Saturday, 3 June 2017

ಪ್ರವೇಶೋತ್ಸವ 2017 - 18



ಶಾಲಾ ಪ್ರವೇಶೋತ್ಸವ - 2017

ಎಸ್.. ಟಿ ಪ್ರೌಢ ಶಾಲಾ ಪ್ರವೇಶೋತ್ಸವು ಪೂರ್ವಹ್ನ 9.30 ಕ್ಕೆ ಸರಿಯಾಗಿ ಶಾಲಾ ಅಸೆಂಬ್ಲಿಯ ನಂತರ ಅದ್ದೂರಿಯಾದ ಮೆರವಣಿಗೆಯೊಂದಿಗೆ ಆರಂಭವಾಯಿತು. 5ನೇ ತರಗತಿ ಹಾಗೂ ಇತರ ತರಗತಿಗೆ ದಾಖಲಾದ ನೂತನ ವಿದ್ಯಾರ್ಥಿಗಳನ್ನು ಮೆರವಣಿಗೆಯಲ್ಲಿ ಶಾಲಾ ಸಭಾಂಗಕ್ಕೆ ಬರಮಾಡಿಕೊಳ್ಳಲಾಯ್ತು. ಪಂಚಾಯತ್ ವಾರ್ಡ್ ಸದಸ್ಯೆ ಸುಪ್ರಿಯ ಶೆಣೈಯವರು ಶಾಲಾ ಪ್ರವೇಶೋತ್ಸವವನ್ನು ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಕೃಷ್ಣ ಕುಮಾರಿಯವರು ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳಿಗೆ ಹಿತವಚನವನ್ನು ನೀಡಿದರು. ರಕ್ಷಕ ಶಿಕ್ಷಕ ಸಂಘದ ಅದ್ಯಕ್ಷ ಅಬ್ದುಲ್ ಬಶೀರ್ ಶುಭಾಶಂಸೆಗೈದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿ ನಡೆಯಿತು. ಹಿರಿಯ ಶಿಕ್ಷಕ ಮುರಳಿ ಕೃಷ್ಣ ಎನ್ . ಸ್ವಾಗತಿಸಿದರೆ ಕನ್ನಡ ಶಿಕ್ಷಕಿ ಆರತಿ ವಂದಿಸಿದರು. ಸಿಬ್ಬಂದಿ ವರ್ಗದ ಕಾರ್ಯದರ್ಶಿ ಜಿ. ವಿರೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.