ಜಪಾನ್ ಶೋಟೋಕಾನ್ ಕರಾಟೆ ಎಸೋಶಿಯೇಶನ್ (G.S.K.A) ಕಾಸರಗೋಡು ವಿಭಾಗದ ಚೀಫ್ ಇನ್ಸ್ಟ್ರಕ್ಟರ್ ರಾದ ಶ್ರೀ ವಿ.ಬಿ ಸದಾನಂದನ್ ಇವರ ನೇತೃತ್ವದಲ್ಲಿ ಎಸ್.ಎ.ಟಿ ಪ್ರೌಢ ಶಾಲೆಯಲ್ಲಿ ಕರಾಟೆ ತರಗತಿ ಇಂದು ಆರಂಭಗೊಂಡಿತು.ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಮನೋರಮಾ ಕಿಣಿ ಅಧ್ಯಕ್ಷತೆ ವಹಿಸಿ ಕರಾಟೆ ಕಲಿಯುವುದರ ಮಹತ್ವದ ಬಗ್ಗೆ ತಿಳಿಸಿ ಕರಾಟೆ ತರಬೇತಿಗೆ ಶುಭ ಹಾರೈಸಿದರು. ಕರಾಟೆ ಗುರುಗಳು ಮಾತನಾಡಿ ಇದರ ಮಹತ್ವ ಹಾಗೂ ಯಾವ ರೀತಿಯಲ್ಲಿ ತರಗತಿಗಳು ನಡೆಯುತ್ತವೆ ಎಂಬುದರ ಕುರಿತಾಗಿ ಮಕ್ಕಳಿಗೆ ತಿಳಿಸಿದರು. ಪ್ರಸ್ತುತ ಇವರು ಕಾಸರಗೋಡು ಜಿಲ್ಲೆಯಲ್ಲಿ 33 ಬೇರೆ ಬೇರೆ ಶಾಲೆಗಳಲ್ಲಿ ಕರಾಟೆ ತರಬೇತಿಯನ್ನು ನೀಡುತ್ತಿದ್ದಾರೆ. ಪ್ರಸ್ತುತ ನಮ್ಮ ಶಾಲೆಯಲ್ಲಿ 50 ಮಂದಿ ವಿದ್ಯಾರ್ಥಿಗಳು ಹೆಸರನ್ನು ನೊಂದಾಯಿಸಿ ಕರಾಟೆಯನ್ನು ಕಲಿಯುತ್ತಿದ್ದಾರೆ. ದೈಹಿಕ ಶಿಕ್ಷಕರಾದ ಶ್ರೀ ಶ್ಯಾಮ ಕೃಷ್ಣ ಪ್ರಕಾಶರು ಸ್ವಾಗತಿಸಿದರೆ ಹೈಸ್ಕೂಲ್ ವಿಭಾಗದ ಎಸ್.ಆರ್.ಜಿ ಸಂಚಾಲಕರಾದ ಶ್ರೀ ಕಿರಣ್ ಕುಮಾರ್ ರವರು ವಂದಿಸಿದರು.
Wednesday, 29 October 2014
ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ
ಸ್ಥಳೀಯ
ಎಸ್. ಎ.
ಟಿ ಪ್ರೌಢ
ಶಾಲೆಯ ಸ್ಕೌಟ್ ಮತ್ತು ಗೈ಼ಡ್
ವಿದ್ಯಾರ್ಥಿಗಳಿಂದ ಮಂಜೇಶ್ವರದ
ಸರಕಾರಿ ಆಸ್ಪತ್ರೆಯಲ್ಲಿ ಸ್ವಚ್ಛತಾ
ಅಭಿಯಾನ ಕಾರ್ಯಕ್ರಮವನ್ನು
ನಡೆಸಲಾಯಿತು.
