"ಬೆಳಿಯ
ಸಿರಿ ಮೊಳಕೆಯಲ್ಲಿ'
ಎಂಬ
ಮಾತಿನಂತೆ ಇಲ್ಲಿ ಒಂದು ಬಾಲ
ಪ್ರತಿಭೆಯು ತನ್ನ ಕೈಚಳಕದಿಂದ
ಅದ್ಭುತವಾದ ಚಿತ್ರಗಳನ್ನು
ರಚಿಸುವುದು ಮಾತ್ರವಲ್ಲದೇ
ಪತ್ರಿಕೆಗಳಲ್ಲೂ ತನ್ನ ಚಿತ್ರಗಳನ್ನು
ಪ್ರಕಟಿಸುವುದರ ಮೂಲಕ ಅದ್ಭುತವಾದ
ಕೆಲಸವನ್ನು ಮಾಡುತ್ತಿದ್ದಾನೆ.
ಈತನ ಹೆಸರು
ರಜತ್.ಕೆ
ಪ್ರಸ್ತುತ ನಮ್ಮ ಶಾಲೆಯ 8ನೇ
ತರಗತಿಯಲ್ಲಿ ಕಲಿಯುತ್ತಿದ್ದು
,ಶ್ರೀ
ವೆಂಕಟೇಶ್.ಕೆ
ಹಾಗೂ ಶ್ರೀಮತಿ ಹರಿಣಾಕ್ಷಿ
ಜಂಪತಿಗಳ ದ್ವಿತೀಯ ಪುತ್ರನಾಗಿದ್ದಾನೆ..
ಉಜ್ವಲ
ಭವಿಷ್ಯ ಇವನದಾಗಲಿ ಎಂದು ಶುಭ
ಹಾರೈಕೆ ನಮ್ಮದು.
Saturday, 29 November 2014
Friday, 21 November 2014
ಭಾಸ್ಕರಾಚಾರ್ಯ ಸೆಮಿನಾರ್ ಪ್ರಸಂಟೇಶನ್ ಹಾಗೂ ರಾಮಾನುಜನ್ ಪೇಪರ್ ಪ್ರಸಂಟೇಶನ್ ನಲ್ಲಿ ಮಿಂಚಿದ ಪ್ರತಿಭೆಗಳು
ಮಂಜೇಶ್ವರ
ಬಿ.ಆರ್.ಸಿಯಲ್ಲಿ
ತಾರೀಕು 21-11-2014
ರಂದು
ಜರುಗಿದ ಮಂಜೇಶ್ವರ ಉಪ ಜಿಲ್ಲಾ
ಮಟ್ಟದ ಭಾಸ್ಕರಾಚಾರ್ಯ ಸೆಮಿನಾರ್
ಮಂಡನೆಯಲ್ಲಿ ನಮ್ಮ ಶಾಲಾ ಯು.ಪಿ
ವಿಭಾಗದ ಮಾಸ್ಟರ್ ಗಿರೀಶ್.ಕೆ ಗಣಿತ ಶಾಸ್ತ್ರಕ್ಕೆ ಕೇರಳ ಗಣಿತ
ಶಾಸ್ತ್ರಜ್ಞರ ಕೊಡುಗೆ ಎಂಬ
ವಿಷಯದಲ್ಲಿ ತೃತೀಯ ಸ್ಥಾನವನ್ನು
ಪಡೆದುಕೊಂಡಿದ್ದಾನೆ.
ಇವನು
ಪ್ರಸಕ್ತ 7ನೇ
ತರಗತಿ ವಿಧ್ಯಾರ್ಥಿಯಾಗಿದ್ದು
ಶ್ರೀ ಜಯರಾಮ್ ಕಾರಂತ್ ಹಾಗೂ
ಶ್ರೀಮತಿ ಮಮತಾ ದಂಪತಿಗಳ
ಸುಪುತ್ರನಾಗಿದ್ದಾನೆ.
ಮಂಜೇಶ್ವರ
ಬಿ.ಆರ್.ಸಿಯಲ್ಲಿ
ತಾರೀಕು 21-11-2014
ರಂದು
ಜರುಗಿದ ಮಂಜೇಶ್ವರ ಉಪ ಜಿಲ್ಲಾ
ಮಟ್ಟದ ರಾಮಾನುಜನ್ ಪೇಪರ್
ಪ್ರಸಂಟೇಶನ್ ನಲ್ಲಿ ನಮ್ಮ ಶಾಲಾ
ಹೈಸ್ಕೂಲ್ ವಿಭಾಗದ ಕುಮಾರಿ
ಬದ್ರುನ್ನೀಸಾ"ಅಭಿನ್ನಕ ಸಂಖ್ಯೆಗಳು'
(Irrationals) ಎಂಬ
ವಿಷಯದಲ್ಲಿ ಪ್ರಥಮ ಸ್ಥಾನ
ಪಡೆದಿರುತ್ತಾಳೆ.ಇವಳು
ಪ್ರಸಕ್ತ 10ನೇ
ತರಗತಿ ವಿಧ್ಯಾರ್ಥಿನಿಯಾಗಿದ್ದು
ಶ್ರೀ ಅಬ್ದುಲ್ ಸಲಾಂ ಹಾಗೂ ಶ್ರೀಮತಿ
ಬೀಫಾತಿಮಾ ದಂಪತಿಗಳ ಪುತ್ರಿಯಾಗಿದ್ದಾಳೆ.
