ಮಂಜೇಶ್ವರ
– ಎಸ್.ಎ.ಟಿ
ವಿದ್ಯಾಲಯದಲ್ಲಿ ನಾಡ ಹಬ್ಬ ದಸರ
ವನ್ನು ಬಹಳ ವಿಜೃಭಣೆಯಿಂದ
ಆಚರಿಸಲಾಯಿತು. ಮಂಜೇಶ್ವರದ
ಶ್ರೀಮತ್ ಅನಂತೇಶ್ವರ ದೇವಳದ
ಕೋಶಧಿಕಾರಿಯಾದ ಸುರೇಶ್ ಶೆಣೈ
ದೀಪ ಬೆಳಗಿಸುವುದರ ಮೂಲಕ
ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪ್ರೌಢ ಶಾಲಾ
ವಿಭಾಗದ ಪ್ರಭಾರ ಮುಖ್ಯೋಪಾಧ್ಯಾಯಿನಿ
ಕೆ. ಕೃಷ್ಣ
ಕುಮಾರಿ ಟೀಚರ್ ಅಧ್ಯಕ್ಷತೆ
ವಹಿಸಿದರು. ವಿದ್ಯಾರ್ಥಿಗಳಿಂದ
ಕುವೆಂಪು ರಚಿಸಿದ ನಾಡಗೀತೆಯೊಂದಿಗೆ
ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬಳಿಕ ಮಕ್ಕಳಿಂದ
ವಿವಿಧ ರೀತಿಯ ವಿನೋದಾವಳಿಗಳು
ನಡೆಯಿತು. ಈ
ಸಂದರ್ಭದಲ್ಲಿ ಪ್ರೌಢ ಶಾಲಾ ರಕ್ಷಕ
– ಶಿಕ್ಷಕ ಸಂಘದ ಅಧ್ಯಕ್ಷರಾದ
ನಿತಿನ್ ಚಂದ್ರ ಪೈ , ಶಾಲಾ
ಆಡಳಿತ ಮಂಡಳಿಯ ಸಲಹ ಸಮಿತಿಯ
ಸದಸ್ಯೆ ಲಿಲ್ಲಿ ಬಾಯಿ ಟೀಚರ್ ,
ಕಿರಿಯ ಪ್ರಾಥಮಿಕ
ಶಾಲೆಯ ಮುಖ್ಯೋಪಾಧ್ಯಾಯಿನಿ
ಸುದತಿ ಟೀಚರ್, ವಿದ್ಯಾರಂಗ
ಸಾಹಿತ್ಯ ವೇದಿಕೆಯ ಸಂಚಾಲಕರಾದ
ಪರಮೇಶ್ವರಿ ಟೀಚರ್, ಶಾಲಾ
ನಾಡಹಬ್ಬದ ಸಂಯೋಜಕರಾದ ಕಿರಣ್
ಕುಮಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯಾದ
ಕುಮಾರಿ ನಿಶ್ಮಿತ ಸ್ವಾಗತಿಸಿದಳು,ಕು
ಆಯಿಷತ್ ಸಫ್ ವಾನ ಕಾರ್ಯಕ್ರಮವನ್ನು
ನಿರೂಪಿಸಿದಳು.
Tuesday, 30 September 2014
Sunday, 28 September 2014
ಮಂಗಳನಲ್ಲಿಗೆ ಭಾರತದ ಯಶಸ್ವೀ ಪಯಣ
25-09-2014 ನೇ ಸೋಮವಾರ ಮಂಗಳಯಾನ ನಡೆಸಿ ಯಶಸ್ವಿಯಾದ ಭಾರತದ ಸಾಧನೆಯನ್ನು ಶಿಕ್ಷಕರಾದ
ನಾಗೇಶ್ ವಿ. ಯವರು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಕಿರಿಯ ಪ್ರಾಥಮಿಕ ಶಾಲಾ
ಮುಖ್ಯೋಪಾಧ್ಯಾಯನಿ ಸುದತಿ.ಬಿ ಯವರು ಮತ್ತು ಪ್ರೌಢ ಶಾಲಾ ಮುಖ್ಯೋಪಾಧ್ಯಾಯನಿ ಮನೋರಮ
ಕಿಣಿಯವರು ಉಪಸ್ಥಿತರಿದ್ದರು.
