ಮಂಜೇಶ್ವರ
– ಎಸ್.ಎ.ಟಿ
ವಿದ್ಯಾಲಯದಲ್ಲಿ ನಾಡ ಹಬ್ಬ ದಸರ
ವನ್ನು ಬಹಳ ವಿಜೃಭಣೆಯಿಂದ
ಆಚರಿಸಲಾಯಿತು. ಮಂಜೇಶ್ವರದ
ಶ್ರೀಮತ್ ಅನಂತೇಶ್ವರ ದೇವಳದ
ಕೋಶಧಿಕಾರಿಯಾದ ಸುರೇಶ್ ಶೆಣೈ
ದೀಪ ಬೆಳಗಿಸುವುದರ ಮೂಲಕ
ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪ್ರೌಢ ಶಾಲಾ
ವಿಭಾಗದ ಪ್ರಭಾರ ಮುಖ್ಯೋಪಾಧ್ಯಾಯಿನಿ
ಕೆ. ಕೃಷ್ಣ
ಕುಮಾರಿ ಟೀಚರ್ ಅಧ್ಯಕ್ಷತೆ
ವಹಿಸಿದರು. ವಿದ್ಯಾರ್ಥಿಗಳಿಂದ
ಕುವೆಂಪು ರಚಿಸಿದ ನಾಡಗೀತೆಯೊಂದಿಗೆ
ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬಳಿಕ ಮಕ್ಕಳಿಂದ
ವಿವಿಧ ರೀತಿಯ ವಿನೋದಾವಳಿಗಳು
ನಡೆಯಿತು. ಈ
ಸಂದರ್ಭದಲ್ಲಿ ಪ್ರೌಢ ಶಾಲಾ ರಕ್ಷಕ
– ಶಿಕ್ಷಕ ಸಂಘದ ಅಧ್ಯಕ್ಷರಾದ
ನಿತಿನ್ ಚಂದ್ರ ಪೈ , ಶಾಲಾ
ಆಡಳಿತ ಮಂಡಳಿಯ ಸಲಹ ಸಮಿತಿಯ
ಸದಸ್ಯೆ ಲಿಲ್ಲಿ ಬಾಯಿ ಟೀಚರ್ ,
ಕಿರಿಯ ಪ್ರಾಥಮಿಕ
ಶಾಲೆಯ ಮುಖ್ಯೋಪಾಧ್ಯಾಯಿನಿ
ಸುದತಿ ಟೀಚರ್, ವಿದ್ಯಾರಂಗ
ಸಾಹಿತ್ಯ ವೇದಿಕೆಯ ಸಂಚಾಲಕರಾದ
ಪರಮೇಶ್ವರಿ ಟೀಚರ್, ಶಾಲಾ
ನಾಡಹಬ್ಬದ ಸಂಯೋಜಕರಾದ ಕಿರಣ್
ಕುಮಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯಾದ
ಕುಮಾರಿ ನಿಶ್ಮಿತ ಸ್ವಾಗತಿಸಿದಳು,ಕು
ಆಯಿಷತ್ ಸಫ್ ವಾನ ಕಾರ್ಯಕ್ರಮವನ್ನು
ನಿರೂಪಿಸಿದಳು.
Subscribe to:
Post Comments (Atom)
2022
ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.
-
ಎಸ್ . ಎ . ಟಿ ಶಾಲೆಯಲ್ಲಿ ಓಣಂ ಹಬ್ಬದ ಆಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಂದ ಪುಕ್ಕಳಂವನ್ನು ರಚಿಸಿ ಓಣಂ ಹಬ್ಬದ ಸಂಬ್ರಮವನ್ನು ಆಚರಿಸಲಾಯಿತು . View all Get...
-
ವಿಶ್ವ ಮಾದಕ ವಸ್ತು ವಿರೋಧಿ ದಿನ SAT ಅನಂತವಿದ್ಯಾ ಸಭಾಂಗಣದಲ್ಲಿ excise ಆಫೀಸರ್ ರಾಮ ಅವರ ನೇತೃತ್ವ ದಲ್ಲಿ ಸೆಮಿನಾರ್ ನಡೆಸಲಾಯಿತು .ಶಾಲಾ ಮುಖ್ಯೋಪಾಧ್ಯಾಯಿ...
-
ಪರಿಸರ ದಿನಾಚರಣೆಯ ಅಂಗವಾಗಿ ಮಂಜೇಶ್ವರ ಎಸ.ಎ.ಟಿ ಪ್ರೌಢ ಶಾಲೆಯ ಪರಿಸರ ಸಂಘದ ವಿದ್ಯಾರ್ಥಿಗಳು ಮೆರವೆಣಿಗೆಯ ಮೂಲಕ ಪರಿಸರ ಸಂರಕ್ಷಣೆಯ ಕುರಿತಾಗಿ ಜಾಗೃತಿಯನ್ನು...
No comments:
Post a Comment