Wednesday, 19 November 2014
ಮಂಜೇಶ್ವರ ಉಪ ಜಿಲ್ಲಾ ಕ್ರೀಡೋತ್ಸವದಲ್ಲಿ ಮಿಂಚಿದ ಪ್ರತಿಭೆ
ತಾರೀಕು
06-11-2014ರಂದು
ಜರುಗಿದ ಮಂಜೇಶ್ವರ ಉಪ ಜಿಲ್ಲಾ
ಕ್ರೀಡೋತ್ಸವದಲ್ಲಿ ನಮ್ಮ ಶಾಲೆಯ
ಮಾಸ್ಟರ್ ಸೆಕೀರ್
ಎಂ.ಎ
ಯು 3000ಮೀಟರ್
ಓಟದಲ್ಲಿ ದ್ವಿತೀಯ ಸ್ಥಾನವನ್ನು
ಗಳಿಸಿರುತ್ತಾನೆ.ಆಟದ
ಮೈದಾನದಲ್ಲಿ ಪ್ರಶಸ್ತಿಯನ್ನು
ಗಳಿಸುವ ದೃಶ್ಯ
ಮಂಜೇಶ್ವರ ಉಪ ಜಿಲ್ಲಾ ಕ್ರೀಡೋತ್ಸವದಲ್ಲಿ ಮಿಂಚಿದ ಪ್ರತಿಭೆಗಳು
ಡಿಸ್ಕಸ್ ತ್ರೋನಲ್ಲಿ ಸೀನಿಯರ್ ಬಾಯ್ಸ್ ವಿಭಾಗದಲ್ಲಿ ತೃತೀಯ ಸ್ಥಾನ ರಿತೇಶ್.ವಿ 10ನೇ ತರಗತಿ.
ಡಿಸ್ಕಸ್ ತ್ರೋನಲ್ಲಿ ಸೀನಿಯರ್ ಬಾಯ್ಸ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಅಬುಬಕ್ಕರ್ ಸಿದ್ಧಿಕ್ 10ನೇ ತರಗತಿ. ಡಿಸ್ಕಸ್ ತ್ರೋನಲ್ಲಿ ಜೂನಿಯರ್ ಬಾಯ್ಸ್ ವಿಭಾಗದಲ್ಲಿ ದ್ವಿತೀಯ ಸ್ಥಾನ,ಜೂನಿಯರ್ ಬಾಯ್ಸ್ ರಿಲೇನಲ್ಲಿ ದ್ವಿತೀಯ ಸ್ಥಾನ ಪಡೆದ ಅಬ್ದುಲ್ ಸೆಬೀರ್ 10ನೇ ತರಗತಿ.
Sunday, 16 November 2014
ದಿ | ಶ್ರೀ ಶಿವಾನಂದ ಅರಿಬೈಲ್ ಸ್ಮರಣಾರ್ಥ ಅತ್ಯುತ್ತಮ ಸ್ಕಾಟ್ ಹಾಗೂ ಗೈಡ್ ಪ್ರಶಸ್ತಿ 2014
ನಮ್ಮೀ ವಿದ್ಯಾ ಸಂಸ್ಥೆಯಲ್ಲಿ 13-7-2000 ದಿಂದ ಅಧ್ಯಾಪಕರಾಗಿ ಹಾಗೂ ನಮ್ಮೀ ಸಂಸ್ಥೆಯ
ಸ್ಕೌಟ್ ದಳದ ಶಿಕ್ಷಕರಾಗಿ ಇತ್ತೀಚಿಗೆ 07-10-2014 ರಂದು ಸ್ವರ್ಗಸ್ಥರಾದ ದಿ|ಶಿವಾನಂದ
ಅರಿಬೈಲು ಇವರ ಸ್ಮರಣಾರ್ಥವಾಗಿ ನಮ್ಮ ಶಾಲಾ ಸಿಬ್ಬಂದಿ ವರ್ಗದವರು ಪ್ರಾಯೋಜಿಸಿದ ಅತ್ಯುತ್ತಮ ಸ್ಕೌಟ್ ಹಾಗೂ ಗೈಡ್ ಪ್ರಶಸ್ತಿ 2014ರ ಪ್ರಶಸ್ತಿ ಪ್ರಧಾನ ತಾ |15-11-2014 ರಂದು ಕಲೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾಡಲಾಯಿತು.
ಅತ್ಯುತ್ತಮ ಗೈಡ್ ಪ್ರಶಸ್ತಿ 2014 : ಕುಮಾರಿ ನಿಶ್ಮಿತಾ ಡಿ.ಹೆಚ್ 10.ಎ ತರಗತಿ
ಕುಮಾರಿ ನಿಶ್ಮಿತಾ ಡಿ.ಹೆಚ್ ಶ್ರೀಮತಿ ಲಿಲ್ಲಿ ಬಾಯಿ ಟೀಚರ್ ಇವರಿಂದ ಪ್ರಶಸ್ತಿಯನ್ನು ಪಡೆಯುತ್ತಿರುವುದು.
