Tuesday, 2 December 2014

ಪಶುಸಂಗೋಪನಾ ಇಲಾಖೆಯ ವತಿಯಿಂದ ಉಚಿತ ಕೋಳಿ ವಿತರಣೆ


ಪಶುಸಂಗೋಪನಾ ಇಲಾಖೆಯ ವತಿಯಿಂದ ಉಚಿತ ಕೋಳಿ ವಿತರಣಾ ಕಾರ್ಯಕ್ರಮವು ತಾ| 02/12/2014 ರಂದು ಎಸ್..ಟಿ ಶಾಲೆಯಲ್ಲಿ ಜರುಗಿತು. ವೆಟರ್ನರಿ ಹೋಸ್ಪಿಟಲ್,ಮಂಜೇಶ್ವರದ ಡಾ| ಬಾಲಚಂದ್ರ ರಾವ್ ಕೋಳಿಗಳನ್ನು ವಿತರಿಸುವ ಮೂಲಕ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲಾ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಮನೋರಮಾ ಕಿಣಿ ಕೋಳಿಗಳಿಗಿರುವ ಆಹಾರದ ಕಿಟ್ ನ್ನು ವಿತರಿಸಿದರು.ಕಾರ್ಯಕ್ರಮದಲ್ಲಿ ಶ್ರೀ ಶ್ಯಾಮಕೃಷ್ಣ ಪ್ರಕಾಶ್,ಶ್ರೀ ಲಕ್ಷ್ಮೀದಾಸ್ ಪ್ರಭು ಉಪಸ್ಥಿತರಿದ್ದರು.ಶ್ರೀಮತಿ ಸರ್ವೇಶ್ವರಿ ಟೀಚರ್ ಸ್ವಾಗತಿಸಿ, ಶ್ರೀಮತಿ ಸುಮತಿ ಟೀಚರ್ ವಂದಿಸಿದರು.ಕಾರ್ಯಕ್ರಮದಲ್ಲಿ ಪಶುಸಂಗೋಪನಾ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು. 50ವಿದ್ಯಾರ್ಥಿಗಳಿಗೆ 5 ರಂತೆ 250 ಕೋಳಿಗಳನ್ನು ವಿತರಿಸಲಾಯಿತು.

No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.