Wednesday, 24 September 2014
ಸ್ವಾ ಸ್ಥ್ಯ ಸಂಕಲ್ಪ ಕಾರ್ಯಕ್ರಮ
ಮಂಜೇಶ್ವರ
ದ ಎಸ್. ಎ.ಟಿ
ಪ್ರೌಢ ಶಾಲೆಯಲ್ಲಿ ಸ್ವಾ ಸ್ಥ್ಯ
ಸಂಕಲ್ಪ ಕಾರ್ಯಕ್ರಮ
ಮಂಜೇಶ್ವರ
-ಸೆ 24
– ಶ್ರೀ ಕ್ಷೇತ್ರ
ಧರ್ಮಸ್ಥಳ ಗ್ರಾಮಾಬಿವೃದ್ಧಿ
ಯೋಜನೆ ಮಂಗಳೂರು ಮತ್ತು ಅಖಿಲ
ಕರ್ನಾಟಕ ಮಂಗಳೂರು ಇದರ ಸಹಬಾಗಿತ್ವದಲ್ಲಿ
ಮಂಜೇಶ್ವರ ದ ಎಸ್. ಎ.ಟಿ
ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ
ಸ್ವಾ ಸ್ಥ್ಯ ಸಂಕಲ್ಪ ಎಂಬಕಾರ್ಯಕ್ರಮವನ್ನು
ಆಯೋಜಿಸಲಾಯಿತು. . ಈ
ಕಾರ್ಯಕ್ರಮದ ಉದ್ಘಾಟನೆಯನ್ನು
ಸಮಾಜ ಸೇವಕರಾದ ಕೃಷ್ಣ ಶಿವಕೃಪ
ಕುಂಜತ್ತೂರು ಮಾಡಿ ,
ದುಶ್ಚಟಕ್ಕೆ
ಬಳಿಯಾದರೆ ಏನೆಲ್ಲತೋಂದರೆಗಳು
ಉಂಟಾಗಬಹುದು ಎಂಬುದರ ಮಾಹಿತಿಯನ್ನು
ವಿದ್ಯಾರ್ಥಿಗಳಿಗೆ ನೀಡಿದರು .
ಈ ಕಾರ್ಯಕ್ರಮದಲ್ಲಿ
ಜನಜಾಗೃತಿ ವೇದಿಕೆಯ ಸದಸ್ಯರಾದ
ಈಶ್ವರ ಮಾಸ್ತರ್, ಶ್ರೀ
ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ
ಯೋಜನೆ ಯ ಜಿಲ್ಲಾ ಮೇಲ್ವಿಚಾರಕರಾದ
ರಮೇಶ್ , ಎಸ್.
ಎ.ಟಿ
ಪ್ರೌಢ ಶಾಲೆಯ ಮುಖ್ಯೋಪಾದ್ಯಾಯಿನಿಯಾದ
ಮನೋರಮ ಕಿಣಿ , ಶ್ರೀ
ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ
ಯೋಜನೆ ಮಂಜೇಶ್ವರ ಒಕೂಟದ ಅಧ್ಯಕ್ಷೆ
ಶೈಲಜ ಉಪಸ್ಥಿತರಿದ್ದರು.
ಸೇವ ಪ್ರತಿನಿಧಿಯಾದ
ಸುಖಲತ ಇವರು ಸ್ವಾಗತಿಸಿ,
ಸಂಸ್ಕೃತ
ಶಿಕ್ಷಕರಾದ ನಾರಯಣ ಹೆಗಡೆಯವರು
ವಂದನಾರ್ಪಣೆಗೈದರು. ಸ್ನೇಹಲತ
ಕಾರ್ಯಕ್ರಮವನ್ನು ನಿರೂಪಿಸಿದರು.
Wednesday, 17 September 2014
Tuesday, 16 September 2014
ಓಝೋನ್ ದಿನಾಚರಣೆ
ಎಸ್.
ಎ .
ಟಿ.
ಪ್ರೌಢ
ಶಾಲೆಯಲ್ಲಿ ಓಝೋನ್ ದಿನಾಚರಣೆ
ಮಂಜೇಶ್ವರ
- ಎಸ್.