ಅತ್ಯುತ್ತಮ ಸ್ಕೌಟ್ ಪ್ರಶಸ್ತಿ 2014 : ಮಾಸ್ಟರ್ ಶೈಲೇಶ್ 10.ಎ ತರಗತಿ
ಅತ್ಯುತ್ತಮ ಗೈಡ್ ಪ್ರಶಸ್ತಿ 2014 : ಕುಮಾರಿ ನಿಶ್ಮಿತಾ ಡಿ.ಹೆಚ್ 10.ಎ ತರಗತಿ
ಅತ್ಯುತ್ತಮ ಸ್ಕೌಟ್ ಪ್ರಶಸ್ತಿ 2014 : ಮಾಸ್ಟರ್ ಶೈಲೇಶ್ 10.ಎ ತರಗತಿ
Saturday, 15 November 2014
ಸಾಧನಾ ಶ್ರೇಷ್ಠರಿಗೆ ನಗದು ಪುರಸ್ಕಾರ
ತಾ |15-11-2014ರಂದು ಶಾಲಾ ಕಲೋತ್ಸವದ ಸಮಾರೋಪ ಸಮಾರಂಭದಲ್ಲಿ ಕಳೆದ ವರ್ಷದ ಎಸ್.ಎಸ್.ಎಲ್.ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿಧ್ಯಾರ್ಥಿನಿಯರನ್ನು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಪ್ರಥಮ ಸ್ಥಾನ : ಲಾವಣ್ಯ.ಆರ್ ನಗದು ಪುರಸ್ಕಾರ ₹: 5302/- (ರೂಪಾಯಿ ಐದು ಸಾವಿರದ ಮುನ್ನೂರ ಎರಡು).
ದ್ವಿತೀಯ ಸ್ಥಾನ : ಮಾಧುರಿ ನಗದು ಪುರಸ್ಕಾರ ₹: 2453/- (ರೂಪಾಯಿ ಎರಡು ಸಾವಿರದ ನಾನ್ನೂರ ಐವತ್ತಮೂರು).
ಪ್ರಥಮ ಸ್ಥಾನ : ಅನುಷಾ.ಪಿ ನಗದು ಪುರಸ್ಕಾರ ₹: 5496/- (ರೂಪಾಯಿ ಐದು ಸಾವಿರದ ನಾನ್ನೂರ ತೊಂಭತ್ತಾರು).
ಅನುಷಾ.ಪಿ ನಮ್ಮ ಶಾಲಾ ಪ್ರಭಂದಕರಾದ ಶ್ರೀ ದಿನೇಶ್ ಶೆಣೈಯವರಿಂದ ನಗದು ಪುರಸ್ಕಾರ ಪಡೆಯುತ್ತಿರುವುದು. |
ಲಾವಣ್ಯ.ಆರ್ ನಮ್ಮ ಶಾಲಾ ಪ್ರಭಂದಕರಾದ ಶ್ರೀ ದಿನೇಶ್ ಶೆಣೈಯವರಿಂದ ನಗದು ಪುರಸ್ಕಾರ ಪಡೆಯುತ್ತಿರುವುದು. |
ದ್ವಿತೀಯ ಸ್ಥಾನ : ಮಾಧುರಿ ನಗದು ಪುರಸ್ಕಾರ ₹: 2453/- (ರೂಪಾಯಿ ಎರಡು ಸಾವಿರದ ನಾನ್ನೂರ ಐವತ್ತಮೂರು).
ಮಾಧುರಿ ನಮ್ಮ ಶಾಲಾ ಪ್ರಭಂದಕರಾದ ಶ್ರೀ ದಿನೇಶ್ ಶೆಣೈಯವರಿಂದ ನಗದು ಪುರಸ್ಕಾರ ಪಡೆಯುತ್ತಿರುವುದು. |
ಕಲೋತ್ಸವದಲ್ಲಿ ಅತ್ಯುತ್ತಮ ಸಾಧನೆಗೈದ ಕ್ಲಾಸುಗಳಿಗೆ ಪ್ರಶಸ್ತಿ ಫಲಕ
ಕಲೋತ್ಸವದಲ್ಲಿ ಅತ್ಯುತ್ತಮ ಸಾಧನೆಗೈದ ಕ್ಲಾಸುಗಳಿಗೆ ಪ್ರಶಸ್ತಿ ಫಲಕ ವನ್ನು ನೀಡಿ ಗೌರವಿಸಲಾಯಿತು.
