Saturday, 7 July 2018

 hello English ಉದ್ಘಾಟನಾ ಸಮಾರಂಭ  ಎಲ್ಲಾ ಅಧ್ಯಾಪಕ ಬಂಧು ಭಗಿನಿಯರಿಗೂ ಸ್ವಾಗತ...🙏🙏🙏
ಮಂಜೇಶ್ವರ ಲಿಲ್ಲಿ ಭಾಯಿ ಟೀಚರ್ ತನ್ನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಅವರು ಮಂಜೇಶ್ವರ ಎಸ್.ಎ.ಟಿ.ಪ್ರೌಢಶಾಲೆಯಲ್ಲಿ ಸುದೀರ್ಘ ಸೇವೆ ಮಾಡಿ ನಿವೃತ್ತರಾಗಿ ಪ್ರೀ ಪ್ರೈಮರಿ ಶಾಲೆಯನ್ನು ಪುನರುಜ್ಜೀವನ ಮಾಡಿ ಶಾಲೆ ಯ ಅಭಿವೃದ್ಧಿ ಗೆ ಅವಿರತಶ್ರಮ ವಹಿಸಿದ್ದರು. ಗೈಡ್ ದಳದಲ್ಲಿ ಹೆಸರನ್ನು ಗಳಿಸಿದ ಒಂದು ಮಾದರಿ ಶಿಕ್ಷಕಿಯಾಗಿ ತನ್ನನ್ನು ಶಾಲಾ ಮಕ್ಕಳ ಅಭಿವೃದ್ಧಿಗೋಸ್ಕರ ಜೀವನ ವನ್ನು ಮುಡಿಪಾಗಿಟ್ಟವರು. ಅವರು ತಮ್ಮ ಬಂಧು ಬಳಗ ವನ್ನು ಅಗಲಿದ್ದಾರೆ.ಅವರಿಗೆ ಎಸ್.ಎ.ಟಿ.ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ,ಆಡಳಿತ ಮಂಡಳಿ ಮತ್ತು ಶಾಲಾ ಸಿಬ್ಬಂದಿ ವರ್ಗ ಶ್ರದ್ಧಾಂಜಲಿ ಕೊಡಲಾಗಿದೆ.
ವಿವಿಧ ಕ್ಲಬ್ ಗಳ ಉದ್ಘಾಟನೆ







ತಾರೀಕು 26-6-2018 ರಂದು SAT ಶಾಲೆಯ ಲ್ಲಿ ಮಾದಕವಸ್ತು ವಿರೋಧಿ ದಿನವನ್ನು ಆಚರಿಸಲಾಯಿತು. ಶಾಲಾ ಅಸ್ಸಂಬ್ಲಿ  ಯಲ್ಲಿ ಮಾದಕವಸ್ತುಗಳ ವಿರುದ್ಧ ವಿದ್ಯಾರ್ಥಿಗಳಿಗೆ ಪ್ರತಿಜ್ಞೆಯನ್ನು ಎಸ್ ಆರ್ ಜಿ  ಸ0ಚಾಲಕ ಗಣೇಶ್ ಪ್ರಸಾದ್  ಬೋಧಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀ ಮುರಳೀಕೃಷ್ಣ ಮಾದಕವಸ್ತುಗಳ ದುಷ್ಪರಿಣಾಮಗಳನ್ನು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.ಮಳೆಗಾಲದ ದಿನಗಳಲ್ಲಿ ವಿದ್ಯಾರ್ಥಿಗಳು ಪಾಲಿಸಬೇಕಾದ ಎಚ್ಚರಿಕೆಗಳ ಬಗ್ಗೆ ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಕೂಡ ಅವರು ಬೋಧಿಸಿದರು.ಶಾಲಾ ದೈಹಿಕ ಶಿಕ್ಷಕ ಶ್ಯಾಮ್ ಕೃಷ್ಣ ಪ್ರಕಾಶ್ ಕಾರ್ಯ ಕ್ರಮ ನಿರೂಪಿಸಿದರು.
Attachments area