ಈ
ಸಂದರ್ಭದಲ್ಲಿ ಮಂಜೇಶ್ವರ ಬ್ಲಾಕ್
ಪಂಚಾಯತ್ ಅಧ್ಯಕ್ಷರಾದ ಮುಮ್ತಾಝ್
ಶಮೀರಾ, ಮಂಜೇಶ್ವರ
ಗ್ರಾಮ ಪಂಚಾಯತು ಅಧ್ಯಕ್ಷೆ
ಮುಶ್ರತ್ ಜಹಾನ್,
ಮಂಜೇಶ್ವರದ
ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು
, ಗೈಡ್
ಸಂಚಾಲಕಿ ಸುಖನ್ಯಾ .ಕೆ.ಟಿ
ಟೀಚರ್,ಶಿಕ್ಷಕ
ಲಕ್ಷ್ಮಿದಾಸ್ ಪ್ರಭು ಹಾಗೂ ಎಸ್
ಆರ್.ಜಿ
ಸಂಚಾಲಕರಾದ ಕಿರಣ್ ಕುಮಾರ್
ಉಪಸ್ಥಿತರಿದ್ದರು.
Tuesday, 28 October 2014
ನಮ್ಮ ಪ್ರತಿಭೆಗಳು
ಮಂಜೇಶ್ವರ ಉಪ-ಜಿಲ್ಲಾ ವಿದ್ಯಾರಂಗ ಸಾಹಿತ್ಯೋತ್ಸವದಲ್ಲಿ ಮಿಂಚಿದ ಪ್ರತಿಭೆಗಳು
ಕುಮಾರಿ ನೇತ್ರಾವತಿ 10ನೇ ತರಗತಿ ಪ್ರೌಢಶಾಲಾ ವಿಭಾಗದ ಕಥಾ ರಚನೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾಳೆ.ಇವಳು ಶ್ರೀ ಅಶೋಕ ಹಾಗೂ ಶ್ರೀಮತಿ ಭಾರತಿ ದಂಪತಿಗಳ ಸುಪುತ್ರಿ.ಕುಮಾರಿ ಪಲ್ಲವಿ ಪ್ರಭು 8 ನೇ ತರಗತಿ ಪ್ರೌಢಶಾಲಾ ವಿಭಾಗದ ಕಾವ್ಯ ಮಂಜರಿಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾಳೆ.ಇವಳು ಶ್ರೀ ಪಾಂಡುರಂಗ ಪ್ರಭು ಹಾಗೂ ಶ್ರೀಮತಿ ಅನುಸೂಯ ಪ್ರಭು ದಂಪತಿಗಳ ಸುಪುತ್ರಿ.
ಮಾಸ್ಟರ್ ಜಿತೇಶ್ 7ನೇ ತರಗತಿ ಹಿರಿಯ ಪ್ರಾಥಮಿಕ ವಿಭಾಗದ ಚಿತ್ರ ರಚನೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾನೆ. ಇವನು ಶ್ರೀ ಪುರುಷೋತ್ತಮ ಹಾಗೂ ಶ್ರೀಮತಿ ಚಂದ್ರಾವತಿ ದಂಪತಿಗಳ ಸುಪುತ್ರ.
16-10-2014 ರಂದು
ಮತ್ತು 17-10-2014 ರಂದು
ಸಂತ ಜೋಸೆಫ್ ಕಳಿಯೂರಿನಲ್ಲಿ
ನಡೆದ ವೃತ್ತಿ ಕರಕುಶಲ ಮೇಳಗಳಲ್ಲಿ
ನಮ್ಮ ಶಾಲಾ ವಿದ್ಯಾರ್ಥಿಯಾದ
ಮಾಸ್ಟರ್ ಮೊಹಮ್ಮದ್ ಅಫ್ರಾನ್
ಎಸ್ 6 ನೇ
ತರಗತಿ ಕೊಡೆ ತಯಾರಿಯಲ್ಲಿ ಪ್ರಥಮ
ಸ್ಥಾನವನ್ನು ಪಡೆದಿರುತ್ತಾನೆ.