ಎಸ್.ಎ.ಟಿ ಪ್ರೌಢ ಶಾಲೆಯಲ್ಲಿ ಶಾಲಾ ಕಲೋತ್ಸವದ ಸಮಾರೋಪ ಸಮಾರಂಭ
ಮಂಜೇಶ್ವರ
ಸ್ಥಳೀಯ ಎಸ್.ಎ.ಟಿ
ಪ್ರೌಢ ಶಾಲೆಯಲ್ಲಿ ಶಾಲಾ ಕಲೋತ್ಸವದ
ಸಮಾರೋಪ ಸಮಾರಂಭವು ನವೆಂಬರ್ 15
ರಂದು
ಜರುಗಿತು. ಶಾಲಾ
ಪ್ರಬಂಧಕರಾದ ಶ್ರೀ .ಎಂ
ದಿನೇಶ್ ಶೆಣೈ ಅಧ್ಯಕ್ಷತೆಯನ್ನು
ವಹಿಸಿ ಹಿತವಚನವನ್ನು ನೀಡಿದರು.
ಆನಂತರ
ವಿವಿಧ ಸ್ಪರ್ಧೆಯ ವಿಜೇತರಿಗೆ
ಬಹುಮಾನ ನೀಡಲಾಯಿತು.
ಇದೇ
ಸಂದರ್ಭದಲ್ಲಿ ಕಳೆದ ಶೈಕ್ಷಣಿಕ
ಸಾಲಿನಲ್ಲಿ ಉತ್ತಮ ಸಾಧನೆ ಮಾಡಿದ
ಎಸ್.ಎಸ್.ಎಲ್.ಸಿ
ಮಕ್ಕಳಿಗೆ ನಗದು ಪುರಸ್ಕಾರ
ನೀಡಲಾಯಿತು.ಪ್ರಸ್ತುತ
ಸಾಲಿನ ತರಗತಿಯ ಉತ್ತಮ ಸಾಧಕರನ್ನು
ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು..
ವೇದಿಕೆಯಲ್ಲಿ
ಪ್ರೌಢ ಶಾಲಾ ರಕ್ಷಕ – ಶಿಕ್ಷಕ
ಸಂಘದ ಅಧ್ಯಕ್ಷರಾದ ಶ್ರೀ ನಿತಿನ್
ಚಂದ್ರ ಪೈ ,
ಸಲಹಾ
ಸಮಿತಿ ಸದಸ್ಯೆ ಲಿಲ್ಲಿ ಬಾಯಿ
ಟೀಚರ್,ಪ್ರೌಢ
ಶಾಲಾ ಮುಖ್ಯೋಪಾಧ್ಯಾಯಿನಿ
ಸುದತಿ.ಬಿ
ಉಪಸ್ಥಿತರಿದ್ದರು.ಈ
ಸಂದರ್ಭದಲ್ಲಿ ಅಗಲಿದ ಸ್ಕೌಟ್
ಅಧ್ಯಾಪಕರಾದ ಮತ್ತು ಸಮಾಜ ವಿಜ್ಞಾನ
ಅಧ್ಯಾಪಕರೂ ಆದ ಶಿವಾನಂದ ಅರಿಬೈಲ್
ಅವರಿಗೆ ಸಂತಾಪ ಸೂಚಿಸಲಾಯಿತು.
9ನೇ ತರಗತಿಯ
ವಿದ್ಯಾರ್ಥಿನಿಯಾದ ಆಯಿಷತ್
ಸಫ್ವಾನ ಸ್ವಾಗತಿಸಿ ಶಾಲಾ ನಾಯಕಿ
ಮಷ್ಮೂಮಾ ವಂದಿಸಿದರು.
ಶಾಲಾ
ಕಲೋತ್ಸವದ ಸಂಚಾಲಕರಾದ ವಿರೇಶ್ವರ
ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.
Friday, 14 November 2014
ಪ್ರತಿಭಾ ಪುರಸ್ಕಾರ 2014
To view the Scholarship details which is going to be distributed to the various students on 15-11-2014 at 3.00p.m in the Validictory function of our school Kalolsavam programme.
ವಿಶೇಷ ಪುರಸ್ಕಾರ
ನಮ್ಮೀ ವಿದ್ಯಾಸಂಸ್ಥೆಯಲ್ಲಿ 13-7-2000 ದಿಂದ ಅಧ್ಯಾಪಕರಾಗಿ ಹಾಗೂ ನಮ್ಮೀ ಸಂಸ್ಥೆಯ ಸ್ಕೌಟ್ ದಳದ ಶಿಕ್ಷಕರಾಗಿ ಇತ್ತೀಚಿಗೆ 07-10-2014 ರಂದು ಸ್ವರ್ಗಸ್ಥರಾದ ದಿ|ಶಿವಾನಂದ ಅರಿಬೈಲು ಇವರ ಸ್ಮರಣಾರ್ಥವಾಗಿ ನಮ್ಮ ಶಾಲಾ ಸಿಬ್ಬಂದಿ ವರ್ಗದವರು ಈ ಕೆಳಗಿನ ಸ್ಮರಣಿಕೆಯನ್ನು BEST SCOUT AWARD 2014-2015 ಎಂದೂ BEST GUIDE AWARD 2014-2015 ಎಂದು ಹೆಸರಿಸಿ ನಾಳೆ (15-11-2014) ಅಪರಾಹ್ನ 3.00ಗೆ ನಡೆಯಲಿರುವ ಶಾಲಾ ಕಲೋತ್ಸವದ ಸಮಾರೋಪ ಸಮಾರಂಭದಲ್ಲಿ ಈ ಕೆಳಗಿನವರಿಗೆ ನೀಡಿ ಗೌರವಿಸಲಿದ್ದೇವೆ.
