Wednesday, 28 September 2016


ಎಸ್.ಎ,ಟಿ. ಶಾಲೆಯಲ್ಲಿ AHEP ಅಂಗವಾಗಿ ವಿದ್ಯಾಥಿ೯ನಿಯರಿಗೆ ಶಾರೀರಿಕ ಶುಚಿತ್ವ ಕಾಪಾಡುದರ ಕುರಿತಾಗಿ ಜಾಗೃತಿಯನ್ನು ಉಂಟುಮಾಡುವ ಕಾಯ೯ಕ್ರಮವನ್ನು ಮುಖ್ಯೋಪಾಧ್ಯಾಯಿನಿ ಮನೋರಮ ಕಿಣಿಅವರ ಅಧ್ಯಕ್ಷತೆಯಲ್ಲಿ ಜರಗಿಸಲಾಯಿತು. ಇದರ ನೇತೃತ್ವವನ್ನು ಸುಕನ್ಯಾ ಟೀಚರ್ ಅವರು ವಹಿಸಿದರು.ಅಧ್ಯಾಪಕಿಯರು ಉಪಸ್ಥಿತರಿದ್ದರು.

Friday, 23 September 2016

ಮಂಜೇಶ್ವರ .ಎಸ್.ಎ.ಟಿ.ಶಾಲೆಯಲ್ಲಿ ಓಣಂ ಹಬ್ಬ ದ ಪ್ರಯುಕ್ತ ಹೂ ರಂಗವಲ್ಲಿ ಹಾಗೂ ಓಣಸದ್ಯ.ಏರ್ಪಡಿಸಲಾಯಿತು.

Thursday, 22 September 2016


ONAM 2016





ONAM 2016





ಶಿಕ್ಷಕರ ದಿನ -ಗುರುವಂದನಾ ಕಾಯ೯ಕ್ರಮ
ಎಸ್.ಎ.ಟಿ ಶಾಲೆಯಲ್ಲಿ ಶಿಕ್ಷಕ ದಿನಾಚರಣೆಯನ್ನು ಗುರುವಂದನಾ ಕಾಯ೯ಕ್ರಮದೊಂದಿಗೆ ಜರಗಿಸಲಾಯಿತು.
ನಿವೃತ್ತ ಅಧ್ಯಾಪಿಕೆ ಲಿಲ್ಲಿಬಾಯಿ ಟೀಚರ್ ಇವರನ್ನು ಸನ್ಮಾನಿಸಲಾಯಿತು. ಕಾಯ೯ಕ್ರಮದ ಅಧ್ಯಕ್ಷತೆಯನ್ನು ಪ್ರಭಾರ
ಮುಖೋಪಾಧ್ಯಾಯಿನಿ ಶ್ರೀಮತಿ ಕೃಷ್ಣಕುಮಾರಿ ಟೀಚರ್ ವಹಿಸಿ ಶಿಕ್ಷಕ ದಿನಾಚರಣೆಯ ಔಚಿತ್ಯವನ್ನು ತಿಳಿಸಿ ಶುಭಹಾರೈಸಿದರು. ಸನ್ಮಾನಿತರಾದ ಟೀಚರ್ ಅವರು ತನ್ನ ಅಧ್ಯಾಪನ ವೃತ್ತಿಜೀವನವನ್ನು ಮೆಲುಕು ಹಾಕಿ ಪ್ರಸಕ್ತ ಸೇವಾ ಅಧ್ಯಾಪಕರಿಗೆ ತಿಳಿಹೇಳಿ ಸನ್ಮಾನಕ್ಕೆ ಅಭಿವಂದಿಸಿದರು. ಶಾಲಾ ಸಿಬ್ಬಂದಿ ಕಾಯ೯ದಶಿ೯ಯವರು ಸ್ವಾಗತಿಸಿದರೆ ಈಶ್ವರ್ ಕಿದೂರು ಕಾಯ೯ಕ್ರಮವನ್ನು ನಿರೂಪಿಸಿದರು.

Tuesday, 30 August 2016



ಎಸ್.ಎ.ಟಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ
    ಮಂಜೇಶ್ವರ ಅಗೋಸ್ಟ್ 15 ರಂದು ಎಸ್.ಎ.ಟಿ ಶಾಲೆಯಲ್ಲಿ 70ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಪ್ರಬಂಧಕರಾದ ಶ್ರೇಯುತ ದಿನೇಶ್ ಶೆಣೈ ಅವರು ಧ್ವಜಾರೋಹಣಮಾಡಿ ಶುಭ ಹಾರೈಸಿದರು. ಅನಂತರ ಶಾಲಾ ಮುಖೋಪಾಧ್ಯಾಯಿನಿ ಶ್ರೇಮತಿ ಮನೋರಮ ಕಿಣಿ ಹಾಗೂ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಅಬ್ದುಲ್ ಬಶೇರ್ ಅವರು ಶುಭ ಸಂದೇಶವನ್ನು ನೀಡಿದರು.
    ನಂತರ ಸ್ಕೌಚ್ ಮತ್ತು ಗೈಡ್ ದಳಗಳಿಂದ ಆಕಷ೯ಕ ಕವಾಯತು ನಡೆಯಿತು. ಕಳೆದಸಾಲಿನ ಮಾಚ್೯ SSLC ಪರೀಕ್ಷೆಯಲ್ಲಿ ಎ+ ಹಾಗೂ ಎ ಗ್ರೇಡ್ ನೊಂದಿಗೆ ತೇಗ೯ಡೆಯಾದ ವಿದ್ಯಾಥಿ೯ನಿಯರನ್ನು ಶಾಲಾ ಪ್ರಬಂಧಕರು ಸನ್ಮಾನಿಸಿದರು. ನಂತರ ಛದ್ಮವೇಷ ಸ್ಪಧೆ೯ ನಡೆಯಿತು. ನಂತರ ವಿದ್ಯಾಧಿ೯ಗಳು ದೇಶಭಕ್ತಿಗೀತೆ ಗಳನ್ನು ಹಾಡಿದರು.
ಸ್ಪಧೆ೯ಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಎಲ್ಲಾಅಧ್ಯಾಪಕ ಅಧ್ಯಾಪಕಿಯರು ಉಪಸ್ಥಿತರಿದ್ದರು. ಅಧ್ಯಾಪಕ ರಾದ ಜಿ .ವೀರೇಶ್ವರಭ಼ಟ್ ಕಾಯ೯ಕ್ರಮವನ್ನು ನಿರೂಪಿಸಿದರು. ದಾಸಪ್ಪ ರೈ ಸರ್ ಅವರು ವಂದಿಸಿದರು. ನಂತರ ಸಿಹಿತಿಂಡಿಯನ್ನು ವಿತರಿಸಲಾಯಿತು.ರಾಷ್ರ್ಟಗೀತೆಯೊಂದಿಗೆ ಕಾಯ೯ಕ್ರಮ ಕೊನೆಗೊಂಡಿತು.
                                INDEPENDENCE DAY 2016

                                INDEPENDENCE DAY 2016

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.