Wednesday, 29 August 2018

ನಮ್ಮ ಶಾಲೆಯ ವಿದ್ಯಾರ್ಥಿನಿಯಾದ ದಿವಂಗತ .ಕು.ಪ್ರತಿಭಾ ಅವಳ ಹೆತ್ತವರಿಗೆ ಶಾಲಾ ವತಿಯಿಂದ ಸಂಗ್ರಹಿಸಿದ ಹಣವನ್ನು
ಶಾಲಾ ಪ್ರಬಂಧಕರು ಮತ್ತು ಪಿ.ಟಿ.ಎ ಅಧ್ಯಕ್ಷರು  ನೀಡಿ
ಸಾಂತ್ವನ ಹೇಳಿದರು 

Wednesday, 15 August 2018


  ಎಸ್.ಎ.ಟಿ.ಶಾಲೆ,ಮಂಜೇಶ್ವರ 72ನೇ ಸ್ವಾತಂತ್ರ್ಯ ದಿನಾಚರಣೆ 

Wednesday, 1 August 2018

ಜುಲೈ 31. ಎಸ್.ಎ.ಟಿ.ಪ್ರೌಢಶಾಲೆಯಲ್ಲಿ ಶಾಲಾ ಹಿಂದಿ ಕ್ಲಬ್ ನ ನೇತೃತ್ವದಲ್ಲಿ    ಖ್ಯಾತ ಉಪನ್ಯಾಸಕ 
ದಿ.ಪ್ರೇಮ್ ಚಂದ್ ಜನ್ಮ     ದಿನಾಚರಣೆಯನ್ನು  ಆಚರಿಸಲಾಯಿತು.   ಹಿಂದಿ    ಶಿಕ್ಷಕಿ     ಶ್ರೀಮತಿ ಸುಖನ್ಯಾ.ಕೆ.ಟಿ.ಅವರು  ದಿ.ಪ್ರೇಮ್ ಚಂದ್ ಬದುಕಿನ ಚಿತ್ರಣವನ್ನು ಮಕ್ಕಳಿಗೆ ವಿವರಿಸಿದರು.  ಕಲಾ ಶಿಕ್ಷಕರಾದ ಜಯಪ್ರಕಾಶ್ ಶೆಟ್ಟಿ ಬೇಳ ಅವರು ಮಕ್ಕಳಿಗೆ ಲೇಖಕರ ಬಗ್ಗೆ ವಿಡಿಯೋ ಪ್ರದರ್ಶನ ವನ್ನು ಏರ್ಪಡಿಸಿದರು. ಶಿಕ್ಷಕಿ ಜಯಶ್ರೀ ಉಪಸ್ಥಿತರಿದ್ದರು.ಹಿರಿಯ ಹಿಂದಿ ಅಧ್ಶಾಪಕಿ    
ಶ್ರೀಮತಿ  ಪೂರ್ಣಿಮಾ ಟೀಚರ್  ಕಾರ್ಯ ಕ್ರಮ ನಿರೂಪಿಸಿದರು.

Friday, 27 July 2018

2018-19 ನೇ ಸಾಲಿನ ಶಾಲಾ ಪಾರ್ಲಿಮೆಂಟ್ ಚುನಾವಣೆ

 ಎಸ್.ಎ.ಟಿ.ಪ್ರೌಢಶಾಲೆಯಲ್ಲಿ ಸಮಾಜ ವಿಜ್ಞಾನ ಸಂಘದ ವತಿಯಿಂದ ಬಾಲ ಗಂಗಾಧರ ತಿಲಕ್ ರವರ ಜನ್ಮದಿನ ಆಚರಣೆ ಮಾಡಲಾಯಿತು.ಆ ಪ್ರಯುಕ್ತ ಮಕ್ಕಳಿಗೆ ಬಾಲ ಗಂಗಾಧರ ತಿಲಕರ ದೇಶಪ್ರೇಮದ ಕುರಿತು ಪ್ರಬಂಧ ಬರೆದು ಮಂಡನೆ ಮಾಡುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಮಾಜ ವಿಜ್ಞಾನ ಅಧ್ಯಾಪಕರಾದ ಮೋಹಿನಿ ಟೀಚರ್, ಗಣೇಶ್ ಪ್ರಸಾದ್ ನಾಯಕ್, ಶಾಂತಾರಾಮ್ ಮುಂತಾದವರು ಉಪಸ್ಥಿತರಿದ್ದರು.

