Thursday, 6 June 2019

ಶಾಲಾಪ್ರವೇಶೋತ್ಸವ ಕಾರ್ಯಕ್ರಮ
 ಎಸ್ ಎ ಟಿ ಶಾಲೆಗಳು

ಎಸ್ ಎ ಟಿ ಶಾಲೆ ಮಂಜೇಶ್ವರ ಮತ್ತು ಎಸ್ ಎ ಟಿ ಎಲ್ ಪಿ ಶಾಲೆ ಇದರ ಶಾಲಾ ಪ್ರವೇಶೋತ್ಸವವು ತಾರೀಕು 6-6-2019 ರಂದು ಜಂಟಿಯಾಗಿ ನೆರವೇರಿತು. ಬೆಳಗ್ಗೆ ಶಾಲಾ ಅಸೆಂಬ್ಲಿಯ ಬಳಿಕ ನಡೆದ ಘೋಷಯಾತ್ರೆಯೊಂದಿಗೆ ಹೊಸ ಶೈಕ್ಷಣಿಕ ವರ್ಷಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು. ಶಿಶು ಸ್ನೇಹಿ ರೀತಿಯಲ್ಲಿ ಅಲಂಕರಿಸಿದ ಅನಂತ ವಿದ್ಯಾ ಸಭಾಂಗಣದಲ್ಲಿ, ಬಳಿಕ ಸಭಾ ಕಾರ್ಯಕ್ರಮ ಜರಗಿತು.ವಾರ್ಡ್ ಮೆಂಬರ್ ಸುಪ್ರಿಯಾ ಶೆಣೈ, ಹೈಸ್ಕೂಲ್ ಪಿ ಟಿ ಎ ಅಧ್ಯಕ್ಷ ಅಬ್ದುಲ್ ಬಷೀರ್,ಎಲ್ ಪಿ,ಪಿ ಟಿ ಎ ಅಬ್ದುಲ್ಲ ಗುಡ್ಡೇಕೇರಿ ಮತ್ತು ಪಿ ಟಿ ಎ ಪದಾಧಿಕಾರಿಗಳು ಉಪಸ್ಥಿತರಿದ್ದರು.ಶಾಲಾ ಪ್ರಬಂಧಕರಾದ   ಕೃಷ್ಣ ಭಟ್ ರವರು ಅಧ್ಯಕ್ಷತೆ ವಹಿಸಿದರು. ಎಲ್ ಪಿ, ಪಿ ಟಿ ಎ ವತಿಯಿಂದ ಮತ್ತು ಶಾಲಾ ಆಢಳಿತ ಮಂಡಳಿ ವತಿಯಿಂದ ಮಕ್ಕಳಿಗೆ ಕಲಿಕೋಪಕರಣ ವಿತರಿಸಲಾಯಿತು. ಮುಖ್ಯೋಪಾಧ್ಯಾಯರಾದ ಮುರಳಿ ಕೃಷ್ಣ ಸ್ವಾಗತಿಸಿದರು,ಎಲ್ ಪಿ ಮುಖ್ಯೋಪಾಧ್ಯಾಯ ತೇಜೇಶ್ ಕಿರಣ್ ಹೆತ್ತವರಿಗೆ ಸೂಚನೆಗಳನ್ನು ಕೊಟ್ಟರು. ಎಸ್ ಆರ್ ಜಿ ಸಂಚಾಲಕ ಗಣೇಶ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.ಶ್ಯಾಮ್ ಕೃಷ್ಣ ರವರು ವಂದಿಸಿದರು. ಶಾಲಾವಿದ್ಯಾರ್ಥಿಗಳು, ರಕ್ಷಕರು ಮತ್ತು ಎರಡೂ ಶಾಲೆಯ ಹಲವು ಅಧ್ಯಾಪಕರು  ಉಪಸ್ಥಿತರಿದ್ದರು.ಸಿಹಿತಿಂಡಿ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Thursday, 7 March 2019

ನವೆಂಬರ್ 18ರಂದು ನಡೆದ ರಾಮಾಯಣ ಪರೀಕ್ಷೆಯಲ್ಲಿ   ಎಸ್. ಎ.ಟಿ.ಪ್ರೌಢ ಶಾಲೆಯ 9ನೇ ತರಗತಿಯ ಕುಮಾರಿ ಚೈತ್ರ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನವನ್ನುಗಳಿಸಿದ್ದಾಳೆ.

Sunday, 25 November 2018

ಕಾಸರಗೋಡು ಜಿಲ್ಲಾ ಕರಕುಶಲ ಮೇಳದ ಕೊಡೆ ನಿರ್ಮಾಣ ವಿಭಾಗದಲ್ಲಿ ಪ್ರಥಮ Aಗ್ರೇಡ್ ನೊಂದಿಗೆ  ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ  Aಗ್ರೇಡ್  ಪಡೆದು ಎಸ್.ಎ.ಟಿ ಪ್ರೌಢಶಾಲೆಯ ಹತ್ತನೆಯ ತರಗತಿಯ ಮೊಹಮ್ಮದ್ ಅಫ್ರಾನ್ ಶಾಲೆಗೆ ಕೀರ್ತಿ ತಂದಿದ್ದಾನೆ.

Thursday, 11 October 2018

October 2 .2018 ಎಸ್. ಎ.ಟಿ.ಶಾಲೆಯಲ್ಲಿ       ಮಹಾತ್ಮಗಾಂಧಿಜಯಂತಿ ಆಚರಣೆ .

Saturday, 29 September 2018

ಇತ್ತೀಚೆಗೆ 2018ನೇ ಸಾಲಿನ



ಎಸ್ .ಎ.ಟಿ.ಪ್ರೌಢಶಾಲೆಯಲ್ಲಿ ಶಾಲಾ ಕಲೋತ್ಸವ ಹಾಗೂ ಕ್ರೀಡೋತ್ಸವದಲ್ಲಿ ಜರುಗಿತು.

Thursday, 20 September 2018




ಎಸ್. ಎ.ಟಿ.ಪ್ರೌಢ ಶಾಲೆ ಯ ವಿದ್ಯಾರ್ಥಿಗಳ ಕರಕುಶಲ ಮೇಳ ನಡೆಯಿತು .ಮುಖ್ಯೋಪಾಧ್ಯಾಯರಾದ ಮುರಳಿಕೃಷ್ಣ ಎನ್ ಶುಭಕೋರಿದರು  ಕಲಾ ಅಧ್ಯಾಪಕ ಜಯಪ್ರಕಾಶ್ ಶೆಟ್ಟಿ ನೇತೃತ್ವವಹಿಸಿ ಎಲ್ಲಾ ಅಧ್ಯಾಪಕರು ಸಹಕರಿಸಿದರು 

Thursday, 6 September 2018


ಮಂಜೇಶ್ವರ ಸೆಪ್ಟೆಂಬರ 5: ಎಸ್ .ಎ.ಟಿ ಶಾಲೆಯಲ್ಲಿ  ಶಿಕ್ಷಕರ ದಿನಾಚರಣೆಯನ್ನು ನಿವೃತ್ತ ಮುಖೋಪಧ್ಯಾಯರಾದ ಶ್ರೀ ಗಣಪತಿ ಭಟ್ ಅವರನ್ನು ಸನ್ಮಾನಿಸಿ ಆಚರಣೆ ಮಾಡಲಾಯಿತು 

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.