Friday, 22 August 2014

ಸಂಸ್ಕೃತ ದಿನಾಚರಣೆ 2014


ಎಸ್ . . ಟಿ ಪ್ರೌಢ ಶಾಲೆಯಲ್ಲಿ ಸಂಸ್ಕೃತ ದಿನಾಚರಣೆ
ಸಂಸ್ಕೃತ ಕಲಿಕೆಯಿಂದ ಸಮಾಜದಲ್ಲಿ ಸತ್ಪ್ರಜೆಗಳ ನಿರ್ಮಾಣ ಸಾದ್ಯ ಎಂದು ನಿವೃತ್ತ ಮುಖ್ಯೋಪಾಧ್ಯಯರೂ ಸಂಸ್ಕೃತ ವಿದ್ವಾಂಸರೂ ಆದ ಉದಯಶಂಕರ ಭಟ್ಟ ಇವರು ಎಸ್ . . ಟಿ ಪ್ರೌಢ ಶಾಲೆಯಲ್ಲಿ ನಡೆದ ಸಂಸ್ಕೃತ ದಿನಾಚರಣೆಯ ಸಮಾರೋಪ ಕಾರ್ಯಕ್ರಮದ ವಿಶೇಷ ಉಪನ್ಯಾಸದಲ್ಲಿ ನುಡಿದರು. ದಿನಪೂರ್ತಿನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಭಾರ ಮುಖ್ಯೋಪಾಧ್ಯಯರಾದ ಕೃಷ್ಣಕುಮಾರಿಯವರು ನಿರ್ವಹಿಸಿದರು ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯನಿ ಸುದತಿ ಟೀಚರ್ ಶುಭ ಹಾರೈಸಿದರು.
ಬೆಳಗ್ಗೆ 11 ರಿಂದ ಸಂಸ್ಕೃತಂ ವಿಜ್ಞಾನಂ ಎ೦ಬ ವಿಷಯದಲ್ಲಿ ಪ್ರದರ್ಶನ ಏರ್ಪಡಿಸಲಾಗಿತ್ತು. ಶಾಲಾ ಸಂಸ್ಕೃತ ಅಧ್ಯಾಪಕರಾದ ನಾರಾಯಣ ಗೋಪಾಲಕೃಷ್ಣ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಕೃತ ದಿನಾಚರಣೆ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ವಿಚಾರವಿನಿಮಯ ನಡೆಸಿದರು. ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮಗಳು ನಡೆದವು . ವಿದ್ಯಾರ್ಥಿನಿ ಬದ್ರುನ್ನಿಸಾ ಕಾರ್ಯಕ್ರಮವನ್ನು ನಿರೂಪಿಸಿದರು.. 
For photos  

No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.