Monday, 16 July 2018

ಯು ಪಿ ವಿಭಾಗದ ಸುಸಜ್ಜಿತವಾದ ನೂತನ ಕಂಪ್ಯೂಟರ ಲ್ಯಾಬ್ ನ ಉದ್ಘಾಟನೆ

ಎಸ್ ಎ ಟಿ ಶಾಲೆ ಮಂಜೇಶ್ವರ, ಇದರ ಯು ಪಿ ವಿಭಾಗದ ಸುಸಜ್ಜಿತವಾದ ನೂತನ  ಕಂಪ್ಯೂಟರ ಲ್ಯಾಬ್ ನ  ಉದ್ಘಾಟನೆಯು ತಾರೀಕು 16-7-18 ಪೂರ್ವಾಹ್ನ 10 ಘಂಟೆಗೆ ವಿದ್ಯುಕ್ತವಾಗಿ ಜರುಗಿತು.ಶ್ರೀಮದ್ ಅನಂತೇಶ್ವರ ದೇವಳದ ಆಢಳಿತ ಮಂಡಳಿ ಉಪಾಧ್ಯಕ್ಷ ಛತ್ರಪತಿ ಪ್ರಭು ಅವರು ರಿಬ್ಬನ್ ಕತ್ತರಿಸುವುದರೊ0ದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಪ್ರಬಂಧಕ ಕೃಷ್ಣ ಭಟ್ ದೀಪ ಪ್ರಜ್ವಾಲನೆ ನಡೆಸಿ ಮಾತನಾಡಿ ಲ್ಯಾಬ್ ನ ಪೂರ್ಣ ಸದುಪಯೋಗವಾಗಬೇಕು ಎಂಬ ಸಂದೇಶ ನೀಡಿದರು. ಶಾಲಾ ಪಿಟಿ ಎ ಅಧ್ಯಕ್ಷ ಅಬ್ದುಲ್ ಬಶೀರ್, ಶಾಲಾ ಪ್ರಾಂಶುಪಾಲ ಮುರಳಿಕೃಷ್ಣ, ಶುಭಾಶ0ಸನೆಗೈದರು, ಶಾಲಾ ಎಸ್ ಆರ್ ಜಿ ಕನ್ವೀನರ್ ಸುಮನ ಐಲ್ ಕಾರ್ಯಕ್ರಮ ನಿರ್ವಹಿಸಿ, ಗಣೇಶ್ ಪ್ರಸಾದ್ ಸ್ವಾಗತಿಸಿದರು. ಶಾಲಾ ಸಿಬ್ಬಂದಿ ವಿಭಾಗ ಕಾರ್ಯದರ್ಶಿ ಸುಕನ್ಯ ರವರು ವಂದಿಸಿದರು.
ಅಧ್ಯಾಪಕರಾದ ಪೂರ್ಣಯ್ಯಪುರಾಣಿಕ, ಲಕ್ಷ್ಮಿದಾಸ್ ಪ್ರಭು, ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮ ವಿಧ್ಯಾರ್ಥಿಗಳ ಉಪಸ್ಥಿತಿಯಲ್ಲಿ ನಡೆಯಿತು.

Monday, 9 July 2018


S.A.T ಶಾಲೆಯ ಸ್ಕೌಟ್ ಗೈಡ್ ವಿದ್ಯಾರ್ಥಿಗಳಿಂದ ಶ್ರೀಮತ್ ಅನಂತೇಶ್ವರ ದೇವಸ್ಥಾನದ ಗದ್ದೆಯಲ್ಲಿ ನೇಜಿ ನೆಡುವ ಕಾರ್ಯಕ್ರಮ ಜರಗಿತು . ಕ್ರಷಿಕರಾದ ಸದಾಶಿವ ರವರು ನೇಜಿ ನೆಡುವ ಕ್ರಮವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು . ಗೈಡ್ ಅಧ್ಯಾಪಿಕೆ ಸುಕನ್ಯಾ ಕೆ .ಟಿ ಹಾಗು ಸ್ಕೌಟ್ ಅಧ್ಯಾಪಕರಾದ ಲಕ್ಷ್ಮಿದಾಸ್ ಪ್ರಭು ಸಹಕರಿಸಿದರು .

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.