ಮಾದಕವಸ್ತು ವಿರೋಧಿ ದಿನವನ್ನು ಆಚರಿಸಲಾಯಿತು. ಶಾಲಾ ಅಸ್ಸಂಬ್ಲಿ ಯಲ್ಲಿ ಮಾದಕವಸ್ತುಗಳ ವಿರುದ್ಧ ವಿದ್ಯಾರ್ಥಿ...
No comments:
Post a Comment