ಬೇಂಡ್ ಮೇಳದ ಹೊಸ ಪೋಷಾಕಿನಲ್ಲಿ ನಮ್ಮ ಸ್ಕೌಟ್ಸ ಮತ್ತು ಗೈಡ್ಸ್ ದಳ
Thursday, 11 September 2014
Friday, 5 September 2014
ಓಣಂ ಸಂಭ್ರಮ
ಎಸ್.
ಎ. ಟಿ
ಶಾಲೆಯಲ್ಲಿ ಓಣಂ ಹಬ್ಬದ ಆಚರಣೆಯ
ಅಂಗವಾಗಿ ವಿದ್ಯಾರ್ಥಿಗಳಿಂದ
ಪುಕ್ಕಳಂವನ್ನು ರಚಿಸಿ ಓಣಂ ಹಬ್ಬದ
ಸಂಬ್ರಮವನ್ನು ಆಚರಿಸಲಾಯಿತು.
ಗುರು ದಿವಸ್ ಆಚರಣೆ
05-09-2014 ರಂದು ಡಾll ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನದ ಸ್ಮರಣಾರ್ಥ
ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಡಾll ಸರ್ವಪಳ್ಳಿ ರಾಧಾಕೃಷ್ಣನ್ ರವರ
ಭಾವಾಚಿತ್ರಕ್ಕೆ ಪುಷ್ಪಾರ್ಚನೆ ಗೈಯಲಾಯಿತು. ನಿವೃತ್ತ ಅಧಾಪಕ ಶ್ರೀಯುತ ದಾಮೋದರ್
ಮಾಸ್ಟರ್ ರವರನ್ನು ಸನ್ಮಾನಿಸಲಾಯಿತು.
Friday, 22 August 2014
ಸಂಸ್ಕೃತ ದಿನಾಚರಣೆ 2014
ಎಸ್
. ಎ .
ಟಿ ಪ್ರೌಢ ಶಾಲೆಯಲ್ಲಿ
ಸಂಸ್ಕೃತ ದಿನಾಚರಣೆ
ಸಂಸ್ಕೃತ
ಕಲಿಕೆಯಿಂದ ಸಮಾಜದಲ್ಲಿ ಸತ್ಪ್ರಜೆಗಳ
ನಿರ್ಮಾಣ ಸಾದ್ಯ ಎಂದು ನಿವೃತ್ತ
ಮುಖ್ಯೋಪಾಧ್ಯಯರೂ ಸಂಸ್ಕೃತ
ವಿದ್ವಾಂಸರೂ ಆದ ಉದಯಶಂಕರ ಭಟ್ಟ
ಇವರು ಎಸ್ . ಎ
. ಟಿ ಪ್ರೌಢ
ಶಾಲೆಯಲ್ಲಿ ನಡೆದ ಸಂಸ್ಕೃತ
ದಿನಾಚರಣೆಯ ಸಮಾರೋಪ ಕಾರ್ಯಕ್ರಮದ
ವಿಶೇಷ ಉಪನ್ಯಾಸದಲ್ಲಿ ನುಡಿದರು.
ದಿನಪೂರ್ತಿನಡೆದ
ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಶಾಲಾ ಪ್ರಭಾರ ಮುಖ್ಯೋಪಾಧ್ಯಯರಾದ
ಕೃಷ್ಣಕುಮಾರಿಯವರು ನಿರ್ವಹಿಸಿದರು
ಕಿರಿಯ ಪ್ರಾಥಮಿಕ ಶಾಲೆಯ
ಮುಖ್ಯೋಪಾಧ್ಯಯನಿ ಸುದತಿ ಟೀಚರ್
ಶುಭ ಹಾರೈಸಿದರು.
ಬೆಳಗ್ಗೆ
11 ರಿಂದ
ಸಂಸ್ಕೃತಂ ವಿಜ್ಞಾನಂ ಎ೦ಬ ವಿಷಯದಲ್ಲಿ
ಪ್ರದರ್ಶನ ಏರ್ಪಡಿಸಲಾಗಿತ್ತು.