ಎ . ಟಿ.
ಪ್ರೌಢ ಶಾಲೆಯಲ್ಲಿ
ಓಝೋನ್ ದಿನಾಚರಣೆ ಅಂಗವಾಗಿ 10
ನೇ ತರಗತಿಯ
ನಿಶ್ಮಿತ ಡಿ. ಎಚ್
ಓಝೋನ್ ಪದರಿನ ಬಗ್ಗೆ ಸೆಮಿನಾರ್
ನ್ನು ಮಂಡಿಸಿದರು. ವಿಜ್ಞಾನ
ಅಧ್ಯಾಪಕರಾದ ನಾಗೇಶ್ .ವಿ
ಓಝೋನ್ ಪದರು ಉಂಟಾಗುವುದು ಹೇಗೆ
, ಅದರ
ರಕ್ಷಣೆ ಹೇಗೆ ಸಾದ್ಯ ಎಂಬುವುದನ್ನು
ಮಲ್ಟಿ ಮಿಡಿಯ ಉಪಯೋಗಿಸಿ
ವಿದ್ಯಾರ್ಥಿಗಳಿಗೆ ವಿವರಿಸಿ
ಹೇಳಿದರು. 9 ನೇ
ತರಗತಿಯ ಆಯಿಷತ್ ಸಪ್ವಾನ
ಕಾರ್ಯಕ್ರಮವನ್ನು ನಿರೂಪಿಸಿದರು.
8ನೇ ತರಗತಿಯ
ಪಲ್ಲವಿ ಪ್ರಭು ಧನ್ಯವಾದಗೈದರು.
ಪ್ರಭಾರ
ಮುಖ್ಯೋಪಾಧ್ಯಾಯಿನಿ ಯಾದ
ಕೃಷ್ಣಕುಮಾರಿ ,ವಿಜ್ಞಾನ
ಸಂಘದ ಸಂಚಾಲಕರಾದ ಸುರೇಖ ಟೀಚರ್
, ವಿಜ್ಞಾನ
ಶಿಕ್ಷಕರಾದ ಈಶ್ವರ ಕಿದೂರು,
ಲಕ್ಷ್ಣಿದಾಸ್
ಪ್ರಭು, ಶಾಂತೇರಿ
ಕಿಣಿ, ಉಪಸ್ಥಿತರಿದ್ದರು.
Monday, 15 September 2014
ಸುರಕ್ಷಾ ವಿಮಾ ಯೋಜನೆಯ ಉದ್ಘಾಟನೆ.
ಎಸ್
. ಎ.
ಟಿ.
ಫ್ರೌಢ
ಶಾಲೆಯಲ್ಲಿ ಮಕ್ಕಳ ಸುರಕ್ಷಾ
ವಿಮಾ ಯೋಜನೆಯ ಉದ್ಘಾಟನೆ.
ಮಂಜೇಶ್ವರ
- ರೋಟರಿ
ಕ್ಲಬ್ ಮಂಗಳೂರು ಹಾಗೂ ಎಸ್.
ಎ.