ಈತ ದಿ.
ಶ್ರೀ ಸೈಯದ್
ಅಸ್ರಾಫ್ ಹಾಗೂ ಶ್ರೀಮತಿ ಕದೀಜ
ದಂಪತಿಗಳ ಪುತ್ರ ಎಸ್ . ಎ
. ಟಿ
ಪ್ರೌಢಶಾಲೆಯ ವಿದ್ಯಾರ್ಥಿ
Monday, 27 October 2014
ಕೃಷಿ ಮಾರ್ಗದರ್ಶನ ಮತ್ತು ತರಕಾರಿ ಬೀಜ ವಿತರಣೆ
ದಿನಾಂಕ
27/10/2014 ನೇ
ಸೋಮವಾರದಂದು ಮಂಜೇಶ್ವರದ ಎಸ್.ಎ.ಟಿ
ಪ್ರೌಢಶಾಲೆಯಲ್ಲಿ ಪರಿಸರ ಸಂಘ
ಮತ್ತು ಕೃಷಿ ಭವನ,ಮಂಜೇಶ್ವರ
ಇದರ ಸಹಯೋಗದೊಂದಿಗೆ ಕೃಷಿ
ಮಾರ್ಗದರ್ಶನ ಮತ್ತು ತರಕಾರಿ
ಬೀಜ ವಿತರಣೆ ಕಾರ್ಯಕ್ರಮ ಜರುಗಿತು..
ಇದರಲ್ಲಿ
ಕೃಷಿ ಅಧಿಕಾರಿಗಳಾದ ಶ್ರೀ
ಅಂಬುಜಾಕ್ಷನ್ ವಿದ್ಯಾರ್ಥಿಗಳಿಗೆ
ನಮ್ಮ ಪರಿಸರದಲ್ಲಿ ಜೈವಿಕ
ವಿಧಾನದಲ್ಲಿ ಮಾಡಬಹುದಾದಂತಹ
ಸ್ವಾವಲಂಬಿ ತರಕಾರಿ ಕೃಷಿಯ ಬಗ್ಗೆ
ಮಾರ್ಗದರ್ಶನವನ್ನು ನೀಡಿದರು.ನಮ್ಮ
ಪರಿಸರದಲ್ಲಿ ನಾವೇ ಬೆಳೆಸುವಂತಹ
ಉತ್ತಮವಾದ ತರಕಾರಿಯನ್ನು
ಸೇವಿಸುವುದರಿಂದ ಆರೋಗ್ಯವಂತರಾಗಲು
ಸಾಧ್ಯ ಎಂದು ತಿಳಿಸಿದರು.ಪ್ರಭಾರ
ಮುಖ್ಯೋಪಾಧ್ಯಾಯಿನಿಯವರಾದ
ಶ್ರೀಮತಿ ಕೃಷ್ಣ ಕುಮಾರಿಯವರು
ತರಕಾರಿ ಕೃಷಿಯನ್ನು ವಿದ್ಯಾಭ್ಯಾಸದ
ಜೊತೆಯಲ್ಲಿ ಮಾಡುವುದರಿಂದ ಆತ್ಮ
ತೃಪ್ತಿಯೂ ,ಅದರ
ಬಗ್ಗೆ ಎಳವೆಯಲ್ಲಿಯೇ ಅರಿವು
ಮೂಡುತ್ತದೆ ಎಂದು ತಿಳಿಸಿದರು.