ಶಾಲಾ ಸಂಸ್ಕೃತ
ಅಧ್ಯಾಪಕರಾದ ನಾರಾಯಣ ಗೋಪಾಲಕೃಷ್ಣ
ಹೆಗಡೆ ಪ್ರಾಸ್ತಾವಿಕವಾಗಿ
ಮಾತನಾಡಿ ಸಂಸ್ಕೃತ ದಿನಾಚರಣೆ
ಮಹತ್ವವನ್ನು ವಿದ್ಯಾರ್ಥಿಗಳಿಗೆ
ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ
ವಿದ್ಯಾರ್ಥಿಗಳೊಂದಿಗೆ ವಿಚಾರವಿನಿಮಯ
ನಡೆಸಿದರು.
ವಿದ್ಯಾರ್ಥಿಗಳಿಂದ
ವಿವಿಧ ಕಾರ್ಯಕ್ರಮಗಳು ನಡೆದವು
. ವಿದ್ಯಾರ್ಥಿನಿ
ಬದ್ರುನ್ನಿಸಾ ಕಾರ್ಯಕ್ರಮವನ್ನು
ನಿರೂಪಿಸಿದರು..
For photos
Friday, 15 August 2014
ಎಸ್.ಎ.ಟಿ ವಿದ್ಯಾಲಯ,ಮಂಜೇಶ್ವರ ಸಂಭ್ರಮದ 68ನೇ ಸ್ವಾತಂತ್ರ್ಯೋತ್ಸವ
ಮಂಜೇಶ್ವರ :
ಇಲ್ಲಿನ ಎಸ್.ಎ.ಟಿ
ವಿದ್ಯಾಲಯದಲ್ಲಿ 68ನೇ
ಸ್ವಾತಂತ್ರ್ಯೋತ್ಸವವನ್ನು ಸಡಗರ,
ಸಂಭ್ರಮದಿಂದ
ಆಚರಿಸಲಾಯಿತು.ಶಾಲಾ
ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ
ಆರಂಭಗೊಂಡಿತು.
ಶಾಲಾ
ಪ್ರಬಂಧಕರಾದ ಶ್ರೀ ದಿನೇಶ್
ಶೆಣೈ.ಎ೦
ಧ್ವಜಾರೋಹಣಗೈದು ಶುಭ ಸಂದೇಶಗಳನ್ನು
ನೀಡಿದರು.
ವಾರ್ಡ
ಸದಸ್ಯರಾದ ಶ್ರೀ ಆನಂದ ಮಾಸ್ತರ್
ಶುಭ ಕೋರಿದರು.
ಹೈಸ್ಕೂಲ್
ವಿಭಾಗದ ಪಿ.ಟಿ.ಎ
ಉಪಾಧ್ಯಕ್ಷೆ ಶ್ರೀಮತಿ ಹೆಮಲತಾ,
ಎಲ್.ಪಿ
ವಿಭಾಗದ ಪಿ.ಟಿ.ಎ
ಅಧ್ಯಕ್ಷರಾದ ಶ್ರೀ ಪುತ್ತಬ್ಬ
ಕುಂಜತ್ತೂರು,ಮದರ್
ಪಿ.ಟಿ.ಎ
ಅಧ್ಯಕ್ಷೆ ಶ್ರೀಮತಿ
ಶಾರದ,ಮುಖ್ಯೋಪಾಧ್ಯಾಯಿನಿಯವರುಗಳಾದ
ಶ್ರೀಮತಿ ಮನೋರಮಾ ಕಿಣಿ,
ಶ್ರೀಮತಿ
ಸುದತಿ.ಬಿ,ಸಲಹಾ
ಸಮಿತಿ ಸದಸ್ಯೆ ಶ್ರೀಮತಿ ಲಿಲ್ಲಿ
ಬಾಯಿ ಟೀಚರ್ ಉಪಸ್ಥಿತರಿದ್ದರು.
ಕಾರ್ಯಕ್ರಮದ
ಅಂಗವಾಗಿ ನೃತ್ಯ,ಸ್ಥಬ್ದ
ಚಿತ್ರ ಪ್ರದರ್ಶನ,ದೇಶ
ಭಕ್ತಿಗೀತೆ,ಛದ್ಮವೇಶ,ಸ್ಕೌಟ್-ಗೈಡ್
ದಳದ ಕವಾಯತುಗಳನ್ನು ನಡೆಸಲಾಯಿತು.ಹೆಚ್ಚಿನ
ಮಕ್ಕಳು,
ಸಿಬ್ಬಂದಿವರ್ಗದವರು,ಮಕ್ಕಳ
ರಕ್ಷಕರು ,
ಶಾಲಾಭಿಮಾನಿಗಳು
ಉಪಸ್ಥಿತರಿದ್ದರು.
