ಎಸ್.ಎ.ಟಿ.ಪ್ರೌಢ
ಶಾಲೆಯಲ್ಲಿ ರಕ್ಷಕ – ಶಿಕ್ಷಕ
ಸಂಘದ ಮಹಾಸಭೆ
ಮಂಜೇಶ್ವರ
- ಎಸ್.ಎ.ಟಿ.ಪ್ರೌಢ
ಶಾಲೆಯ ರಕ್ಷಕ – ಶಿಕ್ಷಕ ಸಂಘದ
ಮಹಾಸಭೆಯು ಇತ್ತೀಚೆಗೆ ಶಾಲಾ
ಅನಂತ ವಿದ್ಯಾ ಸಭಾಂಗಣದಲ್ಲಿ
ಜರಗಿತು. ಶಾಲಾ
ಮುಖ್ಯೋಪಾಧ್ಯಾಯನಿ ಮನೋರಮ ಕಿಣಿ
ಪ್ರಾಸ್ತಾವಿಕವಾಗಿ ಮಾತನಾಡಿ
ಸ್ವಾಗತಿಸಿದರು. ರಕ್ಷಕ
– ಶಿಕ್ಷಕ ಸಂಘದ ಅಧ್ಯಕ್ಷರಾದ
ನಿತಿನ್ ಚಂದ್ರ ಪೈ ಅಧ್ಯಕ್ಷತೆಯನ್ನು
ವಹಿಸಿದರು. ಈ
ಸಭೆಯಲ್ಲಿ ರಕ್ಷಕ – ಶಿಕ್ಷಕ ಸಂಘದ
ಕಾರ್ಯಕಾರಿ ಸಮಿತಿಗೆ ಪದಾಧಿಕಾರಿಗಳನ್ನು
ಆಯ್ಕೆ ಮಾಡಲಾಯಿತು. ನೂತನ
ಅಧ್ಯಕ್ಷರಾಗಿ ನಿತಿನ್ ಚಂದ್ರ
ಪೈ, ಉಪಾಧ್ಯಕ್ಷರಾಗಿ
ಹೇಮಲತಾ, ಕಾರ್ಯಕಾರಿ
ಸಮಿತಿ ಸದಸ್ಯರಾಗಿ ದಯಾನಂದ
ಪೂಜಾರಿ, ರಮಾನಂದ
ಶೆಟ್ಟಿ , ಮೊಹಮ್ಮದ್
ಮುಸ್ತಾಫ ಮತ್ತು ಪುಷ್ಪಾ ಆಯ್ಕೆಯಾದರು.
ಹಿರಿಯಶಿಕ್ಷಕರಾದ
ಪುಂಡಲೀಕ ನಾಯಕ್ ವರದಿ ವಾಚಿಸಿದರು.
ನಾಗೇಶ್ ವಿ.
ವಾರ್ಷಿಕ ಲೆಕ್ಕ
ಪತ್ರ ಮಂಡಿಸಿದರು.ಶಾಲಾ
ಪ್ರಬಂಧಕರಾದ ಎ೦. ದಿನೇಶ್
ಶೆಣೈ , ಸಲಹಾ
ಸಮಿತಿಯ ಸದಸ್ಯರಾದ ಲಿಲ್ಲಿ ಬಾಯಿ
ಟೀಚರ್, ಮೊಹಮ್ಮದ್
ಮುಸ್ತಾಫ ಅಬ್ದುಲ್ ಬಶೀರ್,
ಲೀಲಾಧರ ಐಲ್
ಹಾಗೂ ಮಲ್ಲಿಕಾ ಉಪಸ್ಥಿತರಿದ್ದರು.
ಶಿಕ್ಷಕರಾದ
ಮುರಳಿಕೃಷ್ಣ ಧನ್ಯವಾದವಿತ್ತರು.ವಿರೇಶ್ವರ
ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.
No comments:
Post a Comment