ಕೃಷಿ
ಸಹಾಯಕ ಅಧಿಕಾರಿಗಳಾದ ಶಿವ
ಪ್ರಸಾದರವರು ಈ ಸಂದರ್ಭದಲ್ಲಿ
ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ
ಕೃಷಿ ಇಲಾಖೆಯಿಂದ ವಿದ್ಯಾರ್ಥಿಗಳಿಗೆ
ತರಕಾರಿ ಬೀಜದ ಕಿಟ್ ವಿತರಿಸಲಾಯಿತು..ಶಾಲೆಯ
ಇಕೋ ಕ್ಲಬ್ ನ ಸಹ ಸಂಚಾಲಕರಾದ
ಶ್ಯಾಮ ಕೃಷ್ಣ ಪ್ರಕಾಶ್ ,ಶಿಕ್ಷಕ
ನಾಗೇಶ್,ಪೂರ್ಣಯ್ಯ
ಪುರಾಣಿಕ್ ಉಪಸ್ಥಿತರಿದ್ದರು.
Friday, 24 October 2014
MOTIVATIONAL CLASS FOR PARENTS
STEP : 2014 ನೇ
ದ್ವೀತಿಯ ಹಂತದ ಭಾಗವಾಗಿ ರಕ್ಷಕರ
awareness ತರಬೇತಿಯು
ದಿನಾಂಕ 24.10.2014 ರಂದು
ಬೆಳಗ್ಗೆ 10 ಗಂಟೆಗೆ
ಸರಿಯಾಗಿ ಅನಂತ ವಿದ್ಯಾ ಸಭಾಂಗಣದಲ್ಲಿ
ನಡೆಸಲಾಯಿತು.ನಮ್ಮ
ಶಾಲೆಯ ಅಧ್ಯಾಪಾಕರಾದ ಶ್ರಿ
ಪುರ್ಣಯ್ಯ ಪುರೀಣಿಕ್ ಹಾಗೂ
ಶ್ರೀಮತಿ ವಸುಧಾಲಕ್ಷ್ಮಿ ಯವರು
ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು
. ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಶಾಲಾ
ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ
ಮನೋಮರಮ ಕಿಣಿ ಯವರು ವಹಿಸಿದರು.
ಈ ಸಂದರ್ಭದಲ್ಲಿ
ಎಸ್ . ಆರ್.
ಜಿ ಸಂಚಾಲಕರಾದ
ಶ್ರೀ ಕಿರಣ್ ಕುಮಾರ್,
ಸಿಬ್ಬಂದಿ
ವರ್ಗ ಕಾರ್ಯದರ್ಶಿಯಾದ ಶ್ರೀ
ನಾರಯಣ ಗೋಪಾಲ ಕೃಷ್ಣಹೆಗಡೆ
ಉಪಸ್ಥಿತರಿದ್ದರು. ಶಿಕ್ಷಕಿ
ಸುರೇಖ ಮಲ್ಯ ಸ್ವಾಗತಿಸಿ ,ಶ್ರೀಮತಿ
ವಸುಧಾಲಕ್ಷ್ಮಿ ಧನ್ಯವಾದವನ್ನು
ನೀಡಿದರು.
ಯು.ಎನ್.ಓ ದಿನಾಚರಣೆ
ಎಸ್.ಎ.ಟಿ
ಪ್ರೌಢ ಶಾಲೆಯಲ್ಲಿ ಅಕ್ಟೋಬರ್
24 2014 ರಂದು
ಯು.ಎನ್.ಓ
ದಿನಾಚರಣೆಯನ್ನು ಆಚರಿಸಲಾಯಿತು.ಸಂಪನ್ಮೂಲ
ವ್ಯಕ್ತಿಗಳಾಗಿ ಆಗಮಿಸಿದ ಲಿಲ್ಲಿ
ಬಾಯಿ ಟೀಚರ್ ರವರು ಯು.ಎನ್.ಓ
ಉಗಮ,ಉದ್ದೇಶ
ಮತ್ತು ಬೆಳವಣಿಗೆಗಳನ್ನು ಸಭೆಗೆ
ತಿಳಿಸಿ ಸಂಪೂರ್ಣ ಮಾಹಿತಿ
ನೀಡಿದರು.ಶಾಲಾ
ಮುಖ್ಯೋಪಾಧ್ಯಾಯನಿ ಶ್ರೀಮತಿ
ಮನೋರಮಾ ಕಿಣಿ ಸಭಾಧ್ಯಕ್ಷತೆ
ವಹಿಸಿದ್ದರು.
