Wednesday, 29 October 2014

ಕರಾಟೆ ತರಬೇತಿ ಆರಂಭ

ಜಪಾನ್ ಶೋಟೋಕಾನ್ ಕರಾಟೆ ಎಸೋಶಿಯೇಶನ್ (G.S.K.A) ಕಾಸರಗೋಡು ವಿಭಾಗದ ಚೀಫ್ ಇನ್ಸ್ಟ್ರಕ್ಟರ್ ರಾದ ಶ್ರೀ ವಿ.ಬಿ ಸದಾನಂದನ್ ಇವರ ನೇತೃತ್ವದಲ್ಲಿ ಎಸ್.ಎ.ಟಿ ಪ್ರೌಢ ಶಾಲೆಯಲ್ಲಿ ಕರಾಟೆ ತರಗತಿ ಇಂದು ಆರಂಭಗೊಂಡಿತು.ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಮನೋರಮಾ ಕಿಣಿ ಅಧ್ಯಕ್ಷತೆ ವಹಿಸಿ ಕರಾಟೆ ಕಲಿಯುವುದರ ಮಹತ್ವದ ಬಗ್ಗೆ ತಿಳಿಸಿ ಕರಾಟೆ ತರಬೇತಿಗೆ ಶುಭ ಹಾರೈಸಿದರು. ಕರಾಟೆ ಗುರುಗಳು ಮಾತನಾಡಿ ಇದರ ಮಹತ್ವ ಹಾಗೂ ಯಾವ ರೀತಿಯಲ್ಲಿ ತರಗತಿಗಳು ನಡೆಯುತ್ತವೆ ಎಂಬುದರ ಕುರಿತಾಗಿ ಮಕ್ಕಳಿಗೆ ತಿಳಿಸಿದರು. ಪ್ರಸ್ತುತ ಇವರು ಕಾಸರಗೋಡು ಜಿಲ್ಲೆಯಲ್ಲಿ 33 ಬೇರೆ ಬೇರೆ ಶಾಲೆಗಳಲ್ಲಿ ಕರಾಟೆ ತರಬೇತಿಯನ್ನು ನೀಡುತ್ತಿದ್ದಾರೆ. ಪ್ರಸ್ತುತ ನಮ್ಮ ಶಾಲೆಯಲ್ಲಿ  50 ಮಂದಿ ವಿದ್ಯಾರ್ಥಿಗಳು ಹೆಸರನ್ನು ನೊಂದಾಯಿಸಿ ಕರಾಟೆಯನ್ನು ಕಲಿಯುತ್ತಿದ್ದಾರೆ. ದೈಹಿಕ ಶಿಕ್ಷಕರಾದ ಶ್ರೀ ಶ್ಯಾಮ ಕೃಷ್ಣ ಪ್ರಕಾಶರು ಸ್ವಾಗತಿಸಿದರೆ ಹೈಸ್ಕೂಲ್ ವಿಭಾಗದ ಎಸ್.ಆರ್.ಜಿ ಸಂಚಾಲಕರಾದ ಶ್ರೀ ಕಿರಣ್ ಕುಮಾರ್ ರವರು ವಂದಿಸಿದರು.

No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.