ಸಿಬ್ಬಂದಿ ವರ್ಗದವರು,
ಎಸ್.ಎ.ಟಿ ಹೈಸ್ಕೂಲ್,
ಮಂಜೇಶ್ವರ
BEST SCOUT AWARD
WINNER 2014
MASTER
SHAILESH.D 10A
BEST GUIDE AWARD
WINNER 2014
KUMARI
NISHMITHA. D.H 10A
ಎಸ್.ಎ.ಟಿ ವಿದ್ಯಾಲಯದಲ್ಲಿ ರಕ್ಷಕರ ಸಮ್ಮೇಳನ
ನವೆಂಬರ 14 ನಮ್ಮ ವಿದ್ಯಾಲಯದಲ್ಲಿ ಸರ್ವ ಶಿಕ್ಷಾ ಅಭಿಯಾನ , ಕೇರಳ 2014-2015 ಹಕ್ಕು ಆಧಾರಿತ ಶಾಲೆ ,ಕ್ಲೀನ್ ಸ್ಕೂಲ್,ಸ್ಮಾರ್ಟ ಸ್ಕೂಲ್,ಶಿಶು ಸೌಹಾರ್ದ ಶಾಲೆ ಎಂಬ ಯೋಜನೆಯಡಿಯಲ್ಲಿ ರಕ್ಷಕರ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ಜರುಗಿತು.ಕಾರ್ಯಕ್ರಮದ ಉದ್ಘಾಟನೆಗೈದ ಮಂಜೇಶ್ವರ ಪಂಚಾಯತಿನ ವಾರ್ಡ ಮೆಂಬರ್ ಶ್ರೀ ಆನಂದ ಮಾಸ್ಟರ್ ಮಕ್ಕಳ ಪುರೋಗತಿಯಲ್ಲಿ ರಕ್ಷಕರ ಪಾತ್ರದ ಬಗ್ಗೆ ಮಾತನಾಡಿದರು. ಶಾಲಾ ಆಡಳಿತ ಮಂಡಳಿಯ ಸಲಹಾ ಸಮಿತಿ ಸದಸ್ಯೆ ಲಿಲ್ಲಿ ಬಾಯಿ ಟೀಚರ್ ಮಾತನಾಡಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ರಕ್ಷಕರ ಪಾತ್ರ ಹಿರಿದು ಎಂದರು. ಶಿಕ್ಷಕಿ ಸುಕನ್ಯಾ ಕೆ.ಟಿ ಹಾಗೂ ಶಿಕ್ಷಕ ನಾಗೇಶ್ .ವಿ ಗಣಿತ ಚಟುವಟಿಕೆ ನಡೆಸಿಕೊಟ್ಟರು.ರಕ್ಷಕ ಶಿಕ್ಷಕ ಸಂಘದ ಘನ ಅಧ್ಯಕ್ಷರಾದ ಶ್ರೀ ನಿತಿನ್ ಚಂದ್ರ ಪೈ ಅಧ್ಯಕ್ಷತೆ ವಹಿಸಿ ಪಿ.ಟಿ.ಎ ಕೈಗೊಳ್ಳಲಿರುವ ಕಾರ್ಯಗಳ ಬಗ್ಗೆ ವಿವರ ನೀಡಿದರು.ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಮನೋರಮಾ ಕಿಣಿ ಪ್ರಾಸ್ತಾವಿಕ ನುಡಿಗೈದರು. ಕಿರಿಯ ಪ್ರಾಥಮಿಕ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಪುತ್ತಬ್ಬ ಕುಂಜತ್ತೂರು,ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಸುದತಿ.ಬಿ ಉಪಸ್ಥಿತರಿದ್ದರು. ಸಿಬ್ಬಂದಿ ಕಾರ್ಯದರ್ಶಿ ಶ್ರೀ ಎನ್.ಜಿ ಹೆಗಡೆ ಸ್ವಾಗತಿಸಿದರು. ಹಿರಿಯ ಶಿಕ್ಷಕರಾದ ಶ್ರೀ ಪುಂಡಲೀಕ ನಾಯಕ್ ,ಮಹೇಶ್.ಕೆ ರಕ್ಷಕರಿಗೆ ತರಗತಿಗಳನ್ನು ನಡೆಸಿಕೊಟ್ಟರು.ರಕ್ಷಕರ ಅಹವಾಲುಗಳನ್ನು ಸ್ವೀಕರಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಪುಂಡಲೀಕ ನಾಯಕ್ ರವರು ವಂದನಾರ್ಪಣೆಗೈದರು.