2013-14ರ
ಸಾಲಿನಲ್ಲಿ ಎಸ್.ಎಸ್.ಎಲ್.ಸಿ
ಪರೀಕ್ಷೆಯಲ್ಲಿ ಉನ್ನತ ಅಂಕಗಳನ್ನು
ಸಂಪಾದಿಸಿದ ಪ್ರತಿಭಾನ್ವಿತರಿಗೆ
ನಗದು ಪುರಸ್ಕಾರವನ್ನೂ,
ಸ್ಪರ್ಧಾ
ವಿಜೇತರಿಗೆ ಬಹುಮಾನ ನೀಡಿ
ಪ್ರೋತ್ಸಾಹಿಸಲಾಯಿತು.
ಶಾಲಾ
ಸಮಾಜ ಶಾಸ್ತ್ರದ ಕ್ಲಬ್ಬಿನ
ಕನ್ವೀನರ್ ಶ್ರೀಮತಿ ಮೋಹಿನಿ
ಟೀಚರ್ ಸ್ವಾಗತಿಸಿದರು.ಹಿರಿಯ
ಅಧ್ಯಾಪಕರಾದ ಶ್ರೀ ಪುಂಡಲೀಕ
ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಎಸ್.ಆರ್.ಜಿ
ಸಂಚಾಲಕರಾದ ಶ್ರೀ ಕಿರಣ್ ಕುಮಾರ್
ವಂದನಾರ್ಪಣೆಗೈದರು.ತದನಂತರ
ಉದಾರ ದಾನಿಯೂ ,
ಜೋತಿಷ್ಯರಾದ
ಶ್ರೀ ಛತ್ರಪತಿ ಪ್ರಭು ಪ್ರತಿ
ವರ್ಷದಂತೆ ಈ ವರ್ಷವೂ ವಿದ್ಯಾರ್ಥಿಗಳಿಗೆ
ಸಿಹಿತಿಂಡಿಯನ್ನು ವಿತರಿಸಿದರು.
Thursday, 14 August 2014
Standard Ten Enrichment Programme in Schools
10ನೇ
ತರಗತಿಯ ವಿದ್ಯಾರ್ಥಿಗಳ ಉತ್ತಮ
ಫಲಿತಾಂಶಕ್ಕಾಗಿ 10ನೇ
ತರಗತಿಯ ವಿದ್ಯಾರ್ಥಿಗಳ ಪೋಷಕರ
ಸಭೆಯು ಎಸ್.ಎ.ಟಿ
ಶಾಲೆಯ ಅನಂತ ವಿದ್ಯಾ ಸಭಾಂಗಣದಲ್ಲಿ
ಜರುಗಿತು.
ಸುಮಾರು
2.30ಕ್ಕೆ
ಶಾಲಾ ಪ್ರಾರ್ಥನೆಯೊಂದಿಗೆ ಆರಂಭವಾದ
ಸಭೆಯು ಶ್ರೀಮತಿ ಲಿಲ್ಲಿ ಬಾಯಿ
ಟೀಚರ್ ಇವರಿಂದ ಉದ್ಘಾಟನೆಗೊಂಡು
ವಿದ್ಯಾರ್ಥಿಗಳ ಭವಿಷ್ಯದ ಕುರಿತು
ವಿಮರ್ಶಿಸಿ ಸಮಾಜದ ದುಷ್ಟ
ನಡವಳಿಕೆಗಳನ್ನು ಅಳವಡಿಸಿಕೊಳ್ಳದೇ
ಉತ್ತಮ ವಿದ್ಯಾರ್ಥಿಗಳಾಗಬೇಕೆಂದು
ಕಿವಿ ಮಾತು ಹೇಳಿದರು.ಮುಖ್ಯೋಪಾಧ್ಯಾಯಿನಿಯವರಾದ
ಶ್ರೀಮತಿ ಮನೋರಮಾ ಕಿಣಿಯವರು
ಪ್ರಾಸ್ತಾವಿಕ ಮಾತುಗಳನ್ನು
ನುಡಿದು ಶಾಲೆಯು ಉತ್ತಮ ಫಲಿತಾಂಶದೊಂದಿಗೆ
ಅಭಿವೃದ್ಧಿಹೊಂದಲು ಎಲ್ಲರ
ಸಹಕಾರವನ್ನು ಯಾಚಿಸಿದರು.ಕಳೆದ
ವರ್ಷದ ಎಸ್.ಎಸ್.ಎಲ್.ಸಿ
ಫಲಿತಾಂಶದ ವಿಶ್ಲೇಷಣೆಯನ್ನು
ಸಭೆಯ ಮುಂದಿಟ್ಟ ಶ್ರೀಮತಿ
ವಸುಧಾಲಕ್ಷ್ಮೀ ಟೀಚರ್ ರವರು ಈ
ವರ್ಷದ ಫಲಿತಾಂಶ ಉತ್ತಮ ಪಡಿಸಲು
ರಕ್ಷಕರ ಪಾತ್ರದ ಬಗ್ಗೆ
ವಿವರಿಸಿದರು.STEPS
ಯೋಜನೆಯ
ಬಗ್ಗೆ ಸಭೆಗೆ ಅಧ್ಯಾಪಕರಾದ
ಪೂರ್ಣಯ್ಯ ಪುರಾಣಿಕರು ಸವಿವರವಾಗಿ
ವಿವರಿಸಿದರು.