ಟಿ.ಪ್ರೌಢ
ಶಾಲೆಯ ರಕ್ಷಕ – ಶಿಕ್ಷಕ ಸಂಘ ಇದರ
ಜಂಟಿ ಆಶ್ರಯದಲ್ಲಿ ಇತೀಚೆಗೆ
ಮಕ್ಕಳ ಸುರಕ್ಷಾ ವಿಮಾ ಯೋಜನೆಯ
ಉದ್ಘಾಟನೆಯನ್ನು ರೋಟರಿ ಕ್ಲಬ್
ಮಂಗಳೂರು ಇದರ ಅಧ್ಯಕ್ಷರಾದ ಏಕನಾಥ
ದಂಡೇರಿ ಅವರು ವಿಮಾ ಯೋಜನೆಯ
ಅವಶ್ಯಕತೆ ಮತ್ತು ಪ್ರಯೋಜನದ
ಬಗ್ಗೆ ವಿವರವನ್ನು ನೀಡಿ ,
ಪ್ರೌಢ ಶಾಲಾ
ಮುಖ್ಯೋಪಾಧ್ಯಾನಿ ಮನೋರನ ಕಿಣಿ
ಇವರಿಗೆ ಔಪಚಾರಿಕವಾಗಿ ವಿಮಾ
ಪಾಲಿಸಿ ನೀಡುವುದರ ಮೂಲಕ
ಉದ್ಘಾಟಿಸಿದರು. ಈ
ಸಂದರ್ಭದಲ್ಲಿ ಪ್ರೌಢ
ಶಾಲಾ ರಕ್ಷಕ – ಶಿಕ್ಷಕ ಸಂಘದ
ಅಧ್ಯಕ್ಷರಾದ ನಿತಿನ್ ಚಂದ್ರ ಪೈ
ಕಿರಿಯ ಪ್ರಾಥಮಿಕ ಶಾಲೆಯ ರಕ್ಷಕ
– ಶಿಕ್ಷಕ ಸಂಘದ ಅಧ್ಯಕ್ಷರಾದ
ಪುತ್ತಬ್ಬ ಕುಂಜತ್ತೂರು.
ಮಂಜೇಶ್ವರ
ಗ್ರಾಮಪಂಚಾಯತ್ ಸದಸ್ಯರಾದ
ಹರಿಶ್ಚಂದ್ರ ,
ಎಂ
ವಿಠಲ ದಾಸ್ ಭಟ್,
ಅನಿಲ್
ಬಾಳಿಗ, ಸಲಹಾ
ಸಮಿತಿ ಸದಸ್ಯೆ ಲಿಲ್ಲಿ ಬಾಯಿ
ಟೀಚರ್ ಮುಂತಾದವರು ಉಪತ್ಥಿತರಿದ್ದರು.
ಪ್ರೌಢ
ಶಾಲಾ ಮುಖ್ಯೋಪಾಧ್ಯಾಯನಿ ಮನೋರಮ
ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿ
ಸ್ವಾಗತಿಸಿದರು.ಕಿರಿಯ
ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ
ಸುದತಿ.ಬಿ
ವಂದಿಸಿದರು.
ಶಿಕ್ಷಕ
ವಿರೇಶ್ವರ ಭಟ್ ಕಾರ್ಯಕ್ರಮವನ್ನು
ನಿರೂಪಿಸಿದರು.
ನವೋಲ್ಲಾಸ ಶಿಬಿರದ ಉದ್ಘಾಟನೆ
ಮಂಜೇಶ್ವರದ
ಎಸ್ . ಎ
. ಟಿ
ವಿದ್ಯಾಲಯದಲ್ಲಿ ನವೋಲ್ಲಾಸ
ಶಿಬಿರದ ಉದ್ಘಾಟನೆ
ಮಂಜೇಶ್ವರ
- ಸ್ಥಳೀಯ
ಎಸ್ . ಎ
. ಟಿ
ವಿದ್ಯಾಲಯದಲ್ಲಿ ಸಾಕ್ಷರ – 2014
ಇದರ ಅಂಗವಾಗಿ
ಡಯಟ್ ಕಾಸರಗೋಡು ಇದರ ನಿರ್ದೇಶನದಂತೆ
ನವೋಲ್ಲಾಸ ಶಿಬಿರ ವನ್ನು
ಹಮ್ಮಿಕೊಳ್ಳಲಾಯಿತು.
ಸಂಸ್ಥೆಯ
ಅನಂತ ವಿದ್ಯಾ ಸಭಾಂಗಣದಲ್ಲಿ
ಮಂಜೇಶ್ವರ ಗ್ರಾಮ ಪಂಚಾಯತು
ಅಧ್ಯಕ್ಷೆ ಮುಶ್ರತ್ ಜಹಾನ್
ಶಿಬಿರವನ್ನು ಉದ್ಘಾಟಿಸಿದರು
ಬಿ.ಆರ್.ಸಿ
ತರಬೇತುದಾರರಾದ ವಿಜಯ ಕುಮಾರ್
ಶಿಬಿರದ ಉದ್ದೇಶವನ್ನು ವಿವರಿಸಿದರು.
