Wednesday, 24 September 2014

ಸ್ವಾ ಸ್ಥ್ಯ ಸಂಕಲ್ಪ ಕಾರ್ಯಕ್ರಮ


ಮಂಜೇಶ್ವರ ದ ಎಸ್. .ಟಿ ಪ್ರೌಢ ಶಾಲೆಯಲ್ಲಿ ಸ್ವಾ ಸ್ಥ್ಯ ಸಂಕಲ್ಪ ಕಾರ್ಯಕ್ರಮ
ಮಂಜೇಶ್ವರ -ಸೆ 24 – ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆ ಮಂಗಳೂರು ಮತ್ತು ಅಖಿಲ ಕರ್ನಾಟಕ ಮಂಗಳೂರು ಇದರ ಸಹಬಾಗಿತ್ವದಲ್ಲಿ ಮಂಜೇಶ್ವರ ದ ಎಸ್. .ಟಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಸ್ವಾ ಸ್ಥ್ಯ ಸಂಕಲ್ಪ ಎಂಬಕಾರ್ಯಕ್ರಮವನ್ನು ಆಯೋಜಿಸಲಾಯಿತು. . ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಮಾಜ ಸೇವಕರಾದ ಕೃಷ್ಣ ಶಿವಕೃಪ ಕುಂಜತ್ತೂರು ಮಾಡಿ , ದುಶ್ಚಟಕ್ಕೆ ಬಳಿಯಾದರೆ ಏನೆಲ್ಲತೋಂದರೆಗಳು ಉಂಟಾಗಬಹುದು ಎಂಬುದರ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು . ಈ ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆಯ ಸದಸ್ಯರಾದ ಈಶ್ವರ ಮಾಸ್ತರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆ ಯ ಜಿಲ್ಲಾ ಮೇಲ್ವಿಚಾರಕರಾದ ರಮೇಶ್ , ಎಸ್. .ಟಿ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯಿನಿಯಾದ ಮನೋರಮ ಕಿಣಿ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆ ಮಂಜೇಶ್ವರ ಒಕೂಟದ ಅಧ್ಯಕ್ಷೆ ಶೈಲಜ ಉಪಸ್ಥಿತರಿದ್ದರು. ಸೇವ ಪ್ರತಿನಿಧಿಯಾದ ಸುಖಲತ ಇವರು ಸ್ವಾಗತಿಸಿ, ಸಂಸ್ಕೃತ ಶಿಕ್ಷಕರಾದ ನಾರಯಣ ಹೆಗಡೆಯವರು ವಂದನಾರ್ಪಣೆಗೈದರು. ಸ್ನೇಹಲತ ಕಾರ್ಯಕ್ರಮವನ್ನು ನಿರೂಪಿಸಿದರು.

No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.