ಮನೆ
ಸರ್ವೆಯ ವಿಶ್ಲೇಷಣಾ ವರದಿಯನ್ನು
ಶ್ರೀಮತಿ ಆರತಿ ಟೀಚರ್ ರವರು ಸಭೆಯ
ಮುಂದಿಟ್ಟು ಮಕ್ಕಳ ಕಲಿಕೆಯ ಕಡೆಗೆ
ಹೆಚ್ಚು ಗಮನ ಕೊಡುವಂತೆ ಕರೆ
ನೀಡಿದರು.ಕ್ಲಾಸ್
ಪರೀಕ್ಷೆಯ ಗ್ರೇಡಿನ ವಿಶ್ಲೇಷಣಾ
ಪಟ್ಟಿಯನ್ನು ಸಭೆಯ ಮುಂದಿಟ್ಟು
ಕಲಿಕೆಯಲ್ಲಿ ಹಿಂದೆ ಇರುವ ಮಕ್ಕಳ
ಕಡೆಗೆ ಗಮನ ಹರಿಸಬೇಕಾದ ಅಗತ್ಯತೆಯ
ಬಗ್ಗೆ ಹೇಳಿದರು.SSLC
ಫಲತಾಂಶ
2014-15
ಕಾರ್ಯಯೋಜನೆಯನ್ನು
ಶ್ರೀ ಶಿವಾನಂದ ಅರಿಬೈಲು ಇವರು
ಮಂಡಿಸಿದರು .
ಮನೆ ಸರ್ವೆಯ
ವಿಶ್ಲೇಷಣಾ ಪಟ್ಟಿಯ ಆಧಾರದಲ್ಲಿ
ಈ ಕೆಳಗಿನ ಸಲಹೆಗಳು ಮಕ್ಕಳ ರಕ್ಷಕರ
ಕಡೆಯಿಂದ ಬಂದವು.
. ಮಕ್ಕಳು
ಕಲಿಕೆಯಲ್ಲಿ ಹಿಂದಿರುವ ವಿಷಯವನ್ನು
ನೆರೆಹೊರೆಯವರ ಸಹಾಯದಿಂದ ಕಲಿಸುವುದು.
- ಹೆತ್ತವರು T.V ನೋಡುವುದನ್ನು ನಿಲ್ಲಿಸಬೇಕು.
- ಮನೆಯಲ್ಲಿರುವ ದೊಡ್ಡ ಮಕ್ಕಳಲ್ಲಿಯೂ ನಿಗಾವಹಿಸುವಂತೆ ಹೇಳುವುದು.
- ಸಮಯಕ್ಕೆ ಸರಿಯಾಗಿ ಶಾಲೆಗೆ ಕಳುಹಿಸುವುದು.
- ಬೆಳಿಗ್ಗೆ 5 ಗಂಟೆಗೆ ಎಬ್ಬಿಸಿ ಓದಿಸುವುದು.
- ರಜಾ ದಿನಗಳಲ್ಲಿ ಓದುವಂತೆ ನೋಡಿಕೊಳ್ಳುವುದು.