ಪ್ರೌಢಶಾಲಾ
ಸಮಾಜ ವಿಜ್ಞಾನ ಶಿಕ್ಷಕಿ ಶ್ರೀಮತಿ
ಮೋಹಿನಿ ಟೀಚರ್ ರವರು ಸ್ವಾಗತಿಸಿದರೆ
ಸಮಾಜ ವಿಜ್ಞಾನ ಶಿಕ್ಷಕ ಜಿ.ವಿರೇಶ್ವರ
ಭಟ್ ವಂದಿಸಿದರು.ಚಿತ್ರಕಲಾ
ಅಧ್ಯಾಪಕರಾದ ಜಯಪ್ರಕಾಶ್ ಶೆಟ್ಟಿ
,ಶಿಕ್ಷಕರಾದ
ದಾಸಪ್ಪ ರೈ ಉಪಸ್ಥಿತರಿದ್ದರು.
Monday, 20 October 2014
ಎಸ್.ಎ.ಟಿ ಪ್ರೌಢ ಶಾಲೆಯಲ್ಲಿ ಕ್ರೀಡೋತ್ಸವ 2014 ಕ್ಕೆ ಚಾಲನೆ
ಎಸ್.ಎ.ಟಿ ಪ್ರೌಢ ಶಾಲೆಯಲ್ಲಿ ಕ್ರೀಡೋತ್ಸವ 2014 ಕ್ಕೆ ಚಾಲನೆ
ಉತ್ತಮ ಆರೋಗ್ಯವನ್ನು ಕಾಪಾಡಲು ಕ್ರೀಡೆಗಳು ಸಹಕಾರಿ ಎಂದು ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಮನೋರಮಾ ಕಿಣಿಯವರು ಅಭಿಪ್ರಾಯ ಪಟ್ಟರು. ಅವರು ಶಾಲಾ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಮಾತಾಡಿದರು. ಹಿರಿಯ ಶಿಕ್ಷಕಿಯಾದ ಶ್ರೀಮತಿ ಕೃಷ್ಣ ಕುಮಾರಿ ಟೀಚರ್ ಉಪಸ್ಥಿತರಿದ್ದರು. ಕ್ರೀಡೋತ್ಸವದ ಸಂಚಾಲಕರಾದ ಶ್ರೀ ಶ್ಯಾಮ ಕೃಷ್ಣ ಪ್ರಕಾಶ್ ಮಕ್ಕಳಿಗೆ ಪ್ರತಿಜ್ಞಾವಿಧಿಯನ್ನು ಭೋದಿಸಿದರು.ಸುಮಾರು 300ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಕ್ರೀಡೋತ್ಸವದಲ್ಲಿ ಪಾಲ್ಗೊಂಡಿದ್ದರು.
ಉತ್ತಮ ಆರೋಗ್ಯವನ್ನು ಕಾಪಾಡಲು ಕ್ರೀಡೆಗಳು ಸಹಕಾರಿ ಎಂದು ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಮನೋರಮಾ ಕಿಣಿಯವರು ಅಭಿಪ್ರಾಯ ಪಟ್ಟರು. ಅವರು ಶಾಲಾ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಮಾತಾಡಿದರು. ಹಿರಿಯ ಶಿಕ್ಷಕಿಯಾದ ಶ್ರೀಮತಿ ಕೃಷ್ಣ ಕುಮಾರಿ ಟೀಚರ್ ಉಪಸ್ಥಿತರಿದ್ದರು. ಕ್ರೀಡೋತ್ಸವದ ಸಂಚಾಲಕರಾದ ಶ್ರೀ ಶ್ಯಾಮ ಕೃಷ್ಣ ಪ್ರಕಾಶ್ ಮಕ್ಕಳಿಗೆ ಪ್ರತಿಜ್ಞಾವಿಧಿಯನ್ನು ಭೋದಿಸಿದರು.ಸುಮಾರು 300ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಕ್ರೀಡೋತ್ಸವದಲ್ಲಿ ಪಾಲ್ಗೊಂಡಿದ್ದರು.