Friday, 29 June 2018

ಮಂಜೇಶ್ವರದ ಎಸ್ ಎ ಟಿ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ 2018

ಮಂಜೇಶ್ವರದ ಎಸ್ ಎ ಟಿ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ತಾರೀಕು 21-6-18 ಗುರುವಾರ ಶಾಲೆಯ ಅನಂತ ಜ್ಞಾನ ಸಭಾಂಗಣದಲ್ಲಿ ಜರುಗಿತು. 
ಜಮುನಾ ಸೇವಾ ಸಂಘದ ಕಾಸರಗೋಡು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀ ಸದಾಶಿವ ಕಡಂಬಾರು ಯೋಗದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಯೋಗದಿನವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು.  ಮುಖ್ಯೋಪಾಧ್ಯಾಯರಾದ ಮುರಳಿ ಕೃಷ್ಣರವರು ಅಧ್ಯಕ್ಷತೆ ವಹಿಸಿದ್ದರು. ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ತೇಜಸ್ ಕಿರಣ್, ಸಿಬ್ಬಂದಿ ಕಾರ್ಯದರ್ಶಿ ಶ್ರೀಮತಿ ಸುಕನ್ಯಾ ಶಾಲೆಯ  ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ದೈಹಿಕ ಶಿಕ್ಷಕ ಶ್ಯಾಮ್ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿ, ಅಧ್ಯಾಪಕರಾದ ಲಕ್ಮೀದಾಸ್ ವಂದಿಸಿದರು. ಅಧ್ಯಾಪಕರಾದ ಈಶ್ವರ ಕಿದೂರು, ಪೂರ್ಣಿಮಾ ನಾಯಕ್, ಮಹೇಶ ಕೆ ವಿ, ಶಾಂತಾರಾಮ, ಗಣೇಶ್ ನಾಯಕ್, ಮಲ್ಲಿಕಾ ಮೊದಲಾದವರು ಉಪಸ್ಥಿತರಿದ್ದರು. ಮಕ್ಕಳಿಗೆ ಯೋಗ ದಿನದ ಮಹತ್ವವನ್ನು ಸಂಪನ್ಮೂಲ ವ್ಯಕ್ತಿ ಸದಾಶಿವ ಕಡಂಬಾರು ವಿವರಿಸಿ, ಯೋಗಗಳ ಪ್ರಾತ್ಯಕ್ಷಿಕೆ ನೀಡಿದರು.
Attachments area

ಎಸ್.ಎ.ಟಿ.ಪ್ರೌಢ ಶಾಲೆ ಮಂಜೇಶ್ವರವಿಶ್ವ ಪರಿಸರ ದಿನಾಚರಣೆ 2018ಜೂನ್ 5


ಎಸ್.ಎ.ಟಿ.ಪ್ರೌಢ ಶಾಲೆಯ ಪ್ರವೇಶೋತ್ಸವ 2018


ಎಸ್.ಎ.ಟಿ.ಪ್ರೌಢ ಶಾಲೆಯ 2018ಜೂನ್ 1 ಶಾಲಾ ಪ್ರವೇಶೋತ್ಸವ ಅನಂತ ಜ್ಞಾನ ಸಭಾಂಗಣದಲ್ಲಿ ವಿಧ್ಯುಕ್ತವಾಗಿ ನೆರವೇರಿತು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ರು ಅಬ್ದುಲ್ ಬಷೀರ್ ಶುಭ ಹಾರೈಸಿದರು.ಮುಖ್ಯೋಪಾಧ್ಯಾಯರಾದ ಮುರಳೀಕೃಷ್ಣ ಮಕ್ಕಳಿಗೆ ಹಿತವಚನಗೈದರು.ಶಾಲಾ ಎಸ್. ಆರ್.ಜಿ.ಗಣೇಶ್ ನಾಯಕ್ ಸ್ವಾಗತಿಸಿ, ಶ್ರೀಮತಿ ಸುಕನ್ಯ ಟೀಚರ್ ವಂದಿಸಿದರು.ಜಿ.ವೀರೇಶ್ವರ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಶ್ಯಾಮ ಕೃಷ್ಣ ಪ್ರಕಾಶ್,ಸುಮತಿ ಟೀಚರ್,ಮಹೇಶ್ ಕೆ.ವಿ.,
 ಶ್ರೀದಾಸಪ್ಪ ರೈ,ಅಜಿತ್ ಕುಮಾರ್ ಶೆಟ್ಟಿ. ಕಲಾ  ಶಿಕ್ಷಕ ಜಯಪ್ರಕಾಶ್ ಶೆಟ್ಟಿ ಬೇಳ ಉಪಸ್ಥಿತರಿದ್ದರು. ಐದನೆಯ ತರಗತಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳ ವಿತರಿಸಲಾಯಿತು.

Attachments area

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.