- ಪೂರಕ ಸಾಮಾಗ್ರಿಗಳನ್ನು ಒದಗಿಸುವುದು.
- ತಿಂಗಳಿಗೊಮ್ಮೆ ಪರೀಕ್ಷೆ,ಕ್ಲಾಸ್ P.T.A ನಡೆಸುವುದು.
- ಸಂಪನ್ಮೂಲ ವ್ಯಕ್ತಿಗಳಿಂದ ಕ್ಲಾಸುಗಳನ್ನು ನಡೆಸುವುದು.
- ಕೆರಿಯರ್ ಗೈಡೆನ್ಸ್ ಕ್ಲಾಸುಗಳನ್ನು ನಡೆಸುವುದು.
- ಶನಿವಾರ ತರಗತಿ ನಡೆಸುವ ಬಗ್ಗೆ ಯೋಜನೆ.
- ಮನೆ ಸಂದರ್ಶನ.
- ದಿನಂಪ್ರತಿ ಒಂದೊಂದು ಪಾಠದ ಕುರಿತು ಒಂದು ಪುಟ ಬರೆದು ತೋರಿಸುವಂತೆ ಮಾಡುವುದು.ಕೈಗೊಂಡ ನಿರ್ಣಯಗಳು1 ದಿನಂಪ್ರತಿ ಒಂದೊಂದು ಪಾಠದ ಕುರಿತು ಒಂದು ಪುಟ ಬರೆದು ತೋರಿಸುವಂತೆ ಮಾಡುವುದು.2 ಕ್ಲಾಸ್ ಪರೀಕ್ಷೆಗೆ ತಡವಾಗಿ ಬರುವವರು,ಕ್ಲಾಸಿಗೆ ತಡವಾಗಿ ಬರುವವರು,ಕೋಚಿಂಗ್ ಕ್ಲಾಸಿಗೆತಡವಾಗಿ ಬರುವವರನ್ನು ಕಾರಣ ಕೇಳಿ ಪರೀಕ್ಷೆಗೆ ಒಂದನೇ ಸಲ ಎಚ್ಚರಿಕೆಯನ್ನಿತ್ತು ಅವಕಾಶವನ್ನು ನೀಡುವುದು. ಮತ್ತೂ ತಡವಾಗಿ ಬಂದಲ್ಲಿ ರಕ್ಷಕರ ಬರಲು ಹೇಳಿ ಇನ್ನು ಮುಂದೆ ಹಾಗೆ ಆಗದಂತೆ ನೋಡಿಕೊಳ್ಳುವುದು. ಕಡೆಗೂ ಇದೇ ಪ್ರವೃತ್ತಿ ಮುಂದುವರೆದಲ್ಲಿ P.T.Aಯವರ ಗಮನಕ್ಕೆತರುವುದು.ಮುಂದಿನ ಕ್ರಮವನ್ನು ಕೈಗೊಳ್ಳುವರೇ ಆಗಿರುತ್ತಾರೆ.3 D ಗ್ರೇಡಿನ ಮಕ್ಕಳ ಶಿಕ್ಷಣದ ಜವಾಬ್ಧಾರಿಯನ್ನು ಮನೆಯಲ್ಲಿ ಹೆತ್ತವರೇ ನೋಡಿಕೊಳ್ಳುವುದು. ಶಾಲೆಯ ವೇಳಾ ಪಟ್ಟಿಯಂತೆ ಮನೆಯಲ್ಲಿಯೂ ಕೂಡಾ ವೇಳಾ ಪಟ್ಟಿಯನ್ನು ಮಾಡಿಕೊಂಡು ಓದುವಂತೆ ನೋಡಿಕೊಳ್ಳುವುದು.4 ಹೆತ್ತವರು ಕಾಳಜಿ ವಹಿಸುವುದು.5 ಯಾವುದೇ ಸಮಸ್ಯೆಇದ್ದಲ್ಲಿ ಟೀಚರುಗಳಲ್ಲಿ ಮುಖತಃ ಚರ್ಚಿಸಿ ಪರಿಹಾರಗಳನ್ನು ಕಂಡುಕೊಳ್ಳುವುದು.6 ಬೇಕಾದ ಎಲ್ಲಾ ಸಹಾರಗಳನ್ನು P.T.A ನೀಡುತ್ತದೆ.7 ಇಂದಿನ ಸಭೆಯಲ್ಲಿ ಗೈರು ಹಾಜರಾದ ಹೆತ್ತವರು ತಾರೀಕು 18-08-2014 ರಂದುಶಾಲೆಗೆ ಬಂದು ಕ್ಲಾಸು ಅಧ್ಯಾಪಕರನ್ನು ಕಂಡು ವಿಷಯಗಳನ್ನು ತಿಳಿದುಕೊಳ್ಳಬೇಕು.