Sunday, 19 October 2014
ಚಿರಸ್ಮರಣೆ
ಚಿರಸ್ಮರಣೆ
ಶಿವಾನಂದ
ಅರಿಬೈಲು
ಜನನ
– 10.01.1973 ಮರಣ
– 07.10.2014
ನಿಮ್ಮ
ಅಕಾಲಿಕ ಮರಣ
ನಮ್ಮ
ಅಂತರಾಳದ ತಲ್ಲಣ
ಸೌಮ್ಯ
, ಸಜ್ಜನಿಕೆಯ
ಹರಿಕಾರ
ಸ್ಕೌಟ್
ದಳದ ಶಿಸ್ತಿನ ಗುರಿಕಾರ
ನಿಮಗಿದೋ
ಅಂತಿಮ ನಮನ
ದೊರೆಯಲಿ
ಆತ್ಮಕ್ಕೆ ಚಿರಶಾಂತಿ
ಇದೋ
ನಮ್ಮೆಲ್ಲರ ಭಾವ ಪೂರ್ಣ ಶೃದ್ಧಾಂಜಲಿ
ಪ್ರಬಂಧಕರು
ಮತ್ತು ಆಡಳಿತ ಮಂಡಳಿ ಸದಸ್ಯರು,
ಅಧ್ಯಕ್ಷರು
ಮತ್ತು ಸದಸ್ಯರು, ರಕ್ಷಕ
ಶಿಕ್ಷಕ ಸಂಘ
ಮುಖ್ಯೋಪಾಧ್ಯಾಯರು,
ಅಧ್ಯಾಪಕ
ವೃಂದ , ಸಿಬ್ಬಂದಿ
ವರ್ಗ ಹಾಗೂ ವಿದ್ಯಾರ್ಥಿಗಳು.
ಎಸ್.
ಎ. ಟಿ.
ವಿದ್ಯಾ
ಸಂಸ್ಥೆಗಳು , ಮಂಜೇಶ್ವರ
Saturday, 18 October 2014
Thursday, 9 October 2014
Motivation Class FOR sTD x
STEPS : 2014ನೇ
ಪ್ರಥಮ ಹಂತವಾಗಿ 10 ನೇ
ತರಗತಿಯ ಮಕ್ಕಳಿಗಿರುವ Motivation
Class ನ್ನು
9.10.2014 ನೇ
ಗುರುವಾರ ದಂದು ಅನಂತ ವಿದ್ಯಾ
ಸಭಾಂಗಣದಲ್ಲಿ ನಡೆಸಲಾಯಿತು.
ಈ ತರಬೇತಿಯನ್ನು
ಬಂಗ್ರ ಮಂಜೇಶ್ವರ ಶಾಲೆಯ ಶಿಕ್ಷಕಿಯಾದ
ಶ್ರೀಮತಿ ಗಾಯತ್ರಿ ಟೀಚರ್ ರವರು
ನಡೆಸಿಕೊಟ್ಟರು. ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಶಾಲಾ
ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ
ಮನೋಮರಮ ಕಿಣಿ ಯವರು ವಹಿಸಿದರು.ಶ್ರೀಮತಿ
ವಸುಧಾಲಕ್ಷ್ಮಿ ಸ್ವಾಗತಿಸಿದರು.
