ಎಸ್ ಎ ಟಿ ಶಾಲೆ ಮಂಜೇಶ್ವರ, ಇದರ ಯು ಪಿ ವಿಭಾಗದ ಸುಸಜ್ಜಿತವಾದ ನೂತನ ಕಂಪ್ಯೂಟರ ಲ್ಯಾಬ್ ನ ಉದ್ಘಾಟನೆಯು ತಾರೀಕು 16-7-18 ಪೂರ್ವಾಹ್ನ 10 ಘಂಟೆಗೆ ವಿದ್ಯುಕ್ತವಾಗಿ ಜರುಗಿತು.ಶ್ರೀಮದ್ ಅನಂತೇಶ್ವರ ದೇವಳದ ಆಢಳಿತ ಮಂಡಳಿ ಉಪಾಧ್ಯಕ್ಷ ಛತ್ರಪತಿ ಪ್ರಭು ಅವರು ರಿಬ್ಬನ್ ಕತ್ತರಿಸುವುದರೊ0ದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಪ್ರಬಂಧಕ ಕೃಷ್ಣ ಭಟ್ ದೀಪ ಪ್ರಜ್ವಾಲನೆ ನಡೆಸಿ ಮಾತನಾಡಿ ಲ್ಯಾಬ್ ನ ಪೂರ್ಣ ಸದುಪಯೋಗವಾಗಬೇಕು ಎಂಬ ಸಂದೇಶ ನೀಡಿದರು. ಶಾಲಾ ಪಿಟಿ ಎ ಅಧ್ಯಕ್ಷ ಅಬ್ದುಲ್ ಬಶೀರ್, ಶಾಲಾ ಪ್ರಾಂಶುಪಾಲ ಮುರಳಿಕೃಷ್ಣ, ಶುಭಾಶ0ಸನೆಗೈದರು, ಶಾಲಾ ಎಸ್ ಆರ್ ಜಿ ಕನ್ವೀನರ್ ಸುಮನ ಐಲ್ ಕಾರ್ಯಕ್ರಮ ನಿರ್ವಹಿಸಿ, ಗಣೇಶ್ ಪ್ರಸಾದ್ ಸ್ವಾಗತಿಸಿದರು. ಶಾಲಾ ಸಿಬ್ಬಂದಿ ವಿಭಾಗ ಕಾರ್ಯದರ್ಶಿ ಸುಕನ್ಯ ರವರು ವಂದಿಸಿದರು.
ಅಧ್ಯಾಪಕರಾದ ಪೂರ್ಣಯ್ಯಪುರಾಣಿಕ, ಲಕ್ಷ್ಮಿದಾಸ್ ಪ್ರಭು, ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮ ವಿಧ್ಯಾರ್ಥಿಗಳ ಉಪಸ್ಥಿತಿಯಲ್ಲಿ ನಡೆಯಿತು.
ಅಧ್ಯಾಪಕರಾದ ಪೂರ್ಣಯ್ಯಪುರಾಣಿಕ, ಲಕ್ಷ್ಮಿದಾಸ್ ಪ್ರಭು, ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮ ವಿಧ್ಯಾರ್ಥಿಗಳ ಉಪಸ್ಥಿತಿಯಲ್ಲಿ ನಡೆಯಿತು.
No comments:
Post a Comment