ದಿನಾಂಕ
27/10/2014 ನೇ
ಸೋಮವಾರದಂದು ಮಂಜೇಶ್ವರದ ಎಸ್.ಎ.ಟಿ
ಪ್ರೌಢಶಾಲೆಯಲ್ಲಿ ಪರಿಸರ ಸಂಘ
ಮತ್ತು ಕೃಷಿ ಭವನ,ಮಂಜೇಶ್ವರ
ಇದರ ಸಹಯೋಗದೊಂದಿಗೆ ಕೃಷಿ
ಮಾರ್ಗದರ್ಶನ ಮತ್ತು ತರಕಾರಿ
ಬೀಜ ವಿತರಣೆ ಕಾರ್ಯಕ್ರಮ ಜರುಗಿತು..
ಇದರಲ್ಲಿ
ಕೃಷಿ ಅಧಿಕಾರಿಗಳಾದ ಶ್ರೀ
ಅಂಬುಜಾಕ್ಷನ್ ವಿದ್ಯಾರ್ಥಿಗಳಿಗೆ
ನಮ್ಮ ಪರಿಸರದಲ್ಲಿ ಜೈವಿಕ
ವಿಧಾನದಲ್ಲಿ ಮಾಡಬಹುದಾದಂತಹ
ಸ್ವಾವಲಂಬಿ ತರಕಾರಿ ಕೃಷಿಯ ಬಗ್ಗೆ
ಮಾರ್ಗದರ್ಶನವನ್ನು ನೀಡಿದರು.ನಮ್ಮ
ಪರಿಸರದಲ್ಲಿ ನಾವೇ ಬೆಳೆಸುವಂತಹ
ಉತ್ತಮವಾದ ತರಕಾರಿಯನ್ನು
ಸೇವಿಸುವುದರಿಂದ ಆರೋಗ್ಯವಂತರಾಗಲು
ಸಾಧ್ಯ ಎಂದು ತಿಳಿಸಿದರು.ಪ್ರಭಾರ
ಮುಖ್ಯೋಪಾಧ್ಯಾಯಿನಿಯವರಾದ
ಶ್ರೀಮತಿ ಕೃಷ್ಣ ಕುಮಾರಿಯವರು
ತರಕಾರಿ ಕೃಷಿಯನ್ನು ವಿದ್ಯಾಭ್ಯಾಸದ
ಜೊತೆಯಲ್ಲಿ ಮಾಡುವುದರಿಂದ ಆತ್ಮ
ತೃಪ್ತಿಯೂ ,ಅದರ
ಬಗ್ಗೆ ಎಳವೆಯಲ್ಲಿಯೇ ಅರಿವು
ಮೂಡುತ್ತದೆ ಎಂದು ತಿಳಿಸಿದರು.
ಕೃಷಿ
ಸಹಾಯಕ ಅಧಿಕಾರಿಗಳಾದ ಶಿವ
ಪ್ರಸಾದರವರು ಈ ಸಂದರ್ಭದಲ್ಲಿ
ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ
ಕೃಷಿ ಇಲಾಖೆಯಿಂದ ವಿದ್ಯಾರ್ಥಿಗಳಿಗೆ
ತರಕಾರಿ ಬೀಜದ ಕಿಟ್ ವಿತರಿಸಲಾಯಿತು..ಶಾಲೆಯ
ಇಕೋ ಕ್ಲಬ್ ನ ಸಹ ಸಂಚಾಲಕರಾದ
ಶ್ಯಾಮ ಕೃಷ್ಣ ಪ್ರಕಾಶ್ ,ಶಿಕ್ಷಕ
ನಾಗೇಶ್,ಪೂರ್ಣಯ್ಯ
ಪುರಾಣಿಕ್ ಉಪಸ್ಥಿತರಿದ್ದರು.
No comments:
Post a Comment