ತರಬೇತಿಯಲ್ಲಿ
10 ನೇ
ತರಗತಿಯ ಎಲ್ಲಾ ಮಕ್ಕಳು ಬಹಳ
ಆಸಕ್ತಿಯಿಂದ ಭಾಗವಹಿಸಿದರು.
ಅಧ್ಯಾಪಾಕರಾದ
ಶ್ರಿ ಪುರ್ಣಯ್ಯ ಪುರಾಣಿಕ್
ವಂದಿಸಿದರು.
Sunday, 5 October 2014
ಶ್ರೀ ಶಾರದಾ ಮಹೋತ್ಸವ
ನಮ್ಮ
ಶಾಲೆಯಲ್ಲಿ ಶ್ರೀ ಶಾರದಾ ಮಹೋತ್ಸವವು
ತಾ 30-9-2014 ರಿಂದ
4-10-2014 ತನಕ
ಜರುಗಿತು.ಅಧ್ಯಾಪಕರು
ಮತ್ತು ವಿದ್ಯಾರ್ಥಿಗಳು ಭಕ್ತಿ
ಶ್ರದ್ಧೆಯಿಂದ ಪಾಲ್ಗೊಂಡರು.
Friday, 3 October 2014
ಗಾಂಧೀ ಜಯಂತಿ ಆಚರಣೆ
ಗಾಂಧೀ ಜಯಂತಿ ಆಚರಣೆಯು ಸಂಭ್ರಮ ಸಡಗರದೊಂದಿಗೆ ನಮ್ಮ ಶಾಲೆಯಲ್ಲಿ ಆಚರಿಸಲಾಯಿತು. ತಕಲಿಯಿಂದ ನೂಲು ತೆಗೆಯುವುದು,ದೇಶ ಭಕ್ತಿಗೀತೆ ಹಾಗೂ ಸರ್ವ ಧರ್ಮ ಪ್ರಾರ್ಥನೆಯು ಕೂಡಾ ಜರುಗಿತು.ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.
Thursday, 2 October 2014
ಗಾಂಧಿ ಪನೋರಮಕ್ಕೆ ಚಾಲನೆ.
ಎಸ್
.ಎ.
ಟಿ ಪ್ರೌಢ
ಶಾಲೆಯಲ್ಲಿ ಗಾಂಧಿ ಪನೋರಮಕ್ಕೆ
ಚಾಲನೆ.
ಮಂಜೇಶ್ವರ
– ಅಕ್ಟೋಬರ್ - 02 ಗಾಂಧಿಜಯಂತಿಯ
ಶುಭ ಸಂದರ್ಭದಲ್ಲಿ ವಿನೋಬಾ
ವೆಂಕಟೇಶ್ ರಾವ್ ಶಾಂತಿ ಸೇನಾ
ಫೌಂಡೇಶನ್ . ರಿ
. ಮಂಜೇಶ್ವರ
ಮತ್ತು ಗಾಂಧಿ ಮೀಡಿಯಾ ಫೌಂಡೇಶನ್
ತಿರುವನಂತಪುರ ಇವರ ಆಶ್ರಯದಲ್ಲಿ
ಮಕ್ಕಳಿಂದಲೇ ಚಿತ್ರೀಕರಣಗೊಂಡ
ಗಾಂಧಿ ಪನೋರಮ ಚಲನ ಚಿತ್ರದ
ಮಂಜೇಶ್ವರ ಬ್ಲಾಕ್ ಮಟ್ಟದಲ್ಲಿ
ಮಂಜೇಶ್ವರ ಬ್ಲಾಕ್ ಉಪಾಧ್ಯಕ್ಷರಾದ
ಹರ್ಷದ್ ವರ್ಕಾಡಿಯವರು ಚಾಲನೆ
ನೀಡಿದರು. ಈ
ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಶಾಲಾ ಮುಖ್ಯೋಪಾಧಾಯನಿಯಾದ ಮನೋರಮ
ಕಿಣಿ ವಹಿಸಿದರು. ಈ
ಸಂದರ್ಭದಲ್ಲಿ ವಿನೋಬಾ ವೆಂಕಟೇಶ್
ರಾವ್ ಶಾಂತಿ ಸೇನಾ ಫೌಂಡೇಶನ್ .