ಮಕ್ಕಳ ದಿನಾಚರಣೆ 2014
ಪ್ರಪಂಚದಲ್ಲಿ ಮಕ್ಕಳ ದಿನ ನವೆಂಬರ್ 20, ಪ್ರತಿವರ್ಷ ಆಚರಿಸಲಾಗುತ್ತದೆ. ಆದರೆ, ಭಾರತದಲ್ಲಿ ಮಕ್ಕಳ ದಿನ 14 ನೇ ನವೆಂಬರ್ ನಲ್ಲಿ ಆಚರಿಸಲಾಗುತ್ತಿದೆ. ಸ್ವತಂತ್ರ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮ ದಿನಾಚರಣೆ . ಈ ದಿನವನ್ನು ಮಕ್ಕಳ ದಿನಾಚರಣೆಯಾಗಿ ಆಯ್ದುಕೊಳ್ಳಲು ಕಾರಣ ನೆಹರು ಅವರಿಗೆ ಮಕ್ಕಳ ಬಗೆಗಿನ ಅಪಾರ ಪ್ರೀತಿ ಮತ್ತು ಮೋಹ. ಮಕ್ಕಳ ದಿನ ಅವನ ಜೀವನದಲ್ಲಿ ಅಕ್ಕರೆಯನ್ನು ಗುರುತಿಸಿ ಈ ದಿನ ಆಚರಿಸಲಾಗುತ್ತದೆ ಆದುದರಿಂದ ಅವರಿಗೆ ಚಾಚಾ ("ಚಾಚಾ" ಚಿಕ್ಕಪ್ಪ, ತಂದೆ ಕಿರಿಯ ಸಹೋದರ ಅರ್ಥ) ಎಂದು ಹೆಸರು ಬಂದಿರುವುದು.
ಮಕ್ಕಳ ದಿನ ವಿಶೇಷವಾಗಿ ಶಾಲಾ ಮಟ್ಟದಲ್ಲಿ, ಭಾರತದಾದ್ಯಂತ ಆಚರಿಸಲಾಗುತ್ತದೆ. ನೈಜ ಆರ್ಥದೊಂದಿಗೆ ಮಕ್ಕಳ ದಿನಾಚರಣೆಯನ್ನು ಆಚರಿಸಿದರೆ ಆಗ ನಿಜವಾಗಿಯೂ ನೆಹರೂರವರಿಗೆ ನಾವು ಸಲ್ಲಿಸುವ ಗೌರವವು ಸಲ್ಲುತ್ತದೆ.
ಮಕ್ಕಳ ದಿನ ವಿಶೇಷವಾಗಿ ಶಾಲಾ ಮಟ್ಟದಲ್ಲಿ, ಭಾರತದಾದ್ಯಂತ ಆಚರಿಸಲಾಗುತ್ತದೆ. ನೈಜ ಆರ್ಥದೊಂದಿಗೆ ಮಕ್ಕಳ ದಿನಾಚರಣೆಯನ್ನು ಆಚರಿಸಿದರೆ ಆಗ ನಿಜವಾಗಿಯೂ ನೆಹರೂರವರಿಗೆ ನಾವು ಸಲ್ಲಿಸುವ ಗೌರವವು ಸಲ್ಲುತ್ತದೆ.
ಎಲ್ಲಾ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು..........
ನಮ್ಮ ಶಾಲೆಯಲ್ಲಿ ದಿ | ಪಂಡಿತ್ ಜವಾಹರ್ ಲಾಲ್ ನೆಹರು ರವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಯಿತು. ಇದರ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮನೋರಮಾ ಕಿಣಿ ಅವರು ವಹಿಸಿದ್ದು ಮಕ್ಕಳಿಗೆ ಶುಭವನ್ನು ಕೋರಿದರು. ದಿನದ ಮಹತ್ವದ ಬಗ್ಗೆ ಶಾಲಾ ಶಿಕ್ಷಕರಾದ ಶ್ರೀ ಗಣೇಶ್ ಪ್ರಸಾದ್ ನಾಯಕ್ ರವರು ತಿಳಿಸಿದರು. ವಿಧ್ಯಾರ್ಥಿಗಳ ಪರವಾಗಿ ಶೋಹಿಬತ್ ಅಸ್ಲಾಮಿಯಾ , ಹಾಗೂ ನೇತ್ರಾವತಿ ಮಕ್ಕಳ ದಿನಾಚರಣೆಯ ಕುರಿತು ಭಾಷಣ ಮಾಡಿದರು.ನೆಹರೂರವರ ಭಾವಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ವೇದಿಕೆಯಲ್ಲಿ ನಾರಾಯಣ .ಜಿ.ಹೆಗ್ಗಡೆ ,ಕೃಷ್ಣ ಕುಮಾರಿ ಟೀಚರ್,ಉಪಸ್ಥಿತರಿದ್ದರು.ಸಮಾಜ ಶಿಕ್ಷಕರಾದ ಶ್ರೀ ವಿರೇಶ್ವರ ಭಟ್ ರವರು ಸ್ವಾಗತಿಸಿದರೆ ಸಮಾಜ ಶಿಕ್ಷಕಿ ಶ್ರೀಮತಿ ಮೋಹಿನಿ ಅವರು ವಂದಿಸಿದರು.
