ಪರಿಪಾಲಿಸು ಮದನಂತೇಶಾ
ವರ ಮಂಜುಳ ಪುರನಿವಾಸಾ
ಆ ಪರಿಪಾಲಿಸು ಮದನಂತೇಶಾ||
ಭಜಕರ ಪಾಲಕ ದೇವಾ
ನಾ ಭಜಿಪೆನು ಹೃದಯ ಸಂಜೀವಾ
ಸುಜನೋಧ್ಧಾರಕ ಅಜಸುರ ವಂದ್ಯಾ
ನಿಜಪದವೀಯುತ ನಿರತ
ಆ ಪರಿಪಾಲಿಸು ಮದನಂತೇಶಾ ||
ನಂಬಿದೆ ನಿನ್ನಯ ಪ್ರಭುವೆ
ಎನ ಗಿಂಭನು ಕರುಣಿಸು ವಿಭುವೇ
ಬೆಂಬಿಡದನುದಿನ ಸಂಭ್ರಮದೊಳು ಪೊರೆ
ಅಂಭುಜನಾಭ ಸರ್ವೇಶಾ
ಆ ಪರಿಪಾಲಿಸು ಮದನಂತೇಶಾ ||
**********************
ಮಹಾ ದಿವ್ಯ ವಿಜ್ಞಾನ ಹೇ ಪಾವನಾ |2|
ಕಾರುಣ್ಯ ನಿಧಿ ನೀನು ಸರ್ವಪ್ರದಾಯಕನು |2|
ನಿರ್ವಿಘ್ನ ದಾತ ಶ್ರೀ ನಿರಂಜನಾ |2||ಮ|
ಮಂಜುಳಪುರವಾಸ ಶ್ರೀ ಭದ್ರ ನರಸಿಂಹ |2|
ಶಾಂತಿದಾಯಕ ದೇವಾ ಸರ್ವೇಶ್ವರಾ |2||ಮ|
**********************
ಸತ್ಯ ಜ್ಞಾನ ರೂಪ ಶ್ರೀ ಸತ್ಯ ಸಿಂಹನೇ
ನಿತ್ಯ ಜಗಕೆ ಸುಖವ ನೀವ ಕಾವ ದೇವನೇ
ತಂದೆ ತಾಯಿ ಬಂಧು ಗುರುವು ಜಗದ ಪೋಷಣೆ
ಎಂದು ಬಗೆವ ದಲೆವ ಮನಕೆ ವ್ಯರ್ಥ ಶೋಷಣೆ
ಆರ್ತ ಜನರ ಭಾಗ್ಯದಾ ಭೋಧಿ ಚಂದ್ರಮಾ
ಜ್ಞಾನನೀವ ನಿಲಯವಿಧರ ಭರಣ ಕಾರಣಾ
ಶರಣು ಹೃದಯ ಕಮಲ ಭಾನು ಕ್ಷೇತ್ರ ಮಂಜುಳಾ
ಪುರದ ಪಾರ ಭಾಗ್ಯ ರೂಪ ಮಂಜುಳೇಶ್ವರಾ
ಮಂಜುಳೇಶ ಪಾಹಿಮಾಂ ಕಂಜನಾಭನೇ
ಸಂಜನಿಸುಗೆ ಮತಿಯೊಳೆಮ್ಮ ಜ್ಞಾನ ಕಾವನೆ
ವಿಕಲ ಮತಿಯ ಹರಿಸಿ ಹರಸಲೆಮ್ಮ ಪ್ರಾರ್ಥನೆ
ಸತತದ ಶಾಂತಿ ಸುಖವ ನೀಡು ನಾರಸಿಂಹನೇ |ಸ|
*******************
ಶರಣು ಶರಣು ವರದ ಮಂಜುಳೇಶ
ಸರಸಿರುಹಾ ದಳನಯನ ಸರಸಿಜಭವನುತ ಶರಣಾ |ಶ|
ಬಾಲರೆಮಗೆ ಅನು ದಿನ ದಿನ ಲೀಲೆಯನ್ನು ಪಾಡುವಂತೆ
ಪಾಲಿಶುಶುಭ ಮತಿಯ ದೇವಾ ಪಾಲಯಮುನಿ ನಿಕರ ದೇವಾ |ಶ|
*********************
ಹೃದಯ ಕಮಲದಿ ನೆಲಸಿ ಸದಮಲ ಜ್ಞಾನವನು
ಒದಗಿಸಲು ಬೇಕೆನುವೆ ಪದುಮಾಯ ತಾಕ್ಷಾ
ಬಾಲ ನಚಿಕೇತ ಪ್ರಹ್ಲಾದ ಧ್ರುವಗೊಲಿದಂದು
ಪಾಲಿಸಿದ ಪ್ರೇಮವನೆ ಸಲೆದೋರು ತಂದೆ
ಮೇಲು ಕೀಳರಿಯದಿಹೆ ಬಾಲರಹೆವೆಮ್ಮಮನ
ದಾಲಯದೆ ನೆಲೆನಿಂದು ಪಾಲಿಪುದು ಶ್ರೀ ಹರಿಯೇ |ಹೃ|
ವಿದ್ಯೆಗಳ ನೀಡೆಮಗೆ ಬುದ್ಧಿಯೊಳು ನೀ ನೆಲಸು
ತಿದ್ದು ಭಾರತ ದೇಶ ದುದ್ಧಾರ ಮತಿಗೇ
ಮುದ್ದು ಭಾರತ ಮಾತೆ ಎದ್ದು ಶಿರವೊಲಿವಂತೆ
ಉದ್ಧರಿಸು ಓಂ ನಮಃ ಶ್ರೀ ನಾರಸಿಂಹಾಯ |ಹೃ|
ಒದಗಿಸಲು ಬೇಕೆನುವೆ ಪದುಮಾಯ ತಾಕ್ಷಾ
ಬಾಲ ನಚಿಕೇತ ಪ್ರಹ್ಲಾದ ಧ್ರುವಗೊಲಿದಂದು
ಪಾಲಿಸಿದ ಪ್ರೇಮವನೆ ಸಲೆದೋರು ತಂದೆ
ಮೇಲು ಕೀಳರಿಯದಿಹೆ ಬಾಲರಹೆವೆಮ್ಮಮನ
ದಾಲಯದೆ ನೆಲೆನಿಂದು ಪಾಲಿಪುದು ಶ್ರೀ ಹರಿಯೇ |ಹೃ|
ವಿದ್ಯೆಗಳ ನೀಡೆಮಗೆ ಬುದ್ಧಿಯೊಳು ನೀ ನೆಲಸು
ತಿದ್ದು ಭಾರತ ದೇಶ ದುದ್ಧಾರ ಮತಿಗೇ
ಮುದ್ದು ಭಾರತ ಮಾತೆ ಎದ್ದು ಶಿರವೊಲಿವಂತೆ
ಉದ್ಧರಿಸು ಓಂ ನಮಃ ಶ್ರೀ ನಾರಸಿಂಹಾಯ |ಹೃ|
Thanks to whoever has posted the school prayers estd in 1925!
ReplyDelete