ಪ್ರಪಂಚದಲ್ಲಿ ಮಕ್ಕಳ ದಿನ ನವೆಂಬರ್ 20, ಪ್ರತಿವರ್ಷ ಆಚರಿಸಲಾಗುತ್ತದೆ. ಆದರೆ, ಭಾರತದಲ್ಲಿ ಮಕ್ಕಳ ದಿನ 14 ನೇ ನವೆಂಬರ್ ನಲ್ಲಿ ಆಚರಿಸಲಾಗುತ್ತಿದೆ. ಸ್ವತಂತ್ರ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮ ದಿನಾಚರಣೆ . ಈ ದಿನವನ್ನು ಮಕ್ಕಳ ದಿನಾಚರಣೆಯಾಗಿ ಆಯ್ದುಕೊಳ್ಳಲು ಕಾರಣ ನೆಹರು ಅವರಿಗೆ ಮಕ್ಕಳ ಬಗೆಗಿನ ಅಪಾರ ಪ್ರೀತಿ ಮತ್ತು ಮೋಹ. ಮಕ್ಕಳ ದಿನ ಅವನ ಜೀವನದಲ್ಲಿ ಅಕ್ಕರೆಯನ್ನು ಗುರುತಿಸಿ ಈ ದಿನ ಆಚರಿಸಲಾಗುತ್ತದೆ ಆದುದರಿಂದ ಅವರಿಗೆ ಚಾಚಾ ("ಚಾಚಾ" ಚಿಕ್ಕಪ್ಪ, ತಂದೆ ಕಿರಿಯ ಸಹೋದರ ಅರ್ಥ) ಎಂದು ಹೆಸರು ಬಂದಿರುವುದು.
ಮಕ್ಕಳ ದಿನ ವಿಶೇಷವಾಗಿ ಶಾಲಾ ಮಟ್ಟದಲ್ಲಿ, ಭಾರತದಾದ್ಯಂತ ಆಚರಿಸಲಾಗುತ್ತದೆ. ನೈಜ ಆರ್ಥದೊಂದಿಗೆ ಮಕ್ಕಳ ದಿನಾಚರಣೆಯನ್ನು ಆಚರಿಸಿದರೆ ಆಗ ನಿಜವಾಗಿಯೂ ನೆಹರೂರವರಿಗೆ ನಾವು ಸಲ್ಲಿಸುವ ಗೌರವವು ಸಲ್ಲುತ್ತದೆ.
ಮಕ್ಕಳ ದಿನ ವಿಶೇಷವಾಗಿ ಶಾಲಾ ಮಟ್ಟದಲ್ಲಿ, ಭಾರತದಾದ್ಯಂತ ಆಚರಿಸಲಾಗುತ್ತದೆ. ನೈಜ ಆರ್ಥದೊಂದಿಗೆ ಮಕ್ಕಳ ದಿನಾಚರಣೆಯನ್ನು ಆಚರಿಸಿದರೆ ಆಗ ನಿಜವಾಗಿಯೂ ನೆಹರೂರವರಿಗೆ ನಾವು ಸಲ್ಲಿಸುವ ಗೌರವವು ಸಲ್ಲುತ್ತದೆ.
ಎಲ್ಲಾ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು..........
ನಮ್ಮ ಶಾಲೆಯಲ್ಲಿ ದಿ | ಪಂಡಿತ್ ಜವಾಹರ್ ಲಾಲ್ ನೆಹರು ರವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಯಿತು. ಇದರ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮನೋರಮಾ ಕಿಣಿ ಅವರು ವಹಿಸಿದ್ದು ಮಕ್ಕಳಿಗೆ ಶುಭವನ್ನು ಕೋರಿದರು. ದಿನದ ಮಹತ್ವದ ಬಗ್ಗೆ ಶಾಲಾ ಶಿಕ್ಷಕರಾದ ಶ್ರೀ ಗಣೇಶ್ ಪ್ರಸಾದ್ ನಾಯಕ್ ರವರು ತಿಳಿಸಿದರು. ವಿಧ್ಯಾರ್ಥಿಗಳ ಪರವಾಗಿ ಶೋಹಿಬತ್ ಅಸ್ಲಾಮಿಯಾ , ಹಾಗೂ ನೇತ್ರಾವತಿ ಮಕ್ಕಳ ದಿನಾಚರಣೆಯ ಕುರಿತು ಭಾಷಣ ಮಾಡಿದರು.ನೆಹರೂರವರ ಭಾವಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ವೇದಿಕೆಯಲ್ಲಿ ನಾರಾಯಣ .ಜಿ.ಹೆಗ್ಗಡೆ ,ಕೃಷ್ಣ ಕುಮಾರಿ ಟೀಚರ್,ಉಪಸ್ಥಿತರಿದ್ದರು.ಸಮಾಜ ಶಿಕ್ಷಕರಾದ ಶ್ರೀ ವಿರೇಶ್ವರ ಭಟ್ ರವರು ಸ್ವಾಗತಿಸಿದರೆ ಸಮಾಜ ಶಿಕ್ಷಕಿ ಶ್ರೀಮತಿ ಮೋಹಿನಿ ಅವರು ವಂದಿಸಿದರು.
No comments:
Post a Comment