Saturday, 18 October 2014

KANNADA KALOTSAVA MANUAL

ಶಾಲಾ ಕಲೋತ್ಸವದ ಮ್ಯಾನ್ಯುವಲ್ ಇಲ್ಲಿದೆ. KANNADA KALOTSAVA MANUAL

Thursday, 9 October 2014

Motivation Class FOR sTD x


STEPS : 2014ನೇ ಪ್ರಥಮ ಹಂತವಾಗಿ 10 ನೇ ತರಗತಿಯ ಮಕ್ಕಳಿಗಿರುವ Motivation Class ನ್ನು 9.10.2014 ನೇ ಗುರುವಾರ ದಂದು ಅನಂತ ವಿದ್ಯಾ ಸಭಾಂಗಣದಲ್ಲಿ ನಡೆಸಲಾಯಿತು. ಈ ತರಬೇತಿಯನ್ನು ಬಂಗ್ರ ಮಂಜೇಶ್ವರ ಶಾಲೆಯ ಶಿಕ್ಷಕಿಯಾದ ಶ್ರೀಮತಿ ಗಾಯತ್ರಿ ಟೀಚರ್ ರವರು ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ಮನೋಮರಮ ಕಿಣಿ ಯವರು ವಹಿಸಿದರು.ಶ್ರೀಮತಿ ವಸುಧಾಲಕ್ಷ್ಮಿ ಸ್ವಾಗತಿಸಿದರು. ತರಬೇತಿಯಲ್ಲಿ 10 ನೇ ತರಗತಿಯ ಎಲ್ಲಾ ಮಕ್ಕಳು ಬಹಳ ಆಸಕ್ತಿಯಿಂದ ಭಾಗವಹಿಸಿದರು. ಅಧ್ಯಾಪಾಕರಾದ ಶ್ರಿ ಪುರ್ಣಯ್ಯ ಪುರಾಣಿಕ್ ವಂದಿಸಿದರು.

Sunday, 5 October 2014

ಶ್ರೀ ಶಾರದಾ ಮಹೋತ್ಸವ


ನಮ್ಮ ಶಾಲೆಯಲ್ಲಿ ಶ್ರೀ ಶಾರದಾ ಮಹೋತ್ಸವವು ತಾ 30-9-2014 ರಿಂದ 4-10-2014 ತನಕ ಜರುಗಿತು.ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಕ್ತಿ ಶ್ರದ್ಧೆಯಿಂದ ಪಾಲ್ಗೊಂಡರು.

Friday, 3 October 2014

ಗಾಂಧೀ ಜಯಂತಿ ಆಚರಣೆ

ಗಾಂಧೀ ಜಯಂತಿ ಆಚರಣೆಯು ಸಂಭ್ರಮ ಸಡಗರದೊಂದಿಗೆ ನಮ್ಮ ಶಾಲೆಯಲ್ಲಿ ಆಚರಿಸಲಾಯಿತು. ತಕಲಿಯಿಂದ ನೂಲು ತೆಗೆಯುವುದು,ದೇಶ ಭಕ್ತಿಗೀತೆ ಹಾಗೂ ಸರ್ವ ಧರ್ಮ ಪ್ರಾರ್ಥನೆಯು ಕೂಡಾ ಜರುಗಿತು.ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.

Thursday, 2 October 2014

ಸ್ವಚ್ಛತಾ ದಿವಸದ ಅಂಗವಾಗಿ ಸ್ಕೌಟ್ ಹಾಗೂ ಗೈಡ್ ದಳದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಸ್ವಚ್ಛತಾ ದಿವಸದ ಅಂಗವಾಗಿ ಸ್ಕೌಟ್ ಹಾಗೂ ಗೈಡ್ ದಳದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ 2014








ಗಾಂಧಿ ಪನೋರಮಕ್ಕೆ ಚಾಲನೆ.


ಎಸ್ .. ಟಿ ಪ್ರೌಢ ಶಾಲೆಯಲ್ಲಿ ಗಾಂಧಿ ಪನೋರಮಕ್ಕೆ ಚಾಲನೆ.
ಮಂಜೇಶ್ವರ – ಅಕ್ಟೋಬರ್ - 02 ಗಾಂಧಿಜಯಂತಿಯ ಶುಭ ಸಂದರ್ಭದಲ್ಲಿ ವಿನೋಬಾ ವೆಂಕಟೇಶ್ ರಾವ್ ಶಾಂತಿ ಸೇನಾ ಫೌಂಡೇಶನ್ . ರಿ . ಮಂಜೇಶ್ವರ ಮತ್ತು ಗಾಂಧಿ ಮೀಡಿಯಾ ಫೌಂಡೇಶನ್ ತಿರುವನಂತಪುರ ಇವರ ಆಶ್ರಯದಲ್ಲಿ ಮಕ್ಕಳಿಂದಲೇ ಚಿತ್ರೀಕರಣಗೊಂಡ ಗಾಂಧಿ ಪನೋರಮ ಚಲನ ಚಿತ್ರದ ಮಂಜೇಶ್ವರ ಬ್ಲಾಕ್ ಮಟ್ಟದಲ್ಲಿ ಮಂಜೇಶ್ವರ ಬ್ಲಾಕ್ ಉಪಾಧ್ಯಕ್ಷರಾದ ಹರ್ಷದ್ ವರ್ಕಾಡಿಯವರು ಚಾಲನೆ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧಾಯನಿಯಾದ ಮನೋರಮ ಕಿಣಿ ವಹಿಸಿದರು. ಈ ಸಂದರ್ಭದಲ್ಲಿ ವಿನೋಬಾ ವೆಂಕಟೇಶ್ ರಾವ್ ಶಾಂತಿ ಸೇನಾ ಫೌಂಡೇಶನ್ . ರಿ . ಮಂಜೇಶ್ವರ ಇದರ ಕೋಶಾಧಿಕಾರಿಯಾದ ದಿವಾಕರ್ ಎಸ್.ಜೆ. , ಮಂಜೇಶ್ವರ ಪಂಚಾಯತ್ ಸದಸ್ಯರಾದ ಆನಂದ ಮಾಸ್ಟರ್ , ಲಿಲ್ಲಿ ಬಾಯಿ ಟೀಚರ್ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕರಾದ ಶಿವಾನಂದ ಅರಿಬೈಲ್ ಸ್ವಾಗತಿಸಿದರು, ನಾಗೇಶ್ ವಿ ವಂದಿಸಿದರು, ಕಿರಣ್ ಕುಮಾರ್ ಕಾರ್ಯಕ್ರಮವನ್ನು ಸಂಯೋಜಿಸಿದರು., ಶಾಂತಾರಾಮ್ ಎಸ್. ಕಾರ್ಯಕ್ರಮವನ್ನು ನಿರೂಪಿಸಿದರು. ಸುಮಾರು ಒಂದುವರೆಗಂಟೆಗಳಕಾಲ ಚಲನಚಿತ್ರಗಳನ್ನು ವಿದ್ಯಾರ್ಥಿಗಳು ಕುತೂಹಲದಿಂದ ವಿಕ್ಷಿಸಿದರು.

ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

ನಮ್ಮ ಶಾಲಾ ಸ್ಕೌಟು ಮತ್ತು ಗೈಡು ದಳದ ಸಹಕಾರದೊಂದಿಗೆ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.ಇದನ್ನು ಶಾಲಾ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಮನೋರಮಾ ಕಿಣಿಯವರು ಸಾಂಕೇತಿಕವಾಗಿ ಶಾಲಾ ಪರಿಸರದಲ್ಲಿ ಗುಡಿಸುವುದರ ಮೂಲಕ ಉದ್ಘಾಟಿಸಿದರು.ಶಾಲಾ ಸ್ಕೌಟು ದಳದ ಶಿಕ್ಷಕ ಶಿವಾನಂದ ಅರಿಬೈಲ್ ಗೈಡು ದಳದ ಶಿಕ್ಷಕಿಯಾದ ಸುಕನ್ಯಾ ಕೆ.ಟಿ,ಹಿರಿಯ ಅಧ್ಯಾಪಕಿ ಕೃಷ್ಣ ಕುಮಾರಿ.ಕೆ ಹಾಗೂ ಇತರ ಅಧ್ಯಾಪಕರು ಭಾಗವಪಿಸಿದ್ದರು.

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.