Tuesday, 21 July 2015

Friday, 3 July 2015

ಎಸ್. . ಟಿ ಪ್ರೌಢ ಶಾಲೆಯಲ್ಲಿ ಬಯೋಗ್ಯಾಸ್ ಘಟಕದ ಉದ್ಘಾಟನೆ

ಮಂಜೇಶ್ವರ – ಸ್ಥಳೀಯ ಎಸ್ . .ಟಿ ಪ್ರೌಢ ಶಾಲೆಯ ಪರಿಸರ ಸಂಘ ಮತ್ತು ಮಂಜೇಶ್ವರದ ಕೃಷಿ ಇಲಾಖೆಯ ಜಂಟಿ ಆಶ್ರಯದಲ್ಲಿ ಬಯೋಗ್ಯಾಸ್ ಘಟಕದ ಉದ್ಘಾಟನೆಯು ಶಾಲಾ ಅನಂತ ವಿದ್ಯಾ ಸಭಾಂಗಣದಲ್ಲಿ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಮುಮ್ತಾಝ್ ಸೆಮಿರಾ ಅವರು ನೆರವೇರಿಸಿ , ಸ್ವಚ್ಛತೆಯ ಬಗ್ಗೆ ತಿಳಿಹೇಳಿ ಶುಭ ಹಾರೈಸಿದರು.
ಉಪ ಕೃಷಿ ನಿರ್ದೇಶಕರಾದ ಅಬೂಬ್ಬಕ್ಕರ್ ಹಾಗೂ ಸಹಾಯಕ ಕೃಷಿ ಅಧಿಕಾರಿಯಾದ ಅಂಬುಜಾಕ್ಷನ್ ಶುಭಾಶಂಸನೆ ಗೈದರು. ಸಭಾಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿಯಾದ ಮನೋರಮ ಕಿಣಿ ವಹಿಸಿದರು. ಪರಿಸರ ಸಂಘದ ಉಪಸಂಚಾಲಕರಾದ ಶ್ಯಾಮಕೃಷ್ಣ ಪ್ರಕಾಶ್ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಕೃಷ್ಣ ಕುಮಾರಿ ಟೀಚರ್ ಪ್ರಸ್ತಾವನೆಗೈದರು. ಈ ಸಂದರ್ಭದಲ್ಲಿ ರಕ್ಷಕ – ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಹೇಮಲತ , ಎಸ್ .ಆರ್.ಜಿ. ಸಂಚಾಲಕರಾದ ದಾಸಪ್ಪ ರೈ , ಶಿಕ್ಷಕರಾದ ಜಯ ಪ್ರಕಾಶ್ ಶೆಟ್ಟಿ , ಅಜಿತ್ ಕುಮಾರ್ , ಮೋಹಿನಿ ಟೀಚರ್ , ವಸುಧಾ ಲಕ್ಷ್ಣಿ ಟೀಚರ್ , ಉಪಸ್ಥಿತರಿದ್ದರು. ಕೊನೆಯಲ್ಲಿ ಪರಿಸರ ಸಂಘದ ಸಂಚಾಲಕರಾದ ಕಿರಣ್ ಕುಮಾರ್ ವಂದನಾರ್ಪಣೆ ಗೈದರು.ಶಾಲಾಶಿಕ್ಷಕ ಸಂಘದ ಕಾರ್ಯದರ್ಶಿ ವೀರೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು.

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.