ಕಲೋತ್ಸವ 2ನೇ ದಿನದ ಕಾರ್ಯಕ್ರಮ
ಕಲೋತ್ಸವದ 2ನೇ ದಿನದ ಕಾರ್ಯಕ್ರಮವು ಬೆಳಗ್ಗೆ 10 ಗಂಟೆಗೆ ಸರಿಯಾಗಿ ಆರಂಭಗೊಂಡಿತು.ವಿದ್ಯಾರ್ಥಿಗಳು ತುಂಬು ಉತ್ಸಾಹದಿಂದ ಪಾಲ್ಗೊಂಡರು.
Thursday, 13 November 2014
ಶಾಲಾ ಕಲೋತ್ಸವ 2014 ಕ್ಕೆ ಚಾಲನೆ
ಇಂದು
ಸ್ಥಳೀಯ ಎಸ್.ಎ.ಟಿ
ಪ್ರೌಢಶಾಲೆಯ 2014
– 2015
ನೇ ಸಾಲಿನ
ಶಾಲಾ ಕಲೋತ್ಸವವು ಶಾಲಾ
ಮುಖ್ಯೋಪಾಧ್ಯಾಯಿನಿ ಶ್ರೀಮತಿ
ಮನೋರಮಾ ಕಿಣಿಯವರ ಔಪಚಾರಿಕ
ಉದ್ಘಾಟನೆಯೊಂದಿಗೆ ವಿದ್ಯುಕ್ತವಾಗಿ
ಆರಂಭವಾಯಿತು.
ಅತಿಥಿಗಳಾಗಿ
ಆಗಮಿಸಿದ ಶ್ರೀಮತಿ ಲಿಲ್ಲಿ ಬಾಯಿ
ಟೀಚರ್ ರವರು ಕಲೋತ್ಸವಕ್ಕೆ ಶುಭ
ಕೋರಿದರು.ಪ್ರೌಢ
ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ
ಕೃಷ್ಣ ಕುಮಾರಿ ಟೀಚರ್ ರವರು
ಪ್ರಾಸ್ತಾವಿಕವಾಗಿ ಮಾತನಾಡಿದರು.ವೇದಿಕೆಯಲ್ಲಿ
ಪಿ.ಟಿ.ಎ
ಅಧ್ಯಕ್ಷರಾದ ಶ್ರೀ ನಿತಿನ್ ಚಂದ್ರ
ಪೈ,ಎಲ್.ಪಿ
ವಿಭಾಗದ ಮುಖ್ಯೋಪಾಧ್ಯಾಯಿನಿ
ಶ್ರೀಮತಿ ಸುದತಿ ಟೀಚರ್,ಸಿಬ್ಬಂದಿ
ವರ್ಗದ ಕಾರ್ಯದರ್ಶಿ ನಾರಾಯಣ
ಗೋಪಾಲಕೃಷ್ಣ ಹೆಗ್ಗಡೆ
ಉಪಸ್ಥಿತರಿದ್ದರು.ಶಾಲಾ
ಕಲೋತ್ಸವದ ಸಂಚಾಲಕರಾದ ಶ್ರೀ
ವಿರೇಶ್ವರ ಭಟ್ ಸ್ವಾಗತಿಸಿದರೆ,ಕಾರ್ಯದರ್ಶಿ
ನಾರಾಯಣ ಗೋಪಾಲಕೃಷ್ಣ ಹೆಗ್ಗಡೆ
ವಂದಿಸಿದರು.ಇದೇ
ಸಂದರ್ಭದಲ್ಲಿ ಶಾಲಾ ಕ್ರೀಡೋತ್ಸವದ
ವಿಜೇತರಿಗೆ ಬಹುಮಾನ ವಿತರಣೆ
ಮಾಡಲಾಯಿತು.ವಿಜೇತರ
ವಿವರವನ್ನು ದೈಹಿಕ ಶಿಕ್ಷಕರಾದ
ಶ್ಯಾಮ ಕೃಷ್ಣ ಪ್ರಕಾಶ್ ನೀಡಿದರು.
ಆನಂತರ
ವಿವಿಧ ವೇದಿಕೆಗಳಲ್ಲಿ ಕಲೋತ್ಸವದ
ಸ್ಪರ್ಧೆಗಳು ಆರಂಭಗೊಂಡಿತು.ಇನ್ನೂ
ಎರಡು ದಿನಗಳ ಕಾಲ ಕಾರ್ಯಕ್ರಮ
ನಡೆಯಲಿರುವುದು.
Monday, 10 November 2014
ಆಟೋಟದಲ್ಲಿ ನಮ್ಮ ಸಾಧನೆ
ಮಂಜೇಶ್ವರ ಉಪ - ಜಿಲ್ಲಾ ಮಟ್ಟದ ಕ್ರೀಡೋತ್ಸವ ದಿನಾಂಕ 5-11-2014 ರಿಂದ 7-11-2014 ರ ತನಕ ಮೀಯಾಪದವು ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿತು.