ರಿ .
ಮಂಜೇಶ್ವರ
ಇದರ ಕೋಶಾಧಿಕಾರಿಯಾದ ದಿವಾಕರ್
ಎಸ್.ಜೆ.
, ಮಂಜೇಶ್ವರ
ಪಂಚಾಯತ್ ಸದಸ್ಯರಾದ ಆನಂದ ಮಾಸ್ಟರ್
, ಲಿಲ್ಲಿ
ಬಾಯಿ ಟೀಚರ್ ಹಾಗೂ ಶಾಲಾ ಶಿಕ್ಷಕರು
ಉಪಸ್ಥಿತರಿದ್ದರು. ಶಾಲಾ
ಶಿಕ್ಷಕರಾದ ಶಿವಾನಂದ ಅರಿಬೈಲ್
ಸ್ವಾಗತಿಸಿದರು, ನಾಗೇಶ್
ವಿ ವಂದಿಸಿದರು, ಕಿರಣ್
ಕುಮಾರ್ ಕಾರ್ಯಕ್ರಮವನ್ನು
ಸಂಯೋಜಿಸಿದರು., ಶಾಂತಾರಾಮ್
ಎಸ್. ಕಾರ್ಯಕ್ರಮವನ್ನು
ನಿರೂಪಿಸಿದರು. ಸುಮಾರು
ಒಂದುವರೆಗಂಟೆಗಳಕಾಲ ಚಲನಚಿತ್ರಗಳನ್ನು
ವಿದ್ಯಾರ್ಥಿಗಳು ಕುತೂಹಲದಿಂದ
ವಿಕ್ಷಿಸಿದರು.
ಸ್ವಚ್ಛತಾ ಅಭಿಯಾನಕ್ಕೆ ಚಾಲನೆ
ನಮ್ಮ ಶಾಲಾ ಸ್ಕೌಟು ಮತ್ತು ಗೈಡು ದಳದ ಸಹಕಾರದೊಂದಿಗೆ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.ಇದನ್ನು ಶಾಲಾ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಮನೋರಮಾ ಕಿಣಿಯವರು ಸಾಂಕೇತಿಕವಾಗಿ ಶಾಲಾ ಪರಿಸರದಲ್ಲಿ ಗುಡಿಸುವುದರ ಮೂಲಕ ಉದ್ಘಾಟಿಸಿದರು.ಶಾಲಾ ಸ್ಕೌಟು ದಳದ ಶಿಕ್ಷಕ ಶಿವಾನಂದ ಅರಿಬೈಲ್ ಗೈಡು ದಳದ ಶಿಕ್ಷಕಿಯಾದ ಸುಕನ್ಯಾ ಕೆ.ಟಿ,ಹಿರಿಯ ಅಧ್ಯಾಪಕಿ ಕೃಷ್ಣ ಕುಮಾರಿ.ಕೆ ಹಾಗೂ ಇತರ ಅಧ್ಯಾಪಕರು ಭಾಗವಪಿಸಿದ್ದರು.
Subscribe to:
Posts (Atom)
2022
ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.
-
ತಾರೀಕು 26-6-2018 ರಂದು SAT ಶಾಲೆಯ ಲ್ಲಿ ಮಾದಕವಸ್ತು ವಿರೋಧಿ ದಿನವನ್ನು ಆಚರಿಸಲಾಯಿತು. ಶಾಲಾ ಅಸ್ಸಂಬ್ಲಿ ಯಲ್ಲಿ ಮಾದಕವಸ್ತುಗಳ ವಿರುದ್ಧ ವಿದ್ಯಾರ್ಥಿ...
-
ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.