ಶಾಲಾ ಪ್ರಬಂಧಕರಾದ
ಎಂ. ದಿನೇಶ್
ಶೆಣೈ ಕಾರ್ಯಕ್ರಮದ ಅಧ್ಯಕ್ಷತೆಯನ್ನು
ವಹಿಸಿ ಶುಭಕೋರಿದರು. ಆಡಳಿತ
ಮಂಡಳಿಯ ಸಲಹಾ ಸಮಿತಿ ಸದಸ್ಯೆ
ಲಿಲ್ಲಿ ಬಾಯಿ ಟೀಚರ್ , ಪ್ರೌಢ
ಶಾಲಾ ವಿಭಾಗದ ರಕ್ಷಕ – ಶಿಕ್ಷಕ
ಸಂಘದ ಉಪಾಧ್ಯಕ್ಷೆ ಹೇಮಲತ ,
ಕಿರಿಯ ಪ್ರಾಥಮಿಕ
ಶಾಲೆಯ ರಕ್ಷಕ – ಶಿಕ್ಷಕ ಸಂಘದ
ಅಧ್ಯಕ್ಷ ಪುತ್ತಬ್ಬ ಕುಂಜತ್ತೂರು,
ಪ್ರೌಢ
ಶಾಲಾ ಮುಖ್ಯೋಪಾಧ್ಯಾಯನಿ ಮನೋರಮ
ಕಿಣಿ ,ಕಿರಿಯ
ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ
ಸುದತಿ.ಬಿ
ಉಪಸ್ಥಿತರಿದ್ದರು.ಹಿರಿಯ
ಶಿಕ್ಷಕರಾದ ಪುಂಡಲಿಕ ನಾಯಕ್
ಸ್ವಾಗತಿಸಿ ,
ಶಿಕ್ಷಕ
ಕೃಷ್ಣ ಭಟ್ ಡಿ.
ಕೆ
ಧನ್ಯವಾದ ಸಮರ್ಪಿಸಿದರು.
ಎಸ್
.ಆರ್.
ಜಿ.
ಸಂಚಾಲಕರಾದ
ಶಾಂತರಾಮ ಎಸ್ ಕಾರ್ಯಕ್ರಮವನ್ನು
ನಿರೂಪಿಸಿದರು .
ಶಿಬಿರದಲ್ಲಿ
ಶಿಕ್ಷಕರಾದ ಶೈಲಜ ಎಂ.,
ಕಿರಣ್
ಕುಮಾರ್,
ತೇಜಸ್
ಕಿರಣ್, ದಾಸಪ್ಪ
ರೈ , ನಾಗೇಶ್
ವಿ ,ಗಣೇಶ್
ನಾಯಕ್.
ಲಕ್ಷ್ಣಿದಾಸ್
ಪ್ರಭು,
ಸುಮತಿ.ಎಂ
. ಸರ್ವೇಶ್ವರಿ,
ಪದ್ಮಿನಿ,
ಅನಸೂಯ
ಮುಂತಾದವರು ಶಿಬಿರವನ್ನು
ನಡೆಸಿಕೊಟ್ಟರು
Thursday, 11 September 2014
ಶ್ರೀ ಶಾರದೆಗೆ ರಜತ ಪ್ರಭಾವಳಿ ಸಮರ್ಪಣೆ
ಎಸ್.
ಎ.ಟಿ.
ಶಾಲೆಯ
ಶ್ರೀ ಶಾರದೆಗೆ ರಜತ ಪ್ರಭಾವಳಿ
ಸಮರ್ಪಣೆ
ಮಂಜೇಶ್ವರ
- ಎಸ್.
ಎ.ಟಿ
ಶಾಲೆಯ ಶಾರದೆಗೆ ಮಂಜೇಶ್ವರ
ನಾಗಮಂಡಲೋತ್ಸವ -2014ರ
ಪರವಾಗಿ ಶಾಲೆಯ ಶ್ರೀ ಶಾರದೆಗೆ
ರಜತ ಪ್ರಭಾವಳಿಯನ್ನು ಇತ್ತೀಚೆಗೆ
ಮಂಜೇಶ್ವರ ನಾಗಮಂಡಲೋತ್ಸವ
ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ
ಮಂಜೇಶ್ವರ ಗ್ರಾಮಪಂಚಾಯತ್
ಸದಸ್ಯರಾದ ಹರಿಶ್ಚಂದ್ರ ಎಂ ಶಾಲಾ
ಪ್ರಬಂಧಕರಾದ ದಿನೇಶ್ ಶೆಣೈ
ಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ
ಶ್ರೀಮತ್ ಅನಂತೇಶ್ವರ ದೇವಳದ
ಕೋಶಾಧಿಕಾರಿಯಾದ ಸುರೇಶ್ ಶೆಣೈ
,.ಪ್ರೌಢ
ಶಾಲಾ ರಕ್ಷಕ – ಶಿಕ್ಷಕ ಸಂಘದ
ಅಧ್ಯಕ್ಷರಾದ ನಿತಿನ್ ಚಂದ್ರ ಪೈ
, ಎಂ
ವಿಠಲ ದಾಸ್ ಭಟ್,
ಅನಿಲ್
ಬಾಳಿಗ, ಸಲಹಾ
ಸಮಿತಿ ಸದಸ್ಯೆ ಲಿಲ್ಲಿ ಬಾಯಿ
ಟೀಚರ್ ಮುಂತಾದವರು ಉಪಸ್ಥಿತರಿದ್ದರು.
ಪ್ರೌಢ
ಶಾಲಾ ಮುಖ್ಯೋಪಾಧ್ಯಾಯನಿ ಮನೋರಮ
ಕಿಣಿ .ಕಿರಿಯ
ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ
ಸುದತಿ.ಬಿ,
ಹಿರಿಯ
ಶಿಕ್ಷಕರಾದ ಪುಂಡಲಿಕ ನಾಯಕ್ ,
ಶಿಕ್ಷಕಿ
ಶೈಲಜ, ಶಾರದ
ಪೂಜ ಸಮಿತಿಯ ಸಂಚಾಲಕರಾದ ಪುರ್ಣಯ್ಯ
ಪುರಾಣಿಕ್ ಹಾಗೂ ಶಾಲಾ ಸಿಬ್ಬಂದಿ
ವರ್ಗದವರು ಉಪಸ್ಥಿತರಿದ್ದರು.
Friday, 5 September 2014
ಓಣಂ ಸಂಭ್ರಮ
ಎಸ್.
ಎ. ಟಿ
ಶಾಲೆಯಲ್ಲಿ ಓಣಂ ಹಬ್ಬದ ಆಚರಣೆಯ
ಅಂಗವಾಗಿ ವಿದ್ಯಾರ್ಥಿಗಳಿಂದ
ಪುಕ್ಕಳಂವನ್ನು ರಚಿಸಿ ಓಣಂ ಹಬ್ಬದ
ಸಂಬ್ರಮವನ್ನು ಆಚರಿಸಲಾಯಿತು.
ಗುರು ದಿವಸ್ ಆಚರಣೆ
05-09-2014 ರಂದು ಡಾll ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನದ ಸ್ಮರಣಾರ್ಥ
ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಡಾll ಸರ್ವಪಳ್ಳಿ ರಾಧಾಕೃಷ್ಣನ್ ರವರ
ಭಾವಾಚಿತ್ರಕ್ಕೆ ಪುಷ್ಪಾರ್ಚನೆ ಗೈಯಲಾಯಿತು. ನಿವೃತ್ತ ಅಧಾಪಕ ಶ್ರೀಯುತ ದಾಮೋದರ್
ಮಾಸ್ಟರ್ ರವರನ್ನು ಸನ್ಮಾನಿಸಲಾಯಿತು.
Subscribe to:
Posts (Atom)
2022
ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.
-
ತಾರೀಕು 26-6-2018 ರಂದು SAT ಶಾಲೆಯ ಲ್ಲಿ ಮಾದಕವಸ್ತು ವಿರೋಧಿ ದಿನವನ್ನು ಆಚರಿಸಲಾಯಿತು. ಶಾಲಾ ಅಸ್ಸಂಬ್ಲಿ ಯಲ್ಲಿ ಮಾದಕವಸ್ತುಗಳ ವಿರುದ್ಧ ವಿದ್ಯಾರ್ಥಿ...
-
ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.