Thursday, 6 June 2019

ಶಾಲಾಪ್ರವೇಶೋತ್ಸವ ಕಾರ್ಯಕ್ರಮ
 ಎಸ್ ಎ ಟಿ ಶಾಲೆಗಳು

ಎಸ್ ಎ ಟಿ ಶಾಲೆ ಮಂಜೇಶ್ವರ ಮತ್ತು ಎಸ್ ಎ ಟಿ ಎಲ್ ಪಿ ಶಾಲೆ ಇದರ ಶಾಲಾ ಪ್ರವೇಶೋತ್ಸವವು ತಾರೀಕು 6-6-2019 ರಂದು ಜಂಟಿಯಾಗಿ ನೆರವೇರಿತು. ಬೆಳಗ್ಗೆ ಶಾಲಾ ಅಸೆಂಬ್ಲಿಯ ಬಳಿಕ ನಡೆದ ಘೋಷಯಾತ್ರೆಯೊಂದಿಗೆ ಹೊಸ ಶೈಕ್ಷಣಿಕ ವರ್ಷಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು. ಶಿಶು ಸ್ನೇಹಿ ರೀತಿಯಲ್ಲಿ ಅಲಂಕರಿಸಿದ ಅನಂತ ವಿದ್ಯಾ ಸಭಾಂಗಣದಲ್ಲಿ, ಬಳಿಕ ಸಭಾ ಕಾರ್ಯಕ್ರಮ ಜರಗಿತು.ವಾರ್ಡ್ ಮೆಂಬರ್ ಸುಪ್ರಿಯಾ ಶೆಣೈ, ಹೈಸ್ಕೂಲ್ ಪಿ ಟಿ ಎ ಅಧ್ಯಕ್ಷ ಅಬ್ದುಲ್ ಬಷೀರ್,ಎಲ್ ಪಿ,ಪಿ ಟಿ ಎ ಅಬ್ದುಲ್ಲ ಗುಡ್ಡೇಕೇರಿ ಮತ್ತು ಪಿ ಟಿ ಎ ಪದಾಧಿಕಾರಿಗಳು ಉಪಸ್ಥಿತರಿದ್ದರು.ಶಾಲಾ ಪ್ರಬಂಧಕರಾದ   ಕೃಷ್ಣ ಭಟ್ ರವರು ಅಧ್ಯಕ್ಷತೆ ವಹಿಸಿದರು. ಎಲ್ ಪಿ, ಪಿ ಟಿ ಎ ವತಿಯಿಂದ ಮತ್ತು ಶಾಲಾ ಆಢಳಿತ ಮಂಡಳಿ ವತಿಯಿಂದ ಮಕ್ಕಳಿಗೆ ಕಲಿಕೋಪಕರಣ ವಿತರಿಸಲಾಯಿತು. ಮುಖ್ಯೋಪಾಧ್ಯಾಯರಾದ ಮುರಳಿ ಕೃಷ್ಣ ಸ್ವಾಗತಿಸಿದರು,ಎಲ್ ಪಿ ಮುಖ್ಯೋಪಾಧ್ಯಾಯ ತೇಜೇಶ್ ಕಿರಣ್ ಹೆತ್ತವರಿಗೆ ಸೂಚನೆಗಳನ್ನು ಕೊಟ್ಟರು. ಎಸ್ ಆರ್ ಜಿ ಸಂಚಾಲಕ ಗಣೇಶ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.ಶ್ಯಾಮ್ ಕೃಷ್ಣ ರವರು ವಂದಿಸಿದರು. ಶಾಲಾವಿದ್ಯಾರ್ಥಿಗಳು, ರಕ್ಷಕರು ಮತ್ತು ಎರಡೂ ಶಾಲೆಯ ಹಲವು ಅಧ್ಯಾಪಕರು  ಉಪಸ್ಥಿತರಿದ್ದರು.ಸಿಹಿತಿಂಡಿ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.