ಜೂನಿಯರ್
ಬಾಯ್ಸ್ ವೈಯಕ್ತಿಕ ಚಾಂಪಿಯನ್ಶಿಪ್
ಮೊಹಮ್ಮದ್
ರಿಲಾ 10ನೇ
ತರಗತಿ
ಜೂನಿಯರ್ ಹುಡುಗಿಯರ ವಿಭಾಗ
ಫಾತಿಮತ್ ಅಫ್ರೀಸಾ 10ಬಿ ತರಗತಿ
100 MTR - II PLACE
200 MTR - I PLACE
400 MTR - II PLACE
ಕ್ರೀಡಾ ವಿಜೇತ ವಿದ್ಯಾರ್ಥಿಗಳು ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಮನೋರಮಾ ಕಿಣಿ ಹಾಗೂ ದೈಹಿಕ ಶಿಕ್ಷಕರಾದ ಶ್ರೀ ಶ್ಯಾಮ ಕೃಷ್ಣ ಪ್ರಕಾಶ್ ರೊಂದಿಗೆ
Sunday, 9 November 2014
Friday, 7 November 2014
ಸಂಭ್ರಮದ ಕಾರ್ತಿಕ ದೀಪೋತ್ಸವ
ನಮ್ಮ ಶಾಲೆಯಲ್ಲಿ ಕಾರ್ತಿಕ ದೀಪೋತ್ಸವವು ಸಂಭ್ರಮ ಸಡಗರದೊಂದಿಗೆ ಆಚರಿಸಲ್ಪಟ್ಟಿತು. ಸಂಜೆ ಸುಮಾರು 6.15ರ ಸುಮಾರಿಗೆ ಚಿತ್ತೈಸಿದ ದೇವರು ಶಾಲೆಯಲ್ಲಿ ವಿರಾಜಮಾನರಾಗಿದ್ದ ವೇಳೆಯಲ್ಲಿ ಅಧ್ಯಾಪಕ ವೃಂದದವರಿಂದ ಭಜನಾ ಕಾರ್ಯಕ್ರಮವು ಜರುಗಿತು. ಇದೇ ಸಂದರ್ಭದಲ್ಲಿ ದೀಪಾಲಂಕಾರವನ್ನು ಮಾಡಲಾಗತ್ತು. ನಮ್ಮ ಶಾಲಾ ಶಿಕ್ಷಕಿಯಾಗಿರುವ ಶೈಲಜಾ ಕಾಮತ್ ದೀಪೋತ್ಸವ ಸಮಯದಲ್ಲಿ ಅಗತ್ಯವಿರುವ 5 ಅಂಚಿನ ಕಂಚಿನ ದೀಪವನ್ನು ದಾನರೂಪದಲ್ಲಿ ಶಾಲಾ ಪೂಜಾ ಕಮಿಟಿಗೆ ದೀಪ ಬೆಳಗಿಸುವುದರ ಮೂಲಕ ಹಸ್ತಾಂತರಿಸಿದರು.ಪೂಜೆಯ ಬಳಿಕ ನೆರೆದ ಭಕ್ತಾದಿಗಳಿಗೆ ಪ್ರಸಾದವನ್ನು ಹಂಚಲಾಯಿತು.
Wednesday, 5 November 2014
ತುಳಸೀ ಪೂಜೆ
ನಮಸ್ತುಲಸಿ ಕಲ್ಯಾಣಿ, ನಮೋ ವಿಷ್ಣುಪ್ರಿಯೇ ಶುಭೇ||
ನಮೋ ಮೋಕ್ಷಪ್ರದೇ ದೇವಿ, ನಮಃ ಸಂಪತ್ ಪ್ರದಾಯಿನಿ॥
ಅಂದರೆ ಮಂಗಳಕಾರಕಳೂ, ವಿಷ್ಣುವಿಗೆ ಪ್ರಿಯಳಾದವಳೂ, ಶುಭಪ್ರದಳೂ, ಮೋಕ್ಷಪ್ರದಳೂ, ಸಂಪತ್ತನ್ನು ಅನುಗ್ರಹಿಸುವಳೂ ಆದ ತುಳಸೀ ಮಾತೆಗೆ ನನ್ನ ನಮಸ್ಕಾರಗಳು ಎಂದು ಅರ್ಥ. ಅಂತಹ ಶ್ರೇಷ್ಠಳಾದ ತುಳಸೀ ಮಾತೆಗೆ ಭಕ್ತಿ ಶ್ರದ್ಧೆಯಿಂದ ಪೂಜೆಯು 4-11-2014 ರಂದು ನಮ್ಮ ಶಾಲೆಯಲ್ಲಿ ಜರುಗಿತು.ಪೂಜೆಯ ಬಳಿಕ ಪ್ರಸಾದವನ್ನು ಎಲ್ಲರಿಗೂ ವಿತರಿಸಲಾಯಿತು.
ಸರ್ವಾಲಂಕೃತ ತುಳಸೀ ಕಟ್ಟೆ |
Subscribe to:
Posts (Atom)
2022
ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.
-
ತಾರೀಕು 26-6-2018 ರಂದು SAT ಶಾಲೆಯ ಲ್ಲಿ ಮಾದಕವಸ್ತು ವಿರೋಧಿ ದಿನವನ್ನು ಆಚರಿಸಲಾಯಿತು. ಶಾಲಾ ಅಸ್ಸಂಬ್ಲಿ ಯಲ್ಲಿ ಮಾದಕವಸ್ತುಗಳ ವಿರುದ್ಧ ವಿದ್ಯಾರ್ಥಿ...
-
ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.