Friday, 3 June 2022

2022












  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.

Monday, 29 July 2019

ಎಸ್ ಎ ಟಿ ಪ್ರೌಢಶಾಲೆಯಲ್ಲಿ ಪೆನ್ ಡ್ರೋಪ್ ಉದ್ಘಾಟಿಸಿದ ಮುಖ್ಯೋಪಾಧ್ಯಾಯರಾದ ಶ್ರೀ  ಮುರಳಿಕೃಷ್ಣ ಮತ್ತು ಅಧ್ಯಾಪಕರಾದ ಜಯಪ್ರಕಾಶ್ ಶೆಟ್ಟಿ ಬೇಳ, ನಾರಾಯಣ ಗೋಪಾಲಕೃಷ್ಣ ಹೆಗಡೆ,  ಮತ್ತು ವಿದ್ಯಾರ್ಥಿಗಳು .

Saturday, 20 July 2019

ಪಿ.ಟಿ.ಎ.ಜನರಲ್ ಬೋಡಿ ಮೀಟಿಂಗ್ 2019-20

ಎಸ್. ಎ.ಟಿ ಪ್ರೌಢಶಾಲೆಯ ವಿದ್ಯಾರ್ಥಿಗಳು ನೇಜಿ ನೆಡುವ ಮೂಲಕ ಕೃಷಿಯ ಮಹತ್ವದ ಬಗ್ಗೆ ಮಾಹಿತಿ ಪಡೆದರುತಾರೀಕು 12/7/19 ರಂದು ಮಂಜೇಶ್ವರದ ಎಸ್ ಎ ಟಿ ಶಾಲೆಯ ಸ್ಕೌಟ್ ಗೈಡ್ ದಳದ ವಿದ್ಯಾರ್ಥಿಗಳಿಗೆ ಕೃಷಿಯಲ್ಲಿ ಒಲವು ಮೂಡಿಸುವ ಉದ್ದೇಶದಿಂದ ಶ್ರೀಮದ್ ಅನಂತೇಶ್ವರ ದೇವಳದ ಗದ್ದೆಯಲ್ಲಿ  ಮಕ್ಕಳೊಂದಿಗೆ ನೇಜಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
      ಕೃಷಿಕರಾದ ಸದಾಶಿವ ಮೂಲ್ಯರ ನೇತೃತ್ವದಲ್ಲಿ ಮಕ್ಕಳು ನೇಜಿನೆಡುವ ಪ್ರಾತ್ಯಕ್ಷಿಕೆ ಪಡೆದರು.ಈ ಸಂದರ್ಭದಲ್ಲಿ ಮಂಜೇಶ್ವರದ ಸಹಾಯಕ ಕೃಷಿ ಅಧಿಕಾರಿಯಾದ ಶ್ರೀ ಶಶೀ0ದ್ರನ್ ಮತ್ತು ಶಿವಪ್ರಸಾದ್ ಕೃಷಿಯಬಗ್ಗೆ ಹೆಚ್ಚಿನ ಮಾಹಿತಿಯನ್ನು ಮಕ್ಕಳಿಗೆ ನೀಡಿದರು. ಶಾಲೆಯ ಪ್ರಾಂಶುಪಾಲರಾದ ಶ್ರೀ ಮುರಳಿಕೃಷ್ಣ ಎನ್ ,ಗೈಡ್ ಅಧ್ಯಾಪಿಕೆಯರಾದ  ಶ್ರೀಮತಿ ಸುಕನ್ಯಾ ಕೆ ಟಿ ,ಶ್ರೀಮತಿ ಉಷಾ ಕುಮಾರಿ ,ಸ್ಕೌಟ್ ಅಧ್ಯಾಪಕ  ಶ್ರೀ ಲಕ್ಷ್ಮೀ ದಾಸ್ ಪ್ರಭು ಸಹಕರಿಸಿದರು.
ವಾಚನಾ ಪಕ್ಷಾಚರಣೆ ,ಎಸ್.ಎ.ಟಿ.ಪ್ರೌಢ ಶಾಲೆ ಎಸ್.ಎ.ಟಿ.ಪ್ರೌಢ ಶಾಲೆ ಮಂಜೇಶ್ವರ 
 ತಾ.19.6.19   ರಂದು ಪಿ.ಎನ್. ಪಣಿಕ್ಕರ್ ಸಂಸ್ಮರಣ ದಿನದ ಅಂಗವಾಗಿ ವಾಚನಾ ಪಕ್ಷಾಚರಣೆ  ಎಂಬ ಕಾರ್ಯಕ್ರಮ ನಡೆಯಿತು.
 ಈ ಸಂದರ್ಭದಲ್ಲಿ ಸ್ಟಾಪ್ ಕಾರ್ಯದರ್ಶಿ ಈಶ್ವರ ಕಿದೂರ್ ,ಕಿರಣ್ ಮಾಸ್ಟರ್,ಪರಮೇಶ್ವರೀ ಟೀಚರ್,ಎಸ್.ಆರ್.ಜಿ.ನಾರಾಯಣ
ಗೋಪಾಲಕೃಷ್ಣ ಹೆಗಡೆ, ಆರತಿ ಟೀಚರ್, ಜೆ.ಪಿ.ಶೆಟ್ಟಿ ಬೇಳ  ಉಪಸ್ಥಿತರಿದ್ದರು. ಆರತಿ ಟೀಚರ್ ಅವರು ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳಿಗೆ  ನಂತರ ಶಾಲಾವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಲಾಯಿತು ಮತ್ತು ಪುಸ್ತಕ ಪ್ರದರ್ಶನ  ರಸಪ್ರಶ್ನೆ ಸ್ಪರ್ಧೆಗಳ ನ್ನು ನಡೆಸಲಾಯಿತು. 
 ಮಂಜೇಶ್ವರ ಎಸ್. ಎ.ಟಿ ಹೈಸ್ಕೂಲಿನಲ್ಲಿ ಯೋಗ ದಿನಾಚರಣೆ ವಿಶ್ವಯೋಗದಿನಾಚರಣೆ
ಎಸ್  ಎ  ಟಿ ಪ್ರೌಢಶಾಲೆಯಲ್ಲಿ ಯೋಗದಿನಾಚರಣೆಯು   ಸಂಭ್ರಮ ದಿಂದ ಜರುಗಿತು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಯೋಗಸಪ್ತಾಹಶಿಬಿರವನ್ನು ಯೋಗಾಚಾರ್ಯರಾದ ಶ್ರೀ ಸದಾಶಿವ  ಕಡಂಬಾರು ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಇಂದು ಮಾತ್ರವಲ್ಲ ಪ್ರತಿದಿನವೂ ಯೋಗ ಮಾಡಬೇಕು ಎಂದು ವಿವರಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಮುರಳಿಕ್ರಷ್ಣ ಅವರು ಮೂಲ ಉದ್ದೇಶ ವನ್ನು ತಿಳಿಸಿಹೇಳಿದರು. ಅನಂತರ ಯೋಗಾಧ್ಯಾಪಕ ಶ್ರೀ ಸದಾಶಿವರು ಒಂದು ತಾಸು ಯೋಗ ಶಿಬಿರ ನಡೆಸಿ ಒಂದು ವಾರದ ಶಿಬಿರಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಪಲ್ಲವಿ ಮತ್ತು ಮೇಘಶ್ರೀ ಇವರ ಪ್ರಾರ್ಥನೆ ಹಾಗೂ ಶಾಲಾ ಸಿಬ್ಬಂದಿ ಕಾರ್ಯದರ್ಶಿ ಶ್ರೀ ಈಶ್ವರ  ಮಾಸ್ಟರ್ ರವರ ಸ್ವಾಗತದೊಂದಿಗೆ ಆರಂಭವಾದ ಕಾರ್ಯಕ್ರಮ .ಶಾಲಾ ಪ್ರೌಢಶಾಲಾ ಎಸ್ ಆರ್ ಜೀ ಸಂಚಾಲಕ ಶ್ರೀ ನಾರಾಯಣ ಗೋಪಾಲಕೃಷ್ಣ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಶಾಲಾ ದೈಹಿಕ ಶಿಕ್ಷಕ ಶ್ರೀ ಶ್ಯಾಮಕ್ರಷ್ಣ ಪ್ರಕಾಶ್,ಕಲಾ ಅಧ್ಯಾಪಕ ಶ್ರೀ  ಜಯಪ್ರಕಾಶ್ ಶೆಟ್ಟಿ ಬೇಳ, ಮಹೇಶ್ .ಕೆ.ವಿ., ಅಜಿತ್ ಕುಮಾರ್   ಹಾಗೂ ಇತರ ಅಧ್ಯಾಪಕರು ಸಹಕರಿಸಿ ಶಾಲಾ ಯು. ಪಿ .ಎಸ್ .ಆರ್. ಜಿ.ಸಂಚಾಲಕರಾದ  ಶ್ರೀ ಗಣೇಶ್ ಸರ್ ರವರ ಧನ್ಯವಾದದೊಂದಿಗೆ ಮುಕ್ತಾಯ ವಾಯಿತು

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.