ತದನಂತರವೇ ಮಕ್ಕಳನ್ನು ಕ್ಲಾಸುಗಳಿಗೆ ತೆಗೆದುಕೊಳ್ಳವುದೆಂದು ತೀರ್ಮಾನಿಸಲಾಯಿತು.ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ರಕ್ಷಕ ಸಭೆಗಳಲ್ಲಿಎಲ್ಲಾ ರಕ್ಷಕರುಹಾಜರಿರಬೇಕು.ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ನಿತಿನ್ ಚಂದ್ರ ಪೈಯವರು ಮಾತನಾಡಿ ಸಾಂಘಿಕ ಪ್ರಯತ್ನದಲ್ಲಿ ಎಂದೆಂದಿಗೂ ಸಫಲತೆ ಇದೆ ಎಂದು ನುಡಿದು ರಕ್ಷಕ ಶಿಕ್ಷಕ ಸಂಘದ ಎಲ್ಲಾ ಸಹಕಾರವನ್ನು ವಾಗ್ಧಾನ ಮಾಡಿದರು.ಸಭೆಯಲ್ಲಿ ಉಪಾಧ್ಯಕ್ಷರಾದ ಶ್ರೀಮತಿ ಹೇಮಲತಾ,ಶ್ರೀ ರಮಾನಂದ ಶೆಟ್ಟಿ,ಮೊಹಮ್ಮದ್ ಮುಸ್ತಾಫಾ,ಬೀಫಾತಿಮಾ ಮತ್ತಿತರರು ಸಲಹೆ ಸೂಚನೆಗಳನ್ನು ಇತ್ತು ರಕ್ಷಕರ ಜವಾಬ್ದಾರಿಗಳನ್ನು ಸಭೆಯ ಮುಂದಿಟ್ಟರು.ಎಸ್.ಆರ್.ಜಿ ಸಂಚಾಲಕರಾದ ಶ್ರೀ ಕಿರಣ್ ಕುಮಾರ್ ರವರು ರಕ್ಷಕರ ಉಪಸ್ಥಿತಿಯನ್ನು ಅವಲೋಕನ ಮಾಡಿ ತುಂಬಾ ರಕ್ಷಕರ ಗೈರು ಹಾಜರಿಯನ್ನು ಸಭೆಯ ಗಮನಕ್ಕೆತಂದುಕೊಟ್ಟು, ಧನ್ಯವಾದದೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.
Subscribe to:
Posts (Atom)
2022
ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.
-
ಎಸ್ . ಎ . ಟಿ ಶಾಲೆಯಲ್ಲಿ ಓಣಂ ಹಬ್ಬದ ಆಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಂದ ಪುಕ್ಕಳಂವನ್ನು ರಚಿಸಿ ಓಣಂ ಹಬ್ಬದ ಸಂಬ್ರಮವನ್ನು ಆಚರಿಸಲಾಯಿತು . View all Get...
-
ವಿಶ್ವ ಮಾದಕ ವಸ್ತು ವಿರೋಧಿ ದಿನ SAT ಅನಂತವಿದ್ಯಾ ಸಭಾಂಗಣದಲ್ಲಿ excise ಆಫೀಸರ್ ರಾಮ ಅವರ ನೇತೃತ್ವ ದಲ್ಲಿ ಸೆಮಿನಾರ್ ನಡೆಸಲಾಯಿತು .ಶಾಲಾ ಮುಖ್ಯೋಪಾಧ್ಯಾಯಿ...
-
ಇತ್ತೀಚೆಗೆ 2018ನೇ ಸಾಲಿನ ಎಸ್ .ಎ.ಟಿ.ಪ್ರೌಢಶಾಲೆಯಲ್ಲಿ ಶಾಲಾ ಕಲೋತ್ಸವ ಹಾಗೂ ಕ್ರೀಡೋತ್ಸವದಲ್ಲಿ